»   » ತಡವೇಕೆ? ಶಿಲ್ಪಾಶೆಟ್ಟಿ ಮಗನಿಗೆ ಹೆಸರು ಸೂಚಿಸಿ!

ತಡವೇಕೆ? ಶಿಲ್ಪಾಶೆಟ್ಟಿ ಮಗನಿಗೆ ಹೆಸರು ಸೂಚಿಸಿ!

Posted By:
Subscribe to Filmibeat Kannada

ಕನ್ನಡತಿ ಶಿಲ್ಪಾ ಶೆಟ್ಟಿ ಇಂದು ಬೆಳಗ್ಗೆ ಮುಂಬೈನ ಆಸ್ಪತ್ರೆಯೊಂದರಲ್ಲಿ ತಮ್ಮ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ಸುಮಾರು ಆರು ತಿಂಗಳ ಹಿಂದೆ (ನವೆಂಬರ್ 16ರಂದು) ಹೀಗೇ ಬಾಲಿವುಡ್ ಅಂಗಳದಲ್ಲಿ ಮತ್ತೊಬ್ಬ ತಾರಾ ಜೋಡಿಗೆ ಹೆಣ್ಣು ಮಗುವಾಗಿತ್ತು. ಆ ಮಗುವಿಗೆ 4 ತಿಂಗಳ ನಂತರ (ಮಾರ್ಚ್ 14ರಂದು) ಮಗುವಿನ ತಾತಾ ಅಮಿತಾಬ್ ಬಚ್ಚನ್ ಆರಾಧ್ಯಾ ಎಂಬ ಹೆಸರನ್ನು ಅನಧಿಕೃತವಾಗಿ ಉಲಿದಿದ್ದರು.

ಆದರೆ ಇಂದು ಆ ಹೆಸರನ್ನು ಖಚಿತಪಡಿಸುತ್ತಾ ಹೌದು ಅವಳ ಹೆಸರು ಆರಾಧ್ಯಾ ಎಂದು ಅಧಿಕೃತವಾಗಿ ಟ್ವಿಟ್ಟರಿನಲ್ಲಿ ಘೋಷಿಸಿದ್ದಾರೆ. ಇತ್ತ ಅದೇ ಘಳಿಗೆಯಲ್ಲಿ ಮತ್ತೊಬ್ಬ ಕನ್ನಡತಿ, ತಾರಾ ದಂಪತಿ ಶಿಲ್ಪಾ ಶೆಟ್ಟಿ ಗಂಡು ಮಗುವಿಗೆ ಜನ್ಮ ನೀಡಿ ಸಂಭ್ರಮಿಸಿದ್ದಾರೆ. Actually, ವೈದ್ಯರು date ಕೊಟ್ಟಿದ್ದು ಮುಂದಿನ ತಿಂಗಳಿಗೆ. ಆದರೆ ಹೆರಿಗೆ ನೋವಿನಿಂದ ಶಿಲ್ಪಾ ನಿನ್ನೆಯೇ ಆಸ್ಪತ್ರೆಗೆ ದಾಖಲಾದರು. ಆತುರಕ್ಕೆ ಬಿದ್ದು ಇಂದೇ ಪುತ್ರೋತ್ಸವ ಆಚರಿಸಿದ್ದಾರೆ!

bollywood-shilpa-shetty-baby-boy-suggest-name

ಶಿಲ್ಪಾ ಅಭಿಮಾಣಿಗಳು ಈಗಾಗಲೇ ಸಖತ್ ಸಂತೋಷಪಟ್ಟಿದ್ದಾರೆ. ಜತೆಗೆ ಅದಾಗಲೇ ನಾಮಕರಣಕ್ಕೂ ಸಿದ್ಧತೆ ನಡೆಸಿದ್ದಾರೆ. ಸ್ವತಃ ತಮ್ಮ ಮಕ್ಕಳು ಅಥವಾ ಸಂಬಂಧಿಕರ ಮಕ್ಕಳಿಗೆ ಹೆಸರಿಡಲು ಇಷ್ಟೊಂದು ಕಾಳಜಿ ವಹಿಸಿದ್ದರೋ ಇಲ್ವೋ ಎಂಬುದು ಬೇರೆ ವಿಚಾರ ... ಆದರೆ ನಮ್ಮ ಐಶ್ವರ್ಯಾ ಮಗಳಿಗೆ ಹೆಸರಿಟ್ಟಾಯಿತು. ಇನ್ನು ಶಿಲ್ಪಾ ಮಗನಿಗೆ ಹೆಸರಿಡೋಣ ಎಂದು ತಲೆಗೊಂದರಂತೆ ಹೆಸರು ಸೂಚಿಸಿ, ಸಂಭ್ರಮಿಸುತ್ತಿದ್ದಾರೆ.

ಸುರಸುಂದರಿ ಐಶ್ವರ್ಯಾ ಮಗಳಿಗೂ ಹೀಗೇ ನೋರೆಂಟು ಹೆಸರಿಟ್ಟಿದ್ದರು. ಈಗ ಶಿಲ್ಪಾ ಮಗನಿಗೆ ಏನು ಹೆಸರಿಡೋಣ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ? ನೋಡೋಣ ಶಿಲ್ಪಾ ಸಹ ಅಮಿತಾಬ್ ಹಾದಿಹಿಡಿದು 6 ತಿಂಗಳ ನಂತರ ಹೆಸರು ಸೂಚಿಸಿತ್ತಾರೋ ಅಥವಾ ತಕ್ಷಣವೇ ಯಾವುದೋ ಒಂದು ಹೆಸರು ಇಡುತ್ತಾರೋ. ಆದರೆ ಅದಕ್ಕೂ ಮುಂಚೆ ನೀವೊಂದು ಹೆಸರು ಸೂಚಿಸಿ. ಈ ಮಧ್ಯೆ, ಬಿಪಾಶಾ ಬಸುಳಿಂದ ಹಿಡಿದು ಇಡೀ ಬಾಲಿವುಡ್ ಟ್ವಿಟ್ಟರುಗಳಲ್ಲಿ ಶುಭಾಶಯ ಕೋರಿದೆ.

English summary
Bollywood actress Shilpa Shetty gives birth to a baby boy. Actress Shilpa Shetty gave birth to a baby boy today morning at Hinduja Healthcare hospital in Khar, Mumbai. Shilpa's husband Raj, who is on the seventh heaven with the baby's birth, took to the twitter to break the news.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada