»   » ಈ ಬಾರಿಯ 'ಬಿಗ್ ಬಾಸ್'ನಲ್ಲಿ ಇವರೆಲ್ಲಾ ಇರ್ತಾರಂತೆ.!

ಈ ಬಾರಿಯ 'ಬಿಗ್ ಬಾಸ್'ನಲ್ಲಿ ಇವರೆಲ್ಲಾ ಇರ್ತಾರಂತೆ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ' 5ನೇ ಆವೃತ್ತಿಗೆ ಸಕಲ ಸಿದ್ದತೆಗಳು ನಡೆಯುತ್ತಿದೆ. ತಮಿಳು ಹಾಗೂ ತೆಲುಗಿನಲ್ಲಿ ಚೊಚ್ಚಲ ಬಾರಿಗೆ 'ಬಿಗ್ ಬಾಸ್' ಶುರುವಾಗಿದೆ. ಈಗ ಬಾಲಿವುಡ್ ನಲ್ಲಿ 11 ಆವೃತ್ತಿಯ 'ಬಿಗ್ ಬಾಸ್' ಗೆ ಕೌಂಡೌನ್ ಶುರುವಾಗಿದೆ.

ಬಾಲಿವುಡ್ 'ಬಿಗ್ ಬಾಸ್' ನಲ್ಲಿ ಈ ಬಾರಿ ಯಾರೆಲ್ಲಾ ಭಾಗವಹಿಸುತ್ತಾರೆ ಎಂಬ ಸಂಭಾವನೀಯ ಪಟ್ಟಿ ಬಿಡುಗಡೆಯಾಗಿದೆ. ಈಗಾಗಲೇ ಬಿಗ್ ಮನೆಗೆ ಸೇರಲು ಈ ಕಲಾವಿದರು ಸಜ್ಜಾಗಿದ್ದಾರೆ ಎನ್ನಲಾಗಿದೆ.

ನಿರೀಕ್ಷೆಯಂತೆ ಬಾಲಿವುಡ್ ನಲ್ಲಿ ಜನ ಸಾಮಾನ್ಯರು ಮತ್ತು ಸೆಲೆಬ್ರಿಟಿಗಳು 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಆದ್ರೆ, ಸೆಲೆಬ್ರಿಟಿ ಪಟ್ಟಿಯಲ್ಲಿ ಯಾವೆಲ್ಲಾ ಕಲಾವಿದರ ಹೆಸರು ಕೇಳಿ ಬರುತ್ತಿದೆ ಎಂದು ಮುಂದೆ ಓದಿ.....

ಡಿಂಕ್ ಚಕ್ ಪೂಜಾ

ಡಿಂಕ್ ಚಕ್ ಪೂಜಾ, ಸೋಶಿಯಲ್ ಮೀಡಿಯಾದಲ್ಲಿ ಹಾಡುಗಳನ್ನ ಹಾಡುವುದರ ಮೂಲಕ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ. ಮೂಲ ಹಾಡಿಗೆ ತನ್ನದೇ ಸಾಹಿತ್ಯ ಬಳಸಿ ವಿವಾದ ಹುಟ್ಟುಹಾಕಿರುವ ಉದಾಹರಣೆಗಳು ಹೆಚ್ಚಿವೆ.

ಸುನೀಲ್ ಗ್ರೋವರ್

ಕಪಿಲ್ ಶರ್ಮಾ ಶೋನಿಂದ ಹೊರ ಬಂದು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ ಹಾಸ್ಯ ನಟ ಸುನೀಲ್ ಗ್ರೋವರ್ ಹೆಸರು 'ಬಿಗ್ ಬಾಸ್' ಸಂಭಾವನೀಯ ಪಟ್ಟಿಯಲ್ಲಿದೆ. ಕಳೆದ ಬಾರಿ ಕೂಡ ಸುನೀಲ್ ಗ್ರೋವರ್ ಹೆಸರು ಕೇಳಿ ಬಂದಿತ್ತು.

ಕುಸ್ತಿ ಪಟು ಗೀತಾ ಫೋಗಟ್

2010ರ ಕಾಮನ್ ವೆಲ್ತ್ ಗೇಮ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ತಂದ ಕುಸ್ತಿಪಟು ಗೀತಾ ಫೋಗಟ್ ಹೆಸರು 'ಬಿಗ್ ಬಾಸ್' ನಲ್ಲಿ ಹರಿದಾಡುತ್ತಿದೆ.

ದೇವೊಲೀನಾ ಭಟ್ಟಾಚಾರ್ಜಿ

ಕಿರುತೆರೆ ನಟಿ ದೇವೊಲೀನಾ ಭಟ್ಟಾಚಾರ್ಜಿ ಅವರ ಹೆಸರು ಕೂಡ ಈ 'ಬಿಗ್ ಬಾಸ್' ಪಟ್ಟಿಯಲ್ಲಿ ವರದಿಯಾಗಿದೆ.

ಕಾರ್ತಿಕ್ ಆರ್ಯನ್

'Pyaar Ka Punchnama' ಚಿತ್ರದ ಮೂಲಕ ಖ್ಯಾತಿ ಗಳಿಸಿಕೊಂಡ ನಟ ಕಾರ್ತಿಕ್ ಆರ್ಯನ್ ಹೆಸರು ಕೂಡ 'ಬಿಗ್ ಬಾಸ್' ಸಂಭಾವನೀಯ ಪಟ್ಟಿಯಲ್ಲಿ ತಳುಕು ಹಾಕಿಕೊಂಡಿದೆ.

ದಿವ್ಯಾಂಕ ತ್ರಿಪಾಠಿ

ಕಿರುತೆರೆ ಜಗತ್ತಿನ ಖ್ಯಾತ ನಟಿ ದಿವ್ಯಾಂಕ ತ್ರಿಪಾಠಿ ಅವರ ಹೆಸರು ಈ ಬಾರಿಯ ಬಿಗ್ ಬಾಸ್ ನಲ್ಲಿ ಕೇಳಿ ಬರುತ್ತಿದೆ.

ಮೋಹಿತ್ ಮಲ್ಹೋತ್ರ

ಜನಪ್ರಿಯ ಕಿರುತೆರೆ ನಟ ಮೋಹಿತ್ ಮಲ್ಹೋತ್ರ ಹಿಂದಿ ಬಿಗ್ ಬಾಸ್ ಗೆ ಕಾಲಿಡುತ್ತಾರೆ ಎಂಬ ಸುದ್ದಿಗಳು ಗಿರಿಗಿಟ್ಲೆ ಹೊಡಿತಿದೆ.

ಪರೇಶ್ ರಾವಲ್

ಬಾಲಿವುಡ್ ಹಿರಿಯ ನಟ ಪರೇಶ್ ರಾವಲ್ ಬಿಗ್ ಬಾಸ್ 11 ನೇ ಆವೃತ್ತಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಅಂತೆ.

ಜೆನ್ನಿಫರ್ ವಿಂಗ್ಟ್

ಸಿನಿಮಾ ನಟಿ ಹಾಗೂ ಕಿರುತೆರೆ ನಟಿ ಜೆನ್ನಿಫರ್ ವಿಂಗ್ಟ್ ಅವರ ಹೆಸರು ಹಿಂದಿ ಬಿಗ್ ಬಾಸ್ ನಲ್ಲಿ ರೌಂಡ್ ಹೊಡಿತಿದೆ.

ಅಂಕಿತಾ ಲೋಖಾಂಡೆ

ಖ್ಯಾತ ನಟಿ ಹಾಗೂ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಪ್ರಿಯತಮೆ ಅಂಕಿತಾ ಲೋಖಾಂಡೆ ಅವರು ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ.

English summary
Bigg Boss 11: Salman Khan's show this season may witness these 10 celebrity contestants vying for Top Prize

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada