ದರ್ಶನ್ 'ಡೆವಿಲ್' ಚಿತ್ರಕ್ಕೆ ನಾಯಕಿಯಾಗಿ ತುಳುನಾಡ ಸುಂದ್ರಿ? ದಿಢೀರ್ ಹೆಚ್ಚಾಯ್ತು ಆಕೆ ಇನ್‌ಸ್ಟಾ ಫಾಲೋವರ್ಸ್ ಸಂಖ್ಯೆ
'ಕಾಟೇರ' ಸಕ್ಸಸ್ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ದಿ ಹೀರೊ ಸಿನಿಮಾ ಭಾರೀ ಸುದ್ದಿಯಲ್ಲಿದೆ. ಈ ಬಾರಿ ದರ್ಶನ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ಪ್ಲ್ಯಾನ್ ಮಾಡ್ತಿದೆ ಚಿತ್ರತಂಡ. ಮಿಲನಾ ಪ್ರಕಾಶ್ ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಈಗಾಗಲೇ 'ಡೆವಿಲ್' ದಿ ಹೀರೊ ಸಿನಿಮಾ ಮುಹೂರ್ತ ಸಹ ನೆರವೇರಿದೆ. ಇದಕ್ಕೂ ಮುನ್ನ ದರ್ಶನ್ ಹಾಗೂ ಪ್ರಕಾಶ್ ಕಾಂಬಿನೇಷನ್‌ನಲ್ಲಿ 'ತಾರಕ್' ಸಿನಿಮಾ ಮೂಡಿಬಂದಿತ್ತು. ಹಾಗಾಗಿ ಸಹಜವಾಗಿಯೇ ಈ ಜೋಡಿಯ ಎರಡನೇ ಸಿನಿಮಾ ಕುತೂಹಲ ಮೂಡಿಸಿದೆ. ಚಿತ್ರದ ಸ್ಟಾರ್‌ಕಾಸ್ಟ್ ಬಗ್ಗೆ ಕೂಡ ಬಿಸಿಬಿಸಿ ಚರ್ಚೆ ನಡೀತಿದೆ. ಕರಾವಳಿ ಮೂಲದ ರಚನಾ ರೈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಭಾರೀ ಸದ್ದು ಮಾಡ್ತಿದೆ. 'ಡೆವಿಲ್' ಚಿತ್ರಕ್ಕೆ ನಾಯಕಿ ಯಾರು ಎನ್ನುವುದು ಅಧಿಕೃತವಾಗಿ ಘೋಷಣೆ ಆಗಿಲ್ಲ. ಆದರೆ ರಚನಾ ರೈ ಆಯ್ಕೆ ಖಚಿತ ಎನ್ನುವ ಮಾತುಗಳು ಕೇಳಿಬರ್ತಿದೆ. ಇದರ ಬೆನ್ನಲ್ಲೇ ಆಕೆ ಯಾರು? ಹಿನ್ನೆಲೆ ಏನು ಎಂದು ದರ್ಶನ್ ಅಭಿಮಾನಿಗಳು ಹುಡುಕಲು ಆರಂಭಿಸಿದ್ದಾರೆ.
ಪುತ್ತೂರಿನಲ್ಲಿ ಹುಟ್ಟಿ ಬೆಳೆದ ರಚನಾ ರೈ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದಾರೆ. 'ಸರ್ಕಸ್' ಎನ್ನುವ ತುಳು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಸದ್ಯ ಧನ್ವೀರ್ ಗೌಡ ನಟನೆಯ 'ವಾಮನ' ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಕೋಸ್ಟಲ್‌ವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ಇದೀಗ 'ಡೆವಿಲ್' ದರ್ಶನ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.

ದರ್ಶನ್ ಜೊತೆ ರಚನಾ ರೈ ನಟಿಸುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದ್ದಂತೆ ಅಭಿಮಾನಿಗಳು ಆಕೆಯ ಇನ್‌ಸ್ಟಾಗ್ರಾಂ ಅಕೌಂಟ್ ತಡಕಾಡಲು ಆರಂಭಿಸಿದ್ದಾರೆ. ದಿಢೀರ್ ಆಕೆಯ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ದರ್ಶನ್ ಅಭಿಮಾನಿಗಳು ಇನ್‌ಸ್ಟಾದಲ್ಲಿ ಆಕೆಯನ್ನು ಹೆಚ್ಚು ಫಾಲೋ ಮಾಡಲು ಆರಂಭಿಸಿದ್ದಾರೆ. ಇನ್ನು ಆಕೆಯ ಫೋಟೊಗಳು ಸಖತ್ ವೈರಲ್ ಆಗುತ್ತಿದೆ.
'ಡೆವಿಲ್' ಚಿತ್ರದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಕ್ತಾಯವಾಗಿದೆ ಎನ್ನುವ ವದಂತಿ ಕೂಡ ಹರಿದಾಡ್ತಿದೆ. ಆದರೆ ಇನ್ನು ಸಿನಿಮಾ ಚಿತ್ರೀಕರಣ ಶುರುವಾಗಿಲ್ಲ. ಆದರೆ ಫಸ್ಟ್ ಲುಕ್ ಟೆಸ್ಟ್ ಮಾತ್ರ ನಡೆದಿದೆ. ಭರ್ಜರಿ ಫೋಟೊಶೂಟ್ ಮಾಡಲಾಗಿದ್ದು ಹೊಸ ಲುಕ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಇತ್ತೀಚೆಗೆ ದರ್ಶನ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಫೋಟೊಗಳು ವೈರಲ್ ಆಗಿತ್ತು.
ಅಜನೀಶ್ ಲೋಕನಾಥ್ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ 'ಡೆವಿಲ್' ಚಿತ್ರಕ್ಕಿದೆ. 'ತಾರಕ್' ಬಳಿಕ ಪ್ರಕಾಶ್ ಯಾವುದೇ ಸಿನಿಮಾ ಮಾಡಿರಲಿಲ್ಲ. 6 ವರ್ಷಗಳ 'ಡೆವಿಲ್' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ ಸಹ ನಿರ್ಮಾಪಕರು ಆಗಿದ್ದಾರೆ.
ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ತರುಣ್ ಸುಧೀರ್ ನಿರ್ದೇಶನದ ಸಿನಿಮಾ 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. 6ನೇ ವಾರವೂ ಥಿಯೇಟರ್‌ಗಳಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಫೆಬ್ರವರಿ 9ಕ್ಕೆ ಚಿತ್ರವನ್ನು ಓಟಿಟಿಗೆ ತರಲಾಗುತ್ತಿದೆ. ಹೌದು ಈಗಾಗಲೇ ಜೀ5 ಸಂಸ್ಥೆ ಈ ವಿಚಾರವನ್ನು ಟ್ರೈಲರ್ ಸಮೇತ ಘೋಷಿಸಿದೆ.
'ಕಾಟೇರ' ಸಿನಿಮಾ 50 ದಿನ ಪೂರೈಸುವವರೆಗೂ ಕಾಯಬೇಕಿತ್ತು. ಇಷ್ಟು ಬೇಗ ಓಟಿಟಿ ಸ್ಟ್ರೀಮಿಂಗ್ ಮಾಡುತ್ತಿರುವುದು ಸರಿಯಲ್ಲ ಎಂದು ದರ್ಶನ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬೇರೆ ಭಾಷೆಗಳಲ್ಲಿ ಸಿನಿಮಾ ಡಬ್ ಆಗಿ ರಿಲೀಸ್ ಆಗುವುದು? ಅನುಮಾನ ಎನ್ನಲಾಗುತ್ತಿದೆ. ತೆಲುಗು, ತಮಿಳಿಗೆ ಡಬ್ ಆಗಿ ನೇರವಾಗಿ ಓಟಿಟಿಗೆ ಬರುತ್ತಾ ಕಾದು ನೋಡಬೇಕಿದೆ.


Click it and Unblock the Notifications











