»   » ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸಿ ಸಿಕ್ಕಿಬಿದ್ದ ತಾರೆಗಳು

ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸಿ ಸಿಕ್ಕಿಬಿದ್ದ ತಾರೆಗಳು

By ರವಿಕಿಶೋರ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಬೆಕ್ಕು ಕಣ್ಮುಚ್ಚಿಕೊಂಡು ಆಲ್ಕೋಹಾಲ್ ಕುಡಿದರೆ ಯಾರಿಗೂ ಗೊತ್ತಾಗಲ್ವಾ ಎಂಬುದು ಉಪೇಂದ್ರ ಡೈಲಾಗ್. ಕಣ್ಮುಚ್ಚಿಕೊಂಡು ಕಿಸ್ ಕೊಟ್ರೆ ಕ್ಯಾಮೆರಾಮೆನ್ ಸುಮ್ನಿರ್ತಾನಾ. ಆದರೂ ಈ ಸಿನಿಮಾ ತಾರೆಗಳು ಕತ್ಲಲ್ಲಿ ಕರಡೀಗೆ ಜಾಮೂನು ತಿನ್ನಿಸುವುದನ್ನು ಮಾತ್ರ ಬಿಟ್ಟಿಲ್ಲ.

  ತೆರೆಯ ಮೇಲಾದರೆ ಯಾರು ಕೇಳಲ್ಲ ಬಿಡಿ. ತೆರೆ ಹಿಂದೆಯೂ ಇದೇ ಕಥೆಯಾದರೆ ಏನು ಮಾಡುವುದು. ಅಯ್ಯೋ ಸಿನಿಮಾ ತಾರೆಗಳಿಗೆ ಇದೆಲ್ಲಾ ಮಾಮೂಲಿ ಬಿಡ್ರಿ ಎನ್ನುವವರು ಇದ್ದಾರೆ. ಅದು ಏನೇ ಆಗಲಿ ಸಿನಿಮಾ ತಾರೆಗಳಿಗೆ ಚೆಲ್ಲಾಟ ಪ್ರೇಕ್ಷಕರಿಗೆ ಪರದಾಟ ಎಂಬಂತಾಗಿದೆ.

  ಹಣ್ಣು ತಿಂದವ ತಪ್ಪಿಸಿಕೊಂಡ, ಮೂತಿ ಒರೆಸಿಕೊಂಡವ ಸಿಕ್ಕಾಕೊಂಡ ಎಂಬ ಇನ್ನೊಂದು ಹೊಸ ಗಾದೆ ಇದೆ. ಆದರೆ ಇಲ್ಲಿನ ತಾರೆಗಳು ಮಾತ್ರ ಮೂತಿಗೆ ಮೂತಿ ಕೊಡಲು ಹೋಗಿ ಸಿಕ್ಕಾಕಿಕೊಂಡಿದ್ದಾರೆ. ಇಲ್ಲಿವೆ ನೋಡಿ ಕೆಲವೊಂದು ರೋಚಕ ಚಿತ್ರಗಳು.

  ಇಲ್ಲಿರುವ ಚಿತ್ರಗಳ ವಿಶೇಷ ಎಂದರೆ ಯಾರೂ ಪರ್ಫೆಕ್ಟ್ ಆಗಿ ಪಪ್ಪಿ ಕೊಡಲು ಸಾಧ್ಯವಾಗಿಲ್ಲ. ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ, ಪ್ರೀತಿ ಜಿಂಟಾ, ಬಿಪಾಶಾ ಬಸು, ಫರಾ ಖಾನ್ ಗೆ ಜಾಮೂನು ತಿನ್ನಿಸಕ್ಕೆ ಹೋದವರ ಡೀಟೇಲ್ಸ್ ಸ್ಲೈಡ್ ಗಳಲ್ಲಿ ವೀಕ್ಷಿಸಿ...

  ಪ್ರಿಯಾಂಕಾಗೆ ಶಾರುಖ್ ಕಿವಿಕಚ್ಚಿದ್ದು

  ಪಕ್ಕದಲ್ಲೇ ಜಾಮೂನು ಇದೆ ಎಂದರೆ ಎಷ್ಟುತ್ತು ಎಂದು ನೋಡಿಕೊಂಡಿರಲು ಸಾಧ್ಯ. ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ ಚೋಪ್ರಾ ಪಕ್ಕದಲ್ಲೇ ಇದ್ದ ಶಾರುಖ್ ಖಾನ್ ಅಪ್ಪಿ ಮುದ್ದಾಡಿದ ಪ್ರಸಂಗ.

  ಇದರಲ್ಲೇನೋ ಏನೋ ವ್ಯತ್ಯಾಸ ಇದೆಯಲ್ಲಾ?

  ಈ ಫೋಟೋ ನೋಡಿದರೆ ಇದರಲ್ಲೇನೋ ವ್ಯತ್ಯಾಸ ಇದೆಯಲ್ಲಾ ಎಂಬ ಡೌಟು ಬರುತ್ತದೆ. ರಾಣಿ ಮುಖರ್ಜಿ ಹಾಗೂ ಸೋನಾಕ್ಷಿ ಇಬ್ಬರ ನಡುವೆ ಕರೆಂಟ್ ಪಾಸಾದ ಸನ್ನಿವೇಶ.

  ಇನ್ನೊಂದು ಅಂಥಹದ್ದೇ ಫೋಟೋ

  ಬಾಲಿವುಡ್ ತಾರೆಗಳಾದ ರಾಣಿ ಮುಖರ್ಜಿ, ಕತ್ರಿನಾ ಕೈಫ್ ಒಬ್ಬರನ್ನೊಬ್ಬರು ಭೇಟಿಯಾದ ಸಂದರ್ಭ. ಆಲಿಂಗಿಸಿ ಚುಂಬನ ಕೊಡಲು ಹೋದ ಕತ್ರಿನಾರಿಂದ ತಪ್ಪಿಸಿಕೊಳ್ಳುತ್ತಿರುವಂತೆ ಕಾಣುತ್ತಿದ್ದಾರೆ ರಾಣಿ ಮುಖರ್ಜಿ.

  ಸುತ್ತಮುತ್ತ ಯಾರು ಇಲ್ಲ..ಬಾರೇ ಸನಿಹಕೆ

  ದಿಯಾ ಮಿರ್ಜಾ ಮತ್ತು ಯಶ್ ಬಿರ್ಲಾ ಇಬ್ಬರೂ ಸುತ್ತಮುತ್ತ ಯಾರು ಇಲ್ಲ...ಇಲ್ಲಿ ನೀನು ನಾನೇ ಎಲ್ಲ ಬಾರೇ ಸನಿಹಕೆ ಎಂದು ಇವರಿಬ್ಬರೂ ಪ್ರೇಮಗೀತೆ ಶುರುವಚ್ಚಿಕೊಳ್ಳುವ ಸಮಯ. ಆದರೆ ಫೋಟೋಗ್ರಾಫರ್ ಮಾತ್ರ ಅದೆಲ್ಲಿದ್ದನೋ ಏನೋ ಇಬ್ಬರನ್ನೂ ಕ್ಯಾಮೆರಾದಲ್ಲಿ ಬಂಧಿಸಿದ್ದಾನೆ.

  ಬಾಬ್ಬಿ ಡಾರ್ಲಿಂಗ್ ಕೈಗೆ ವೀಣಾ ಮಲಿಕ್

  ಬಾಬ್ಬಿ ಡಾರ್ಲಿಂಗ್ ಕೈಗೆ ಸಿಕ್ಕಿಹಾಕಿಕೊಂಡ ವೀಣಾ ಮಲಿಕ್ ಶೋಚನೀಯ ಪರಿಸ್ಥಿತಿ. ಇಲ್ಲಿ ತುಟಿಗೆ ತುಟಿ ಕೊಡಲು ಪ್ರಯತ್ನಿಸುತ್ತಿರುವ ಬಾಬ್ಬಿ. ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ವೀಣಾ.

  ಸೋನಾಲಿ ಬೇಂದ್ರ, ಅರ್ಜುನ್ ರಾಂಪಾಲ್

  ಕಾರ್ಯಕ್ರಮದಲ್ಲಿ ಸಿಕ್ಕಿದ ಇಬ್ಬರೂ ಒಬ್ಬರಿಗೊಬ್ಬರು ಜಾಮೂನು ತಿನ್ನಿಸಲು ಪ್ರಯತ್ನಿಸುತ್ತಿರುವ ಪ್ರಸಂಗ. ಇಲ್ಲೇ ಹಿಂಗೆ...ಇನ್ನು ಸಂಪೂರ್ಣ ಕತ್ತಲಾದರೆ ಇನ್ ಹೆಂಗೋ ಏನೋ..

  ಓ.... ಓ....ಓ ಪ್ರಿಯತಮಾ ಪ್ರಿಯತಮಾ.

  ಕರುಣೆಯಾ ತೋರೆಯಾ ಎಂದು ದೀಪಿಕಾ ಪಡುಕೋಣೆ ಹಾಡುತ್ತಿರುವಂತಿದೆ. ಆದರೆ ಅಭಿಷೇಕ್ ಬಚ್ಚನ್ ಪ್ರಾಬ್ಲಂ ಯಾರಿಗೇಳೋನ.

  ಅಬ್ಬಬ್ಬ ವಿಜಯ್ ಮಲ್ಯಾರಿಗೆ ಯಾರು ಸಾಟಿ?

  ಅದು ಸಭೆ, ಸಮಾರಂಭವೇ ಆಗಿರಲಿ, ಕತ್ತಲೇ ಇರಲಿ ಬೆಳಕೇ ಇರಲಿ, ವಿಜಯ್ ಮಲ್ಯಾ ಮಾತ್ರ ಯಾವುದಕ್ಕೂ ನಾಚಿಕೊಳ್ಳಲ್ಲ. ಶಿಲ್ಪಾ ಶೆಟ್ಟಿಯನ್ನು ಅಪ್ಪಿಕೊಂಡ ರಸನಿಮಿಷಗಳು.

  ಶಾಹಿದ್ ಕಪೂರ್ ಗೆ ಬಿಪಾಶಾ ಬಿಸಿಬಿಸಿ ಪಪ್ಪಿ

  ಚಾಕ್ಲೇಟ್ ಬಾಯ್ ಶಾಹಿದ್ ಗೆ ಬಿಸಿಬಿಸಿ ಪಪ್ಪಿ ಕೊಟ್ಟ ಬಿಪಾಶಾ ಬಸು. ಅದನ್ನು ಅನಿಲ್ ಕಪೂರ್ ನೋಡುತ್ತಾ ಆ ಭಾಗ್ಯ ನಾನು ಮಿಸ್ ಆದೆನಲ್ಲಾ ಎಂದು ಒಳಗೊಳಗೇ ಮರುಗುತ್ತಿರುವಂತಿದೆ.

  ಜೋಡಿ ಬ್ರೇಕರ್ಸ್ ಅಪ್ಪಿಕೊಂಡ ಕ್ಷಣ

  ಬಿಪಾಶಾ ಬಸು ಹಾಗೂ ಮಾಧವನ್ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಈ ಸಮಯ ಆನಂದಮಯ ಎಂದು ಹಾಡು ಶುರುವಚ್ಚಿಕೊಳ್ಳುತ್ತಿರುವ ಸಂದರ್ಭ. ಇದು ಜೋಡಿ ಬ್ರೇಕರ್ಸ್ ಪ್ರೋಮೋಷನ್ ಸಂದರ್ಭದಲ್ಲಿ ನಡೆದ ಘಟನೆ.

  ಹೃತಿಕ್, ಫರಾ ಖಾನ್ ಪರ್ಫೆಕ್ಟ್ ಪಿಕ್ಚರ್

  ಹೃತಿಕ್ ರೋಷನ್ ಹಾಗೂ ಫರಾ ಖಾನ್ ಇಬ್ಬರೂ ಬಹುತೇಕ ಹತ್ತಿರವಾದ ಘಳಿಗೆ. ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ ಮುದ್ದುಮಾಡೊಕು ಕಂಜೂಸು ಬುದ್ದಿ ಬೇಕಾ?

  ವಿದ್ಯಾ ಬಾಲನ್, ವಿಧು ವಿನೋದ್ ಚೋಪ್ರಾ

  ನಮ್ಮ ಯೋಗರಾಜ್ ಭಟ್ ಹೇಳುವಂತೆ...ಹುಡುಗೀರ ಮನಸಲ್ಲಿ ಏನೇನಿದೆ ತಿಳ್ಕೊಲ್ಲೋ ತಾಕತ್ತು ನಮಗೆಲ್ಲಿದೆ ಪ್ರಾಬ್ಲೆಮ್ಮು ಇರದ ಫೀಮೇಲು ಇಲ್ಲ...ಮಾಡ್ರನ್ನು ಪ್ರೇಮಕ್ಕೆ ಮೈಲೇಜು ಕಮ್ಮಿ ಸೆಲ್ ಪೋನು ಬಂದಮೇಲೆ ಹಿಂಗಾಯ್ತು ಸ್ವಾಮಿ ಲವ್ ಅಲ್ಲಿ ಕಣ್ಣೀರು compulsory. ಈ ಫೋಟೋ ನೋಡಿದ್ರೆ ಇಷ್ಟೇ ಹೇಳೋಕಾಗೋದು.

  English summary
  Bollywood stars show their fake love at parties but sometimes they kiss and miss! Check out these awkward kisses stars have been clicked in while trying t show their love and affection with each other.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more