ಮೂರನೇ ಮಗುವಿನ ನಿರೀಕ್ಷೆಯಲ್ಲಿ ರಿತೇಶ್, ಜೆನಿಲಿಯಾ!: ಫೋಟೋದಲ್ಲಿ ಫ್ಯಾನ್ಸ್ ಗುರುತಿಸಿದ್ದೇನು?

ಬಾಲಿವುಡ್‌ನ ಅತ್ಯಂತ ಫೇಮಸ್ ಜೋಡಿಗಳಲ್ಲಿ ಒಂದಾದ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಮತ್ತೆ ಸುದ್ದಿಯಲ್ಲಿದ್ದಾರೆ. ಇಬ್ಬರು ಮುದ್ದಾದ ಮಕ್ಕಳಾದ ರಿಯಾನ್ ಮತ್ತು ರಾಹಿಲ್‌ನ ತಂದೆ ತಾಯಿಯಾಗಿರುವ ಇವರು ಈಗ ಮತ್ತೊಂದು ಮಗುವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

ಶನಿವಾರ ರಾತ್ರಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಜೋಡಿ ಫೋಟೋಗಳಿಗೆ ಪೋಸ್ ನೀಡುತ್ತಿರುವಾಗ ನಟಿ ಜೆನಿಲಿಯಾ ತನ್ನ ಹೊಟ್ಟೆಯನ್ನು ಹಿಡಿದಿರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಇದರಲ್ಲಿ ಆಕೆ ಗರ್ಭಿಣಿ ರೀತಿ ಕಾಣಿಸುತ್ತಿದ್ದು, ಅಭಿಮಾನಿಗಳು ಫುಲ್ ಕಾಮೆಂಟ್‌ಗಳ ಸುರಿಮಳೆ ಮಾಡುತ್ತಿದ್ದಾರೆ.

Bollywood Couple Genelia DSouza and Riteish Deshmukh Expecting Third Child?

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೇಬಿ ಬಂಪ್ ನೋಡಿದ ಅಭಿಮಾನಿಗಳು ಮೂರನೇ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ ಎಂಬ ವದಂತಿಗಳನ್ನು ಹುಟ್ಟುಹಾಕಿದ್ದಾರೆ. ದಂಪತಿ ಇನ್ನೂ ಅಧಿಕೃತ ಘೋಷಣೆ ಮಾಡದಿದ್ದರೂ, ದೇಶ್‌ಮುಖ್ ಕುಟುಂಬಕ್ಕೆ ಮತ್ತೊಬ್ಬ ಸದಸ್ಯ ಸೇರ್ಪಡೆಯಾಗಲಿದ್ದಾರೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

ನಟ ರಿತೇಶ್ ಮತ್ತು ನಟಿ ಜೆನಿಲಿಯಾ ಫೆಬ್ರವರಿ 2012 ರಲ್ಲಿ ಅದ್ಧೂರಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇವರು 2014 ರಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು, ಮಗನಿಗೆ ರಿಯಾನ್ ಎಂದು ಹೆಸರಿಸಿದರು. 2016 ರಲ್ಲಿ ಅವರ ಎರಡನೇ ಮಗು ರಾಹಿಲ್‌ಗೆ ಪೋಷಕರಾಗಿದ್ದರು.

ವೈರಲ್ ವಿಡಿಯೋಗೆ ಅಭಿಮಾನಿಗಳ ಪ್ರತಿಕ್ರಿಯೆ

ವೈರಲ್ ವಿಡಿಯೋಗೆ ಕಾಮೆಂಟ್ ಮಾಡುತ್ತಿರುವ ಅಭಿಮಾನಿಗಳು, "ಮತ್ತೆ ಗರ್ಭಿಣಿಯಾ?? (sic)', ಜೆನಿಲಿಯಾ ಗರ್ಭಿಣಿ??????', 'ಅವಳುರು ಗರ್ಭಿಣಿ ಎಂದು ನಾನು ಭಾವಿಸುತ್ತೇನೆ', ಮತ್ತೊಂದು ಮಗುವಿನ ನಿರೀಕ್ಷೆ!', 'ಜೆನಿಲಿಯಾ ಗರ್ಭಿಣಿಯಾಗಿರಬಹುದು' ಎಂಬಂತಹ ಆಶ್ಚರ್ಯ ಮತ್ತು ಪ್ರಶ್ನಾರ್ಥಕ ಚಿಹ್ನೆಗಳ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಮತ್ತೊಂದೆಡೆ, ರಿತೇಶ್ ದೇಶ್‌ಮುಖ್ ಕ್ಲಾಸಿಕ್ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ಲುಕ್ ಅಲ್ಲಿ ಕಾಣಿಸಿಕೊಂಡರೇ, ನಟಿ ಜೆನಿಲಿಯಾ ಬ್ಲೂ ಡ್ರೆಸ್‌ನಲ್ಲಿ ಸಕತ್ ಮುದ್ದಾಗಿ ಕಾಣುತ್ತಿದ್ದರು. ಜೋಡಿ ರೆಡ್ ಕಾರ್ಪೆಟ್‌ ಮೇಲೆ ನಡೆಯುವಾಗ ರಿತೇಶ್ ಅವರು ಜೆನಿಲಿಯಾ ಅವರ ಕೈಯನ್ನು ಬಿಗಿಯಾಗಿ ಪ್ರೀತಿಯಿಂದ ಹಿಡಿದುಕೊಂಡಿದ್ದು ಕಂಡುಬಂದಿದೆ.

Bollywood Couple Genelia DSouza and Riteish Deshmukh Expecting Third Child?

ದಕ್ಷಿಣ ಭಾರತದ ಸಿನಿಮಾಗಳು ಮತ್ತು ಬಾಲಿವುಡ್‌ನಲ್ಲಿ ಮೋಡಿ ಮಾಡಿರು ನಟಿ ಜೆನಿಲಿಯಾ ಡಿಸೋಜಾ ಮತ್ತು ಬಾಲಿವುಡ್ ನಟ ರಿತೇಶ್ ದೇಶಮುಖ್ ದಂಪತಿಗಳಿಗೆ ಒಂದು ಮಾಡೆಲ್ ಎಂದು ಹೇಳಬಹುದು. ಇವರಿಬ್ಬರು ತಮ್ಮ ಕಾಮಿಡಿ ಪತಿ - ಪತ್ನಿ ರೀಲ್‌ಗಳೊಂದಿಗೆ Instagram ನಲ್ಲಿ ಸಕತ್ ಹಿಟ್ ಜೋಡಿ ಆಗಿದ್ದಾರೆ.

More from Filmibeat

English summary
Genelia D'Souza and Riteish Deshmukh Expecting Third Child?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X