'ಶ್ರೀದೇವಿ'ಗೆ ಬೋನಿ ಕಪೂರ್ ಲೀಗಲ್ ನೋಟೀಸ್!

By Rajendra

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೊಸ ಚಿತ್ರ 'ಶ್ರೀದೇವಿ'ಗೆ ಮತ್ತೊಂದು ವಿಘ್ನ ಎದುರಾಗಿದೆ. ಈ ಹಿಂದೆ ಇದೇ ಚಿತ್ರಕ್ಕೆ 'ಸಾವಿತ್ರಿ' ಎಂದು ಹೆಸರಿಟ್ಟಿದ್ದರು. ಚಿತ್ರದ ಶೀರ್ಷಿಕೆಯನ್ನು ಮತ್ತೊಬ್ಬರು ನೋಂದಾಯಿಸಿಕೊಂಡಿದ್ದ ಕಾರಣ ಶ್ರೀದೇವಿ ಎಂದು ಬದಲಾಯಿಸಿದ್ದರು.

ಇದೀಗ ಬಾಲಿವುಡ್ ಮೋಹಕ ತಾರೆ ಶ್ರೀದೇವಿ ಅವರ ಪತಿ, ನಿರ್ಮಾಪಕ ಬೋನಿ ಕಪೂರ್ ಅವರು ವರ್ಮಾ ಸಾಹೇಬರಿಗೆ ಲೀಗಲ್ ನೋಟೀಸ್ ಕಳುಹಿಸಿದ್ದಾರೆ. ತಮ್ಮ ಪತ್ನಿಯ ಹೆಸರನ್ನು ಬಳಸಿಕೊಂಡಿರುವ ಬಗ್ಗೆ ವಿವರಣೆ ಕೇಳಿದ್ದು, ತಮ್ಮನ್ನು ಸಂಪರ್ಕಿಸದೆ ಶೀರ್ಷಿಕೆ ಇಟ್ಟಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. [ಶ್ರೀದೇವಿಯಾದ ರಾಮ್ ಗೋಪಾಲ್ ವರ್ಮಾ ಸಾವಿತ್ರಿ]

Sridevi movie controversy
ಲೀಗಲ್ ನೋಟೀಸ್ ಕಳುಹಿಸುವುದಕ್ಕೂ ಮೊದಲು ವರ್ಮಾ ಮತ್ತು ಬೋನಿ ಕಪೂರ್ ಜೊತೆ ಸಾಕಷ್ಟು ಚರ್ಚೆ ನಡೆದಿದೆ. ವರ್ಮಾ ಅವರ ಮಾತುಗಳಿಂದ ಬೋನಿ ಕಪೂರ್ ಅವರಿಗೆ ಸಮಾಧಾನವಾಗಿಲ್ಲ. ಕಡೆಗೆ ಅವರು ಲೀಗಲ್ ನೋಟೀಸ್ ರೂಪದಲ್ಲಿ ಉತ್ತರ ನೀಡಿದ್ದಾರೆ.

ಚಿತ್ರದ ಶೀರ್ಷಿಕೆ ನೋಡಿದರೆ ಇದು ಶ್ರೀದೇವಿ ಅವರಿಗೆ ಸಂಬಂಧಿಸಿದ ಕಥೆ ಎಂಬ ಅನುಮಾನ ಬರುತ್ತದೆ. ಹಾಗಾಗಿ ದಯವಿಟ್ಟು ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಿ. ಚಿತ್ರದ ಹೆಸರನ್ನು ಕೈಬಿಡುವಂತೆ ಬೋನಿ ಕಪೂರ್ ಆಗ್ರಹಿಸಿದ್ದಾರೆ.

ಕಿರಣ್ ಪ್ರಸಾದ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ನಾಯಕಿ ಅನುಕೃತಿ ಗೋವಿಂದ ಶರ್ಮಾ. ಈಗಾಗಲೆ ಚಿತ್ರದ ಪೋಸ್ಟರ್ ಗಳು, ಸ್ಟಿಲ್ಸ್ ಸಾಕಷ್ಟು ವಿವಾದಕ್ಕೆ ಕಾರಣವಾಗಿವೆ. ವರ್ಮಾ ಮುಂದೆ ಯಾವ ಶೀರ್ಷಿಕೆ ಇಡುತ್ತಾರೋ ಕಾದು ನೋಡೋಣ.

More from Filmibeat

English summary
Sri Devi Sent a Legal Notice To RGV - Sri Devi , One of the most beautiful actress of 80's and 90's. She started her carrier as Child Artist and turned up as wanted Heroin of 90's. Even now If u look after her she looks ageless so she became favourite heroin of Sensational Director Ram Gopal Varma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X