ಶಿವಣ್ಣನ ಜೊತೆ ಅನುಷ್ಕಾ ಶೆಟ್ಟಿ ಕೂಡ ಆ ಚಿತ್ರಕ್ಕೆ ಎಂಟ್ರಿ? ಈ ಸಾಹಸ ಯಾಕೆ?

ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. 'ಬಾಹುಬಲಿ' ಸರಣಿ ಬಳಿಕ ಸ್ವೀಟಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿತ್ತು. ನಟರ ಜೊತೆ ರೊಮ್ಯಾನ್ಸ್ ಮಾಡುವುದು ಬಿಟ್ಟು ಲೀಡ್ ರೋಲ್‌ಗಳಿರುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಕಳೆದ ವರ್ಷ ಅನುಷ್ಕಾ ಶೆಟ್ಟಿ ನಟನೆಯ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ಬಿಡುಗಡೆಯಾಗಿತ್ತು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಅಬ್ಬರಿಸದಿದ್ದರೂ ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ತೆಲುಗಿನ 'ಘಾಟಿ' ಚಿತ್ರದಲ್ಲಿ ಸ್ವೀಟಿ ನಟಿಸುತ್ತಿದ್ದಾರೆ. ಮಲಯಾಳಂ 'ಕಥನಾರ್' ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಸಿನಿಮಾ ಚಿತ್ರೀಕರಣ ಕೂಡ ಇತ್ತೀಚೆಗೆ ಶುರುವಾಗಿತ್ತು.

Buzz Anushka shetty to join the cast of this panindia project

ಕೊಂಚ ದೇಹದ ತೂಕ ಇಳಿಸಿ ಅನುಷ್ಕಾ ಶೆಟ್ಟಿ ತೆಳ್ಳಗಾಗಿದ್ದಾರೆ. ಮತ್ತೆ ತೆರೆಮೇಲೆ ನೆಚ್ಚಿನ ನಟಿಯನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೆಲ್ಲದರ ನಡುವಡ 'ಕಣ್ಣಪ್ಪ' ಚಿತ್ರದಲ್ಲಿ ಕೂಡ ಸ್ವೀಟಿ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಮಂಚು ವಿಷ್ಣು ಹೀರೊ ಆಗಿ ನಟಿಸುತ್ತಿರುವ 'ಕಣ್ಣಪ್ಪ' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.

ಪ್ರಭಾಸ್, ಮೋಹನ್ ಲಾಲ್, ಮಧೂ, ದೇವರಾಜ್, ಬ್ರಹ್ಮಾನಂದಂ, ಶಿವರಾಜ್‌ಕುಮಾರ್ ಸೇರಿದಂತೆ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಫ್ಯಾಂಟಸಿ ಡ್ರಾಮಾ ಸಿನಿಮಾ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಕನ್ನಡದಲ್ಲಿ ಡಾ. ರಾಜ್‌ಕುಮಾರ್ ನಟಿಸಿದ್ದ 'ಬೇಡರ ಕಣ್ಣಪ್ಪ' ಹಾಗೂ ಶಿವಣ್ಣನ ಶಿವ 'ಮೆಚ್ಚಿದ ಕಣ್ಣಪ್ಪ' ಸಿನಿಮಾಗಳ ರೀಮೆಕ್ ಇದು. 70 ದಶಕದಲ್ಲೇ ಈ ಕಥೆಯನ್ನು ಆಧರಿಸಿ ತೆಲುಗಿನಲ್ಲಿ ಸಿನಿಮಾ ಬಂದಿತ್ತು. ಅದೇ ಕಥೆಯನ್ನು ಮತ್ತೊಮ್ಮೆ ಹೇಳುವ ಪ್ರಯತ್ನ ನಡೀತಿದೆ.

ಕಣ್ಣಪ್ಪನ ಪಾತ್ರದಲ್ಲಿ ಮಂಚು ವಿಷ್ಣು ಬಣ್ಣ ಹಚ್ಚಿದ್ದಾರೆ. ನ್ಯೂಜಿಲ್ಯಾಂಡ್‌ನಲ್ಲಿ ಒಂದು ಶೆಡ್ಯೂಲ್ ಚಿತ್ರೀಕರಣ ಕೂಡ ನಡೆದಿದೆ. 100 ಕೋಟಿ ಬಜೆಟ್‌ನಲ್ಲಿ ಮೋಹನ್ ಬಾಬು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಮೋಹನ್ ಲಾಲ್, ಪ್ರಭಾಸ್ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

Buzz Anushka shetty to join the cast of this panindia project

'ಜೈಲರ್' ಚಿತ್ರದ ಅಥಿತಿ ಪಾತ್ರದಲ್ಲಿ ಶಿವಣ್ಣ ಅಬ್ಬರಿಸಿ ಗೆದ್ದಿದ್ದರು. ಹಾಗಾಗಿ ಪರಭಾಷೆಯಿಂದ ಸಾಕಷ್ಟು ಆಫರ್ ಬರ್ತಿದೆ. ಕಣ್ಣಪ್ಪ ಚಿತ್ರದಲ್ಲಿ ಶಿವಣ್ಣ ಕೂಡ ನಟಿಸುವ ಸಾಧ್ಯತೆಯಿದೆ. ಇನ್ನು ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಕೂಡ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ವದಂತಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಅನುಷ್ಕಾ ಶೆಟ್ಟಿ ಕೂಡ ತಂಡ ಸೇರುವ ಬಗ್ಗೆ ಊಹಾಪೋಹ ಶುರುವಾಗಿದೆ.

'ಓ ಮೈ ಗಾಡ್'-2 ಚಿತ್ರದಲ್ಲಿ ಶಿವನ ದೂತನಾಗಿ ಅಕ್ಷಯ್ ಕುಮಾರ್ ನಟಿಸಿದ್ದರು. ಇದೀಗ ಕಣ್ಣಪ್ಪ ಚಿತ್ರದಲ್ಲಿ ಅಕ್ಷಯ್ ಶಿವನ ಪಾತ್ರದಲ್ಲೇ ನಟಿಸುತ್ತಾರೆ ಎನ್ನಲಾಗ್ತಿದ್ದು ಪಾರ್ವತಿಯಾಗಿ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಪಾರ್ವತಿ ಪಾತ್ರವನ್ನು ನಯನತಾರಾ ಮಾಡುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆದಿತ್ತು.

'ಕಣ್ಣಪ್ಪ' ಚಿತ್ರದ ಸ್ಟಾರ್‌ಕಾಸ್ಟ್ ಕುತೂಹಲ ಮೂಡಿಸಿದೆ. ಮತ್ತೊಂದು ಕಡೆ ಕೆಲವರಿಗೆ ಭೀತಿ ತಂದಿದೆ. ಕಣ್ಣಪ್ಪ ಚಿತ್ರದಲ್ಲಿ ನಟಿಸೋಕೆ ಅದ್ಭುತ ಕಲಾವಿದರಾಗಿದ್ದರೆ ಸಾಕು. ಸ್ಟಾರ್ ನಟ, ನಟಿಯರೇ ಯಾಕೆ ಬೇಕು? ಇಂತಹ ದೊಡ್ಡ ಸ್ಟಾರ್‌ಕಾಸ್ಟ್ ಇದ್ದಾಗ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗುತ್ತದೆ. ಅದನ್ನು ತಲುಪದಿದ್ದಾಗ ಮಾಡಿದ್ದೆಲ್ಲಾ ವ್ಯರ್ಥವಾಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಒಟ್ಟಾರೆ ಮೇಕಿಂಗ್ ಹಂತದಲ್ಲೇ 'ಕಣ್ಣಪ್ಪ' ಸಿನಿಮಾ ಭಾರೀ ಸದ್ದು ಮಾಡ್ತಿದೆ.

More from Filmibeat

English summary
After Shivarajkumar, Anushka shetty Comes Onboard for this film?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X