ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರದಲ್ಲಿ ಆಲಿಯಾ ಭಟ್?

ಬಾಲಿವುಡ್ ತಾರೆಯರು ದಕ್ಷಿಣದ ಸಿನಿಮಾಗಳಲ್ಲಿ ನಟಿಸುವುದು ಹೊಸದೇನು ಅಲ್ಲ. ಆದರೆ ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಈ ಪ್ರಯತ್ನ ಹೆಚ್ಚಾಗುತ್ತಿದೆ. ಈಗಾಗಲೇ ರಾಜಮೌಳಿ ನಿರ್ದೇಶನದ 'RRR' ಚಿತ್ರದಲ್ಲಿ ಆಲಿಯಾ ಭಟ್ ನಟಿಸಿದ್ದರು. ಆದರೆ ರಾಮ್‌ಚರಣ್ ಜೋಡಿಯಾಗಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಆಲಿಯಾ ಭಟ್ ನಟಿಸುತ್ತಾರೆ ಎಂದು ಗುಲ್ಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಪ್ರಶಾಂತ್ ನೀಲ್ ಸಿನಿಮಾ ಮಾಡುವ ಸ್ಪೀಡ್ ಕಮ್ಮಿ ಆಗ್ತಿದೆ. 'ಉಗ್ರಂ' ಬಳಿಕ 'KGF' ಸರಣಿ ಸಿನಿಮಾಗಳನ್ನು ನೀಲ್ ಕೊಟ್ಟಿಕೊಟ್ಟಿದ್ದರು. ಬಳಿಕ 'ಉಗ್ರಂ' ಕಥೆಯನ್ನೇ 'ಸಲಾರ್' ಹೆಸರಿನಲ್ಲಿ ಎರಡು ಭಾಗಗಳಾಗಿ ತೆರೆಗೆ ತರುತ್ತಿದ್ದಾರೆ. ಈಗಾಗಲೇ 'ಸಲಾರ್- 1' ಸಿನಿಮಾ ಬಂದು ಹೋಗಿದೆ. ಪಾರ್ಟ್-2 ಸಿನಿಮಾ ಶುರುವಾಗಬೇಕಿದೆ. ಅದಕ್ಕೂ ಮುನ್ನ ತಾರಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Buzz Alia Bhatt Likely to Join Jr NTR and Prashanth Neel s Dragon

ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಕಾಂಬಿನೇಷನ್ ಚಿತ್ರಕ್ಕೆ 'ಡ್ರ್ಯಾಗನ್' ಎಂಬ ಟೈಟಲ್ ಪರಿಶೀಲನೆಯಲ್ಲಿದೆ ಚಿತ್ರತಂಡ. ಭರದಿಂದ ಸಿನಿಮಾ ಚಿತ್ರೀಕರಣ ನಡೀತಿದೆ. ಸಿಕ್ಸ್ ಪ್ಯಾಕ್ಸ್ ಹ್ಯಾಬ್ಸ್ ಮಾಡಿ ತಾರಕ್ ಹೊಸ ಶೆಡ್ಯೂಲ್‌ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಮೇ 20ರಂದು ಯಂಗ್ ಟೈಗರ್ ಹುಟ್ಟುಹಬ್ಬದ. ಅದೇ ಸಂಭ್ರಮದಲ್ಲಿ 'ಡ್ರ್ಯಾಗನ್' ಚಿತ್ರದ ಟೀಸರ್ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಇದೆಲ್ಲದರ ನಡುವೆ ಈ ಚಿತ್ರದಲ್ಲಿ ಆಲಿಯಾ ಭಟ್ ಕೂಡ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.

'ಡ್ರ್ಯಾಗನ್' ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಆಲಿಯಾ ನಟಿಸುವ ಬಗ್ಗೆ ಚರ್ಚೆ ನಡೀತಿದೆ ಎಂದು ಫಿಲ್ಮ್ ನಗರ್‌ನಲ್ಲಿ ಚರ್ಚೆ ಆಗ್ತಿದೆ. ತಾರಕ್ ಹಾಗೂ ಆಲಿಯಾ ಆತ್ಮೀಯ ಸ್ನೇಹಿತರು. 'RRR' ಚಿತ್ರದ ಒಂದೆರಡು ದೃಶ್ಯಗಳಲ್ಲಿ ಒಟ್ಟಿಗೆ ನಟಿಸಿದ್ದರು. ಚಿತ್ರದ ಪ್ರಚಾರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹಾಗಾಗಿ ಇಬ್ಬರ ನಡುವೆ ಆತ್ಮೀಯ ಸ್ನೇಹ ಒಡನಾಟವಿದೆ. 'ಡ್ರ್ಯಾಗನ್' ಚಿತ್ರದಲ್ಲಿ ಆಲಿಯಾ ನಟಿಸಿದ್ರು ಅಚ್ಚರಿ ಪಡಬೇಕಿಲ್ಲ. ಚಿತ್ರದ ವಿಶೇಷ ಪಾತ್ರದಲ್ಲಿ ಆಲಿಯಾ ನಟಿಸಬಹುದು ಎನ್ನಲಾಗ್ತಿದೆ.

Buzz Alia Bhatt Likely to Join Jr NTR and Prashanth Neel s Dragon

ಇದೇ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಮಲಯಾಳಂ ನಟ ಟೊವಿನೋ ಥಾಮಸ್ ಅವರನ್ನು ಚಿತ್ರತಂಡ ಸಂಪರ್ಕಿಸಿತ್ತು. ಆದರೆ ಟೊವಿನೋ ನಟಿಸೋಕೆ ಒಪ್ಪಲಿಲ್ಲ. ಆ ಪಾತ್ರದಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ ನಟಿಸುವ ಬಗ್ಗೆ ಗುಸುಗುಸು ಶುರುವಾಗಿದೆ. ಅನಿಲ್ ಕಪೂರ್ ಕೂಡ ಚಿತ್ರದಲ್ಲಿ ನಟಿಸ್ತಿದ್ದಾರೆ ಎನ್ನಲಾಗ್ತಿದೆ. ಆಲಿಯಾ ಭಟ್ ಕೂಡ ಜೊತೆಯಾದ್ರೆ 'ಡ್ರ್ಯಾಗನ್' ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಲಿದೆ.

ಮೈತ್ರಿ ಮೂವಿಮೇಕರ್ಸ್ ಹಾಗೂ ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಜಂಟಿಯಾಗಿ 'ಡ್ರ್ಯಾಗನ್' ಚಿತ್ರವನ್ನು ನಿರ್ಮಾಣ ಮಾಡುತ್ತಿವೆ. ಜೂನ್ 25ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ ಶೂಟಿಂಗ್ ತಡವಾಗುತ್ತಿದ್ದು ಮತ್ತೆ ರಿಲೀಸ್ ಡೇಟ್ ಮುಂದೂಡುವ ಸಾಧ್ಯತೆ ದಟ್ಟವಾಗಿದೆ. ಸಂಕ್ರಾಂತಿಗೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಬಳಿಕ 6 ತಿಂಗಳು ಪೋಸ್ಟ್ ಪೋನ್ ಮಾಡಲಾಗಿತ್ತು. ಇದೀಗ ಮತ್ತೆ 'ಡ್ರ್ಯಾಗನ್' ಎಂಟ್ರಿ ತಡವಾಗುವ ಬಗ್ಗೆ ಚರ್ಚೆ ನಡೀತಿದೆ.

ಪ್ರಶಾಂತ್ ನೀಲ್ 'ಡ್ರ್ಯಾಗನ್' ಸಿನಿಮಾ ಮುಗಿಸಿ 'ಸಲಾರ್- 2' ನಿರ್ದೇಶನ ಮಾಡಬೇಕಿದೆ. ಆ ಬಳಿಕ 'KGF- 3' ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿದೆ. 'KGF- 2' ತೆರೆಕಂಡು 4 ವರ್ಷ ಕಳೆದಿದೆ. ಹಾಗಾಗಿ ಚಾಪ್ಟರ್-3 ಯಾವಾಗ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.

More from Filmibeat

Read more about: ntr prashanth neel alia bhatt
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X