For Quick Alerts
  ALLOW NOTIFICATIONS  
  For Daily Alerts

  ಸೇಫ್ ಸೆಕ್ಸ್ ಮಂತ್ರ ಜಪಿಸಿದ ತಾರೆ ಶೆರ್ಲಿನ್ ಚೋಪ್ರಾ

  By ರವಿಕಿಶೋರ್
  |

  ಬಾಲಿವುಡ್ ಸೆಕ್ಸ್ ಬಾಂಬ್ ಶೆರ್ಲಿನ್ ಚೋಪ್ರಾ ಸಂದರ್ಭ ಸಿಕ್ಕಿದಾಗಲೆಲ್ಲಾ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುತ್ತಾ ಮುನ್ನುಗ್ಗುತ್ತಿದ್ದಾರೆ. ಸೆಕ್ಸ್ ಬಗ್ಗೆ ಮಾತನಾಡುವುದು, ಸೆಕ್ಸಿಯಾಗಿ ಸಿಂಗರಿಸಿಕೊಳ್ಳುವುದು. ಹೀಗೆ ಪ್ರತಿ ವಿಷಯಕ್ಕೂ ಸೆಕ್ಸ್ ಥಳುಕು ಹಾಕಿಕೊಂಡು ಎಲ್ಲರ ದೃಷ್ಟಿಯನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಈಗ ಮತ್ತೊಮ್ಮೆ ಸೆಕ್ಸ್ ಮಂತ್ರ ಜಪಿಸಿದ್ದಾರೆ.

  ಡಿಸೆಂಬರ್ 1ರ ವಿಶ್ವ ಏಡ್ಸ್ ದಿನಾಚರಣೆಯನ್ನು ಉದ್ದೇಶಿಸಿ...ಸೇಫ್ ಸೆಕ್ಸ್ ಬಗ್ಗೆ ಮಾತನಾಡಿದ್ದಾರೆ. ರೇಡಿಯೋ ಕಾರ್ಯಕ್ರಮವೊಂದರಲ್ಲಿ ಶೆರ್ಲಿನ್ ಮಾತನಾಡುತ್ತಾ...ಏಡ್ಸ್ ನಿಂದ ದೂರ ಇರಬೇಕಾದರೆ ಸುರಕ್ಷಿತ ಲೈಂಗಿಕ ಪದ್ಧತಿಗಳನ್ನು ಪಾಲಿಸಬೇಕು ಎಂಬ ಕಿವಿಮಾತನ್ನು ಹೇಳಿದ್ದಾರೆ.

  ಇದಿಷ್ಟೇ ಅಲ್ಲದೆ ಮತ್ತೊಮ್ಮೆ ಹಾಟ್ ಹಾಟ್ ಫೋಟೋಗಳನ್ನೂ ಲೀಕ್ ಮಾಡಿದ್ದಾರೆ. ಒಟ್ಟಿನಲ್ಲಿ ಬಾಯಲ್ಲಿ ಬೆಣ್ಣೆ ಕಂಕುಳಲ್ಲಿ ಡೊಣ್ಣೆ ಎಂಬಂತೆ ಒಂದು ಕಡೆ ಸೇಫ್ ಸೆಕ್ಸ್ ಜಪ. ಇನ್ನೊಂದು ಕಡೆ ಸೆಕ್ಸಿ ಫೋಟೋಗಳ ಬಿಡುಗಡೆ. ಶೆರ್ಲಿನ್ ಡಬಲ್ ಗೇಮ್ ಮುಂದುವರಿದಿದೆ.

  'ಪ್ಲೇಬಾಯ್' ನಂತಹ ಪೋಲಿ ಪುಸ್ತಕದಲ್ಲಿ ತಮ್ಮ ಅಷ್ಟೌಶ್ವರ್ಯಗಳನ್ನೂ ತೆರೆದಿಟ್ಟ ಶೆರ್ಲಿನ್ ಈಗ 'ಕಾಮಸೂತ್ರ 3D' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಪ್ಲೇಬಾಯ್ ಪತ್ರಿಕೆ ಸಂಪಾದಕ ಹಗ್ ಹಫನರ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು ಎಂಬ ಸುದ್ದಿಯೂ ಇದೆ. ಆಗಲೂ ಸೇಫ್ ಸೆಕ್ಸ್ ಪಾಲಿಸಿದ್ದರಾ? ಶೆರ್ಲಿನಾ ಚೋಪ್ರಾ ಅವರೆ ಹೇಳಬೇಕು.

  English summary
  The bold girl of Bollywood Sherlyn Chopra, who was featured on the front page of the magazine 'Playboy', advised people on radio to practice safe sex on World AIDS day, that falls on December 1.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X