ಧ್ರುವ ಸರ್ಜಾ- ನರ್ತನ್ ಜೋಡಿಯ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ?
ಸ್ಯಾಂಡಲ್‌ವುಡ್‌ನಲ್ಲೀಗ ಕ್ರೇಜಿ ಪ್ರಾಜೆಕ್ಟ್‌ಗಳು ಸದ್ದು ಮಾಡ್ತಿದೆ. ಒಂದಕ್ಕಿಂತ ಒಂದು ದೊಡ್ಡ ಸಿನಿಮಾ ನಿರ್ಮಾಣವಾಗುತ್ತಿದೆ. ಇನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬರ್ತಿದೆ. ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲಿ ಸಂಸ್ಥೆ ಹಣ ಹೂಡಿಕೆ ಮಾಡುತ್ತಿದೆ. ಇದೀಗ ಕನ್ನಡದಲ್ಲೇ ಮತ್ತೊಂದು ಕ್ರೇಜಿ ಪ್ರಾಜೆಕ್ಟ್ ಕೈಗೆತ್ತಿಕೊಳ್ತಿದೆ ಎನ್ನುವ ಗುಸುಗುಸು ಶುರುವಾಗಿದೆ.
ಧ್ರುವ ಸರ್ಜಾ ನಟನೆಯ ಚಿತ್ರಕ್ಕೆ 'ಮಫ್ತಿ' ಸಿನಿಮಾ ಖ್ಯಾತಿಯ ನರ್ತನ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನಲಾಗ್ತಿದೆ. ಅಷ್ಟೇ ಈ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಇದನ್ನು ಕೇಳಿ ಕನ್ನಡ ಸಿನಿರಸಿಕರು ಖುಷಿಯಾಗಿದ್ದಾರೆ. ಮಾಸ್ ಹೀರೊ, ಮಾಸ್ ಡೈರೆಕ್ಟರ್ ಜೊತೆಗೆ ದೊಡ್ಡ ನಿರ್ಮಾಣ ಸಂಸ್ಥೆ ಜೊತೆಯಾದರೆ ಅದ್ಭುತ ಸಿನಿಮಾ ಮೂಡಿ ಬರೋದು ಗ್ಯಾರೆಂಟಿ.

ಸದ್ಯ ಧ್ರುವ ಸರ್ಜಾ 'ಮಾರ್ಟಿನ್' ಹಾಗೂ 'KD' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಮನರಂಜನೆ ಕ್ಷೇತ್ರದ ಮೇಲೆ 3000 ಕೋಟಿ ರೂ. ವ್ಯಯಿಸುವುದಾಗಿ ವರ್ಷದ ಹಿಂದೆ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದರು. ಸದ್ಯ ಸಂಸ್ಥೆಯ 'ಸಲಾರ್' ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡ್ತಿದೆ. 600 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ.
ಕನ್ನಡದ 'ಯುವ', 'ಬಘೀರ', 'ರಿಚರ್ಡ್ ಆಂಟನಿ', 'ಕಾಂತಾರ' ಸೇರಿದಂತೆ ತಮಿಳಿನ 'ರಘುತಾತ', ಮಲಯಾಳಂನ 'ಟೈಸನ್' ಸಿನಿಮಾಗಳ ಕೆಲಸ ನಡೀತಿದೆ. 'KGF'- 3 ಚಿತ್ರವನ್ನು ಕೂಡ ಅನೌನ್ಸ್ ಮಾಡಲಾಗಿದೆ. ಇದೆಲ್ಲದರ ನಡುವೆ ಈಗ ಧ್ರುವ- ನರ್ತನ್ ಕಾಂಬಿನೇಷನ್ ಸಿನಿಮಾ ವಿಚಾರ ಭಾರೀ ಸದ್ದು ಮಾಡ್ತಿದೆ.
ಮಾಸ್ ಸಿನಿಮಾಗಳಿಂದ ಧ್ರುವ ಸರ್ಜಾ ಕನ್ನಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. 'ಮಾರ್ಟಿನ್' ಹಾಗೂ 'KD' ಸಿನಿಮಾಗಳಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಲು ಸಿದ್ಧತೆ ನಡೆಸಿದ್ದಾರೆ. ಮತ್ತೊಂದು ಒಂದೇ ಒಂದು ಸಿನಿಮಾ ನಿರ್ದೇಶನ ಮಾಡಿ ನರ್ತನ್ ಭಾರೀ ಜನಪ್ರಿಯತೆ ಗಳಿಸಿದ್ದಾರೆ. 'KGF- 2' ಬಳಿಕ ಯಶ್ ನಟನೆಯ ಚಿತ್ರವನ್ನು ನಿರ್ದೇಶನ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ.
ಶಿವರಾಜ್‌ಕುಮಾರ್ ನಟನೆಯ 'ಭೈರತಿ ರಣಗಲ್' ಚಿತ್ರವನ್ನು ನರ್ತನ್ ಈಗ ಕಟ್ಟಿಕೊಡುತ್ತಿದ್ದಾರೆ. ಈಗಾಗಲೇ ಚಿತ್ರದ 60%ರಷ್ಟು ಚಿತ್ರೀಕಣ ಮುಕ್ತಾಯವಾಗಿದೆ. ಇಂತಹ ಸಮಯದಲ್ಲೇ ಇವರಿಬ್ಬರ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಸದ್ಯ ಸಿಗುತ್ತಿರುವ ಮಾಹಿತಿ ಪ್ರಕಾರ ಇಂತಹ ಯಾವುದೇ ಮಾತುಕತೆ ನಡೆದಿಲ್ಲ ಎನ್ನಲಾಗುತ್ತಿದೆ.
ಧ್ರುವ ಸರ್ಜಾ ನಟನೆಯ ಸಿನಿಮಾಗಳು ತೆರೆಗೆ ಬರುವುದು ಪದೇ ಪದೆ ತಡವಾಗುತ್ತಿದೆ. ಕಳೆದ ವರ್ಷವೇ ಬರಬೇಕಿದ್ದ 'ಮಾರ್ಟಿನ್' ಇನ್ನು ಥಿಯೇಟರ್ ಕಡೆ ಮುಖ ಮಾಡಿಲ್ಲ. ಇನ್ನು ಜೋಗಿ ಪ್ರೇಮ್ ನಿರ್ದೇಶನದ 'KD' ಚಿತ್ರೀಕರಣ ಭರದಿಂದ ಸಾಗಿದೆ. ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ ಚಿತ್ರದ ತಾರಾಗಣದಲ್ಲಿದ್ದಾರೆ. ಈ ತಂಡಕ್ಕೆ ವಿಜಯ್ ಸೇತುಪತಿ ಕೂಡ ಸೇರಿಕೊಳ್ಳುತ್ತಾರೆ ಎನ್ನಲಾಗ್ತಿದೆ.

ಉದಯ್ ಕೆ. ಮೆಹ್ತಾ ನಿರ್ಮಾಣದ 'ಮಾರ್ಟಿನ್' ಚಿತ್ರಕ್ಕೆ ಎ. ಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದಾರೆ. ಒಂದು ಹಾಡನ್ನು ಹೊರತುಪಡಿಸಿ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿರುವುದಾಗಿ ನಿರ್ಮಾಪಕರು ಹೇಳಿದ್ದಾರೆ. 9 ಕೋಟಿ ರೂ.ಗೆ ಚಿತ್ರದ ಆಡಿಯೋ ರೈಟ್ಸ್ ಮಾರಾಟವಾಗಿರುವುದಾಗಿ ಮಾಹಿತಿ ಸಿಕ್ಕಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಚಾಲ್ತಿಯಲ್ಲಿದೆ.
ನರ್ತನ್ ತೆಲುಗಿನಲ್ಲಿ ರಾಮ್‌ಚರಣ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮಾತುಕತೆ ನಡೀತಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಕೂಡ ಮೂಡಿ ಬರಲಿದೆ.


Click it and Unblock the Notifications











