Anushka Shetty: ಕ್ರೇಜಿ ಕಾಂಬೊದಲ್ಲಿ ಸ್ವೀಟಿ ನೆಕ್ಸ್ಟ್ ಸಿನಿಮಾ.. ಆ ಸೀನಿಯರ್ ಹೀರೊ ಚಿತ್ರಕ್ಕೆ ಗ್ರೀನ್ ಸಿಗ್ನಲ್

ಸೌತ್ ಸಿನಿದುನಿಯಾದಲ್ಲಿ ಸ್ಟಾರ್ ನಟಿಯಾಗಿ ಮೆರೆದ ಅನುಷ್ಕಾ ಶೆಟ್ಟಿ ದಿಢೀರನೆ ಸೈಲೆಂಟ್ ಆಗಿಬಿಟ್ಟರು. 'ಬಾಹುಬಲಿ' ಸರಣಿ ಬಳಿಕ ಸ್ವೀಟಿ ಅಷ್ಟಾಗಿ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. 'ಸೈಜ್ ಜೀರೊ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದೆ ಇದ್ದಕ್ಕೆ ಕಾರಣ ಎನ್ನಲಾಯಿತು. ಸದ್ಯ ಅನುಷ್ಕಾ ಶೆಟ್ಟಿ ನಟನೆಯ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

'ಬಾಹುಬಲಿ' ಸರಣಿ ನಂತರ 'ಭಾಗಮತಿ' ಹಾಗೂ 'ನಿಶಬ್ಧಂ' ಸಿನಿಮಾಗಳಲ್ಲಿ ಮಾತ್ರ ಕರಾವಳಿ ಚೆಲುವೆ ನಟಿಸಿದ್ದರು. ಬಹಳ ಗ್ಯಾಪ್ ಬಳಿಕ ಆಕೆ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಚಿತ್ರದಲ್ಲಿ ಮಾಸ್ಟರ್ ಶೆಪ್ ಅನ್ವಿತಾ ರವಳಿ ಶೆಟ್ಟಿ ಪಾತ್ರದಲ್ಲಿ ಸ್ವೀಟಿ ಮೋಡಿ ಮಾಡಿದ್ದಾರೆ. ವಯಸ್ಸಿಗೆ ತಕ್ಕ ಪಾತ್ರದಲ್ಲಿ ಮಿಂಚಿದ್ದರು. ವಿಭಿನ್ನ ಕಾನ್ಸೆಪ್ಟ್ ಚಿತ್ರವನ್ನು ಒಪ್ಪಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ.

Buzz: Anushka Shetty to join hands with Chiranjeevi for Mega157?

ವಯಸ್ಸು 35 ದಾಟಿದರೂ ಮದುವೆ ಬೇಡ, ಆದರೆ ಮಗು ಮಾತ್ರ ಬೇಕು ಎಂದು ಮಾಸ್ಟರ್ ಶೆಫ್ ಅನ್ವಿತಾ ಬಯಸುತ್ತಾಳೆ. ಅದಕ್ಕಾಗಿ ಆಕೆ ಐವಿಎಫ್ ಪ್ರಕ್ರಿಯೆಯ ಮೂಲಕ ಮಗು ಪಡೆಯಲು ತೀರ್ಮಾನಿಸುತ್ತಾಳೆ. ಈ ಹಾದಿಯಲ್ಲಿ ಸ್ಟ್ಯಾಂಡಪ್ ಕಾಮೆಡಿಯನ್ ಪೊಲಿಶೆಟ್ಟಿ ಪರಿಚಯವಾಗಿ ಮುಂದೆ ಏನೆಲ್ಲಾ ಆಗುತ್ತದೆ ಎನ್ನುವ ಕಥೆ ಬಹಳ ಇಂಟ್ರೆಸ್ಟಿಂಗ್ ಎನಿಸುತ್ತದೆ. ಈ ವಿಭಿನ್ನ ಕಥೆಯಲ್ಲಿ ನವೀನ್ ಪೊಲಿಶೆಟ್ಟಿ ಹೀರೊ ಆಗಿ ಕಾಣಿಸಿಕೊಂಡಿದ್ದರು.

'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ನೋಡಿ ಮೆಗಾಸ್ಟಾರ್ ಚಿರಂಜೀವಿ ಕೂಡ ಮೆಚ್ಚಿಕೊಂಡಿದ್ದರು. ಚಿತ್ರತಂಡದ ಪ್ರಯತ್ನಕ್ಕೆ ಬೆನ್ನು ತಟ್ಟಿದ್ದರು. ಇದೀಗ ಚಿರಂಜೀವಿ ಮುಂದಿನ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಸ್ವೀವಿ ಈ ಹಿಂದೆ ಚಿರಂಜೀವಿ ನಟನೆಯ 2 ಸಿನಿಮಾಗಳ ಭಾಗವಾಗಿದ್ದರು.

Buzz: Anushka Shetty to join hands with Chiranjeevi for Mega157?

'ಸ್ಟಾಲಿನ್' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಚಿರಂಜೀವಿ ಜೊತೆ ಅನುಷ್ಕಾ ಶೆಟ್ಟಿ ಹೆಜ್ಜೆ ಹಾಕಿದ್ದರು. ಬಳಿಕ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಝಾನ್ಸಿ ರಾಣಿಯಾಗಿ ದರ್ಶನ ಕೊಟ್ಟಿದ್ದರು. ಆದರೆ ಈ ಚಿತ್ರದಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿರಲಿಲ್ಲ. ಆದರೆ ಈ ಬಾರಿ ಇಬ್ಬರೂ ನಾಯಕ- ನಾಯಕಿಯಾಗಿಯೇ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

ಚಿರಂಜೀವಿ ನಟನೆಯ 157ನೇ ಸಿನಿಮಾ ಇತ್ತೀಚೆಗೆ ಘೋಷಣೆಯಾಗಿತ್ತು. ಯುವ ನಿರ್ದೇಶಕ ವಶಿಷ್ಠ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಯುವಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಈ ಸೋಶಿಯೋ ಫ್ಯಾಂಟಸಿ ಚಿತ್ರದಲ್ಲಿ ಮೆಗಾ ಸ್ಟಾರ್ ಜೊತೆ ಸ್ವೀಟಿ ಬಣ್ಣ ಹಚ್ಚುತ್ತಾರೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ಶುರುವಾಗಿದೆ.

ಯುವಿ ಕ್ರಿಯೇಷನ್ಸ್ ಒಂದರ್ಥದಲ್ಲಿ ಅನುಷ್ಕಾ ಶೆಟ್ಟಿಗೆ ಮಾತೃಸಂಸ್ಥೆ. ಇದೇ ಬ್ಯಾನರ್‌ನಲ್ಲಿ ನಿರ್ಮಾಣವಾದ ಭಾಗಮತಿ ಹಾಗೂ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ. ಹಾಗಾಗಿ ಈ ಬಾರಿ ಕೂಡ ನಟಿಸೋದು ಪಕ್ಕಾ ಎನ್ನಲಾಗ್ತಿದೆ. ಈಗಾಗಲೇ ಸ್ವೀಟಿಗೆ ನಿರ್ದೇಶಕ ವಶಿಷ್ಠ ಕಥೆ ಕೂಡ ಹೇಳಿದ್ದಾರಂತೆ. ಅಂತೂ ಇಂತೂ ಚಿರಂಜೀವಿ ಜೊತೆ ಅನುಷ್ಕಾ ಪೂರ್ಣಪ್ರಮಾಣದ ನಾಯಕಿಯಾಗಿ ನಟಿಸೋದು ಪಕ್ಕಾ ಎನ್ನಲಾಗ್ತಿದೆ.

'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಬಳಿಕ ಒಂದು ಮಲಯಾಳಂ ಚಿತ್ರವನ್ನು ಮಾತ್ರ ಸ್ವೀಟಿ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅನುಷ್ಕಾ ಶೆಟ್ಟಿ 'ಬಾಹುಬಲಿ- 2' ಬಳಿಕ ವಿಶ್ರಾಂತಿ ಪಡೆಯಬೇಕು ಎನ್ನುವ ಕಾರಣಕ್ಕೆ ಸಿನಿಮಾಗಳಿಂದ ದೂರ ಉಳಿದಿದ್ದಾಗಿ ಹೇಳಿದ್ದರು. ಒಳ್ಳೆ ಕತೆ ಸಿಕ್ಕರೆ ಮತ್ತೆ ಪ್ರಭಾಸ್ ಜೊತೆ ನಟಿಸುವ ಇಂಗಿತ ವ್ಯಕ್ತಪಡಿಸಿದ್ದರು.

ಚಿರಂಜೀವಿ ಸತತ ಸೋಲುಗಳಿಂದ ಕಂಗೆಟ್ಟಿದ್ದಾರೆ. 'ಆಚಾರ್ಯ' ಸೋಲಿನ ಬಳಿಕ 'ವಾಲ್ತೇರು ವೀರಯ್ಯ' ಆಗಿ ಚಿರು ಗೆದ್ದಿದ್ದರು. ಆದರೆ 'ಗಾಡ್ ಫಾದರ್' ಹಾಗೂ 'ಭೋಳಾ ಶಂಕರ್' ದೊಡ್ಡ ಪೆಟ್ಟು ಕೊಟ್ಟಿತ್ತು. ಇತ್ತೀಚೆಗೆ ಬಂದ 'ಭೋಳಾ ಶಂಕರ್' ಚಿತ್ರವನ್ನು ಜನ ಓಟಿಟಿಯಲ್ಲಿ ನೋಡೋಕು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಒಂದೊಳ್ಳೆ ಸಿನಿಮಾ ಮೂಲಕ ಭರ್ಜರಿ ಕಂಬ್ಯಾಕ್ ಮಾಡಲು ಮೆಗಾಸ್ಟಾರ್ ಪ್ರಯತ್ನಿಸುತ್ತಿದ್ದಾರೆ.

More from Filmibeat

English summary
Mega 157: Anushaka shetty in talks to romance with Chiranjeevi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X