ಪ್ರಭಾಸ್ ಚಿತ್ರಕ್ಕೆ ಬಾಲಿವುಡ್‌ನಿಂದ ಹಾರಿಬರಲಿದ್ದಾರೆ ಖ್ಯಾತ ನಾಯಕಿ
ಬಾಹುಬಲಿ ಸಿನಿಮಾ ಬಳಿಕ ಖ್ಯಾತಿಯ ಉತ್ತುಂಗಕ್ಕೆ ಏರಿರುವ ಪ್ರಭಾಸ್ ಅವರ ಚಿತ್ರದಲ್ಲಿ ನಟಿಸಲು ಬಾಲಿವುಡ್‌ನ ಖ್ಯಾತ ನಾಯಕಿಯರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
Recommended Video
ಹೌದು, ಪ್ರಭಾಸ್ ಅಭಿನಯಿಸುತ್ತಿರುವ ಅವರ 21 ಚಿತ್ರಕ್ಕೆ ಬಾಲಿವುಡ್‌ನ ಖ್ಯಾತ ನಾಯಕ ನಟಿಯನ್ನು ಕರೆತರಲು ನಿರ್ದೇಶಕರು ಆಸಕ್ತಿ ವ್ಯಕ್ತಪಡಿಸಿದ್ದು, ಇಬ್ಬರು ನಾಯಕರಿಯನ್ನು ಅಂತಿಮಗೊಳಿಸಿದ್ದಾರೆ. ಅವರಲ್ಲಿ ಒಬ್ಬರು ಪ್ರಭಾಸ್ ಜೊತೆ ಹೆಜ್ಜೆ ಹಾಕಲಿದ್ದಾರೆ.
ಪ್ರಭಾಸ್ ಅಭಿನಯದ 21 ಚಿತ್ರವನ್ನು 'ಮಹಾನಟಿ' ಸೂಪರ್ ಹಿಟ್ ಚಿತ್ರ ನಿರ್ದೇಶಿಸಿದ್ದ ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಬಾಲಿವುಡ್‌ನಿಂದಲೇ ಪ್ರಭಾಸ್ ಗೆ ಹೀರೋಯಿನ್ ತರಬೇಕೆಂದು ಹಠಕ್ಕೆ ಬಿದ್ದಿದ್ದಾರೆ.

ಇಬ್ಬರಲ್ಲಿ ಒಬ್ಬರು ಪ್ರಭಾಸ್ ಗೆ ನಾಯಕಿ ಆಗಲಿ
ವೈಜಯಂತಿ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಪ್ರಭಾಸ್ ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಅಥವಾ ಕತ್ರಿನಾ ಕೈಫ್ ಇಬ್ಬರಲ್ಲಿ ಒಬ್ಬರು ನಾಯಕಿಯಾಗಬೇಕು ಎಂಬುದು ನಾಗ್ ಆಶ್ವಿನ್ ಆಸೆಯಂತೆ.

ಕತ್ರಿನಾ ಕೈಫ್ ಮೇಲೆ ಹೆಚ್ಚಿನ ಒಲವು
ಅದರಲ್ಲಿಯೂ ಕತ್ರಿನಾ ಕೈಫ್ ಅವರೇ ಬಾಹುಬಲಿಗೆ ನಾಯಕಿಯಾದರೆ ಚೆಂದ ಎಂದು ನಾಗ್ ಅಶ್ವಿನ್ ಆಸೆಯಂತೆ. ಈ ಹಿಂದೆ ಸಹ ಎರಡು ತೆಲುಗು ಚಿತ್ರಗಳಲ್ಲಿ ಕತ್ರಿನಾ ಕೈಫ್ ಅಭಿನಯಿಸಿದ್ದಾರೆ. 'ಮಲ್ಲೇಶ್ವರಿ' ಕತ್ರಿನಾ ತೆಲುಗಿನಲ್ಲಿ ಅಭಿನಯಿಸಿದ್ದ ಸೂಪರ್ ಹಿಟ್ ಚಿತ್ರ

ಎರಡು ಚಿತ್ರಗಳಲ್ಲಿ ನಟಿಸುತ್ತಿರುವ ಪ್ರಭಾಸ್
ಪ್ರಭಾಸ್ ಸದ್ಯಕ್ಕೆ ಇನ್ನು ಹೆಸರಿಡದ (ತಾತ್ಕಾಲಿಕ ಟೈಟಲ್ ಪ್ರಭಾಸ್ 20) ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗಡೆ ಕಾಣಿಸಿಕೊಳ್ಳುತ್ತಿದ್ದಾರೆ.

ಪೂಜಾ ಹೆಗ್ಡೆಗೆ ಒಲಿದ ಅದೃಷ್ಟ
ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಪೂಜಾ ಮತ್ತೊಂದು ಸಕ್ಸಸ್ ಗೆ ಎದುರು ನೋಡುತ್ತಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಸಹ ಮುಗಿಸಿದೆ ಚಿತ್ರತಂಡ. ಚಿತ್ರಕ್ಕೆ ಕೆ.ಕೆ.ರಾಧಕೃಷ್ಣ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.


Click it and Unblock the Notifications










