For Quick Alerts
  ALLOW NOTIFICATIONS  
  For Daily Alerts

  ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ: ಮಹಾಭಾರತ ಚಿತ್ರದ ಬಿಜೆಟ್​ 700 ಕೋಟಿ!

  |

  ಬಾಲಿವುಡ್​ನಲ್ಲಿ ಮಹಾಭಾರತ ಸಿನಿಮಾ ತಯಾರಾಗುತ್ತಿದೆ ಎನ್ನುವ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿದೆ. ಸ್ಟಾರ್​ ನಟರ ತಾರಾಗಣದಲ್ಲಿ ಮೂಡಿಬರಲಿರುವ ಮಹಾಭಾರತದ ಸಿನಿಮಾದ ಬಗ್ಗೆ ಹೊಸ ವಿಚಾರವೊಂದು ತಿಳಿದು ಬಂದಿದ್ದು, ಭಾರತೀಯ ಚಿತ್ರರಂಗವೇ ಈ ವಿಚಾರದ ಬಗ್ಗೆ ತಿರುಗಿ ನೋಡುವಂತಾಗಿದೆ.

  ಕೆಲ ದಿನಗಳ ಬಳಿಕ ಹಿಂದಿ ಮಹಾಭಾರತದ ಸಿನಿಮಾ ವಿಚಾರ ಮುಖ್ಯಭೂಮಿಕೆಗೆ ಬಂದಿದ್ದು, ನಿರ್ಮಾಪಕ ಫಿರೋಜ್​.ಎ. ನಾಡಿಯಾಡ್ವಾಲಾ ತೆರೆ ಮರೆಯಲ್ಲಿ ಚಿತ್ರದ ಸಿದ್ಧತೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಸಂಪೂರ್ಣ ಭಾರತೀಯ ಚಿತ್ರರಂಗದಲ್ಲಿ ಮಹಾಭಾರತ ಸಿನಿಮಾ ಮೂಲಕ ಹೊಸ ಮೈಲುಗಲ್ಲು ಸೃಷ್ಟಿಸುವ ದೂರದೃಷ್ಟಿ ಹೊಂದಿರುವ ಫಿರೋಜ್,​ ಚಿತ್ರಕ್ಕಾಗಿ 700 ಕೋಟಿಗೂ ಹೆಚ್ಚು ಬಜೆಟ್​ ವ್ಯಹಿಸಲು ಸಿದ್ಧರಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಅತಿದೊಡ್ಡ ಚಿತ್ರವಾಗಲಿರುವ ಬಾಲಿವುಡ್​ನ​ ಮಹಾಭಾರತ ಸಿನಿಮಾ 700 ಕೋಟಿಗೂ ಹೆಚ್ಚಿನ ಬಜೆಟ್​ನಲ್ಲಿ ಸಿದ್ಧವಾಗಲಿದೆ.

  ಹಿಂದಿ ಸಿನಿಮಾ 'ಬ್ರಹ್ಮಾಸ್ತ್ರ'ಗಾಗಿ ರಾಜಮೌಳಿ ತಲೆಕೆಡಿಸಿಕೊಳ್ಳುತ್ತಿರುವುದೇಕೆ?ಹಿಂದಿ ಸಿನಿಮಾ 'ಬ್ರಹ್ಮಾಸ್ತ್ರ'ಗಾಗಿ ರಾಜಮೌಳಿ ತಲೆಕೆಡಿಸಿಕೊಳ್ಳುತ್ತಿರುವುದೇಕೆ?

  ಸಂಪೂರ್ಣ ಮಹಾಭಾರತದ ಕಥೆಯನ್ನು ಕೇವಲ ಮೂರು ಗಂಟೆಗಳಲ್ಲಿ ಪ್ರೇಕ್ಷಕರಿಗೆ ತಿಳಿಸುವ ಗುರಿಯನ್ನು ಚಿತ್ರತಂಡ ಹೊಂದಿದೆ. ಫಿರೋಜ್​ ನಾಡಿಯಾಡ್ವಾಲಾ ಈಗಾಗಲೇ ಮಹಾಭಾರತದ ಸಿನಿಮಾದ ಕೆಲಸಗಳನ್ನು ಪ್ರಾರಂಭಿಸಿದ್ದು, ಸುಮಾರು 4-5 ವರ್ಷ ಸಮಯವನ್ನು ಸಿನಿಮಾದ ಚಿತ್ರಕಥೆಗಾಗಿ​ ಮೀಸಲಿಡಲಾಗಿದೆ. ಪ್ಯಾನ್​ ಇಂಡಿಯಾ ಸಿನಿಮಾವಾಗಿ ಬರಲಿರುವ ಬಾಲಿವುಡ್​ ಮಹಾಭಾರತ 2025ರ ಡಿಸೆಂಬರ್​ ತಿಂಗಳಿನಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ.

  ಬಾಲಿವುಡ್​ನ​ ಮಹಾಭಾರತ ಚಿತ್ರದಲ್ಲಿ ಅಕ್ಷಯ್​ ಕುಮಾರ್​, ಅಜಯ್​ ದೇವಗನ್​, ರಣವೀರ್​ ಸಿಂಗ್​, ಅನಿಲ್​ ಕಪೂರ್​ ಸೇರಿದಂತೆ ಬಾಲಿವುಡ್​ನ ನಟ ದಿಗ್ಗಜರು ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದು, ಯಾರು, ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲಕಾರಿ ಸಂಗತಿಯಾಗಿದೆ. ಇನ್ನು ಚಿತ್ರದಲ್ಲಿ ಹೊಸ ನಾಯಕಿಯರನ್ನು ಪರಿಚಯಿಸುವ ಸಾಧ್ಯತೆಯಿದ್ದು, ದಕ್ಷಿಣ ಭಾರತದ ಕೆಲ ನಟರೂ ಕೂಡ ಮಹಾಭಾರತದ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸಂಭವವಿದೆ. ಸುಮಾರು 700 ಕೋಟಿ ಬಜೆಟ್​ನಲ್ಲಿ ಚಿತ್ರ ನಿರ್ಮಿಸಲು ಸಿದ್ಧರಾಗಿರುವ ಫಿರೋಜ್​.ಎ. ನಾಡಿಯಾಡ್ವಾಲಾ, ಐತಿಹಾಸಿಕ ಚಿತ್ರಕ್ಕೆ ಸರಿಹೊಂದಿರುವ, ಚಿತ್ರಕ್ಕೆ ನೈಜತೆ ತುಂಬುವ ನಿರ್ದೇಶಕರ ಹುಡುಕಾಟದಲ್ಲಿದ್ದಾರೆ.

  ಇನ್ನು ಈ ಹಿಂದೆ ಕೂಡ ಬಾಲಿವುಡ್​ನಲ್ಲಿ ಮಹಾಭಾರತ ಸಿನಿಮಾ ತೆರೆಕಂಡಿದ್ದು, 1965ರಲ್ಲಿ ಬಾಬುಬಾಯಿ​ ಮಿಸ್ತ್ರಿ ನಿರ್ದೇಶನ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸಖತ್​ ಸದ್ದು ಮಾಡಿತ್ತು. ಚಿತ್ರದಲ್ಲಿ ಪ್ರದೀಪ್​ ಕುಮಾರ್​, ಪದ್ಮಿನಿ, ದಾರಾ ಸಿಂಗ್ ಸೇರಿದಂತೆ, ಅನೇಕ ಬಾಲಿವುಡ್​ನ​ ದಿಗ್ಗಜ ನಟರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  English summary
  Akshay Kumar, Ajay Devgn, and Ranveer Singh likely to team up for Mahabharata being made on Rs 700 crore budget.
  Wednesday, September 14, 2022, 13:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X