ಕನ್ನಡ ಕಿರುತೆರೆಯ ಶ್ರೀಮಂತ ಆ್ಯಂಕರ್‌ ಅನುಶ್ರೀ? ಮಾತಿನ ಮಲ್ಲಿ ಬಳಿ ಇರುವ ಆಸ್ತಿ ಒಟ್ಟು ಎಷ್ಟು?

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಕಿರುತೆರೆಯ ಮಾತಿನ ಮಲ್ಲಿ ಅನುಶ್ರೀ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಮಾತಿನಲ್ಲೇ ಮೋಡಿ ಮಾಡುವ ಈ ನಿರೂಪಕಿಯನ್ನು ಆಂಕರ್ ಅನುಶ್ರೀ ಅಂತಲೇ ಜನಪ್ರಿಯ. ಕನ್ನಡ ನಂಬರ್ ಒನ್ ಮನರಂಜನಾ ಚಾನೆಲ್ ಜೀ ಕನ್ನಡದ ಪರ್ಮನೆಂಟ್ ಆಂಕರ್ ಆಗಿಬಿಟ್ಟಿದ್ದಾರೆ. ಇವರು ಉಲ್ಲದೇ ಇದ್ದರೆ ಕಿರುತೆರೆ ವೀಕ್ಷಕರು ರಿಯಾಲಿಟೀ ಶೋ ನೋಡುವುದೇ ಅನುಮಾನ ಅಂತಾಗಿಬಿಟ್ಟಿದೆ.

ಹಾಗಂತ ಅನುಶ್ರೀ ಕೇವಲ ಕಿರುತೆರೆಯ ನಿರೂಪಕಿ ಅಷ್ಟೇ ಅಲ್ಲ. ಅದೆಷ್ಟೇ ಇವೆಂಟ್‌ಗಳಿಗೆ ಆ್ಯಂಕರಿಂಗ್ ಮಾಡಿದ್ದಾರೆ. ಸಿನಿಮಾದ ಪ್ರೀ ರಿಲೀಸ್‌ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ಕನ್ನಡದ ಸ್ಟಾರ್ ಆ್ಯಂಕರ್‌ ಯಾರು ಅಂತ ಯಾರನ್ನೇ ಕೇಳಿದರೂ ಅವರ ಬಾಯಿಯಲ್ಲಿ ಬರುವ ಹೆಸರೇ ಅನುಶ್ರೀ. ನಟಿಯಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಅದ್ಯಾಕೋ ಅವರ ಕೈ ಹಿಡಿಯಲಿಲ್ಲ.

Buzz going around about Kannada anchor Anushree s net worth Here are the details

ವೇದಿಕೆ ಮೇಲೆ ಅನುಶ್ರೀ ಇದ್ದ ಚೆಂದ. ನಿರೂಪಣೆ ಮಾಡಿದರೇನೆ ಮನರಂಜನೆ ಅನ್ನುವಂತಾಗಿದೆ. ಕೆಲವು ದಿನಗಳ ಹಿಂದಷ್ಟೇ ಅವರ ಮದುವೆ ಬಗ್ಗೆ ಚರ್ಚೆಯಾಗುತ್ತಿದೆ. ಅದೇ ಮತ್ತೊಂದು ಕಡೆ ಮಾತಿನ ಮಲ್ಲಿ ಬಳಿ ಇವರ ಒಟ್ಟು ಆಸ್ತಿ ಅನ್ನೋದು ಕುತೂಹಲ ಕೂಡ ಚರ್ಚೆಯಾಗುತ್ತಿದೆ. ಸದ್ಯಕ್ಕಿರುವ ಚರ್ಚೆಯಾಗುತ್ತಿರುವ ಪ್ರಕಾರ, ಆ್ಯಂಕರ್‌ ಅನುಶ್ರೀ ಕರ್ನಾಟಕದ ಅತ್ಯಂತ ಶ್ರೀಮಂತ ನಿರೂಪಕಿ.

ಅನುಶ್ರೀ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಿರೂಪಕಿ. ಸದ್ಯ ಇವರಿಗೆ ಇರುವ ಬೇಡಿಕೆ ಅಷ್ಟಿಷ್ಟಲ್ಲ. ಒಂದ್ಕಡೆ ಕರ್ನಾಟಕದ ನಂ ಮನರಂಜನಾ ವಾಹಿನಿಯಲ್ಲಿ ನಿರೂಪಕಿಯಾಗಿ ಎರಡು ಮೂರು ಶೋಗಳನ್ನು ನಡೆಸಿಕೊಡುತ್ತಿದ್ದಾರೆ. ಇನ್ನೊಂದು ಕಡೆ ತಮ್ಮದೇ 'ಆ್ಯಂಕರ್‌ ಅನುಶ್ರೀ' ಅನ್ನೋ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ಇವೆರಡನ್ನು ಬಿಟ್ಟರೆ, ಇವೆಂಟ್‌ಗಳು, ಕಾರ್ಯಕ್ರಮಗಳ ಅಂತ ಪ್ರತ್ಯೇಕವಾಗಿ ದುಡಿಯುತ್ತಿದ್ದಾರೆ.

Buzz going around about Kannada anchor Anushree s net worth Here are the details

ಆ್ಯಂಕರ್‌ ಅನುಶ್ರೀ ಇವೆಲ್ಲದರ ಜೊತೆಗೆ ಬೇರೆ ಯಾವುದಾದರೂ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರಾ? ಅನ್ನೋದು ಗುಟ್ಟು ಇನ್ನೂ ರಟ್ಟಾಗಿಲ್ಲ. ಬಾಲ್ಯದಿಂದಲೂ ಕಷ್ಟಗಳನ್ನು ಎದುರಿಸಿ ಬಂದಿರುವ ಅನುಶ್ರೀ ತಮ್ಮ ಮಾತನ್ನೇ ಬಂಡವಾಳ ಮಾಡಿಕೊಂಡು ಈ ಮಟ್ಟಕ್ಕೆ ಬೆಳೆದು ಬಂದಿದ್ದಾರೆ. ಟಿವಿ ಚಾನೆಲ್‌ಗಳಿಗೆ, ಸಿನಿಮಾ ಮಂದಿಗೆ ಅನುಶ್ರೀ ನಿರೂಪಣೆ ಮಾಡಿದರೇನೆ ಸಮಾಧಾನ ಆಗುತ್ತೆ.

ಅನುಶ್ರೀಗೆ ಇರುವ ಅಭಿಮಾನಿಗಳ ಸಂಖ್ಯೆ ಕಡಿಮೆ ಏನಿಲ್ಲ. ಕನ್ನಡದ ಒಬ್ಬ ಸ್ಟಾರ್ ನಟಿಗೆ ಇರುವಷ್ಟೇ ಅಭಿಮಾನಿ ಬಳಗ ಇವರಿಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಅನುಶ್ರೀ ಮದುವೆ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡುತ್ತಲೇ ಇದ್ದರು. ಪ್ರಶ್ನೆ ಕೇಳಿದಾಗಲೆಲ್ಲ ತಪ್ಪಿಸಿಕೊಳ್ಳುತ್ತಿದ್ದ ಅನುಶ್ರೀ ಕೊನೆಗೂ ಮದುವೆ ಆಗುತ್ತಿದ್ದಾರೆಂಬ ಸುದ್ದಿ ಕೇಳಿ ಬರುತ್ತಿದೆ. ಅಪ್ಪು ಅಭಿಮಾನಿಯಾಗಿರುವ ಅನುಶ್ರೀ ಅವರ ಹುಟ್ಟುಹಬ್ಬ ಮಾರ್ಚ್ 17ರಂದು ಮದುವೆ ಆಗುಬಹುದು ಎಂದು ಅಂದಾಜಿಸಲಾಗುತ್ತಿದೆ.

ಇನ್ನು ಅನುಶ್ರೀ ಮದುವೆ ಹಾಟ್ ಟಾಪಿಕ್ ಆಗಿರುವುದರಿಂದ ಅವರ ಸಂಪಾದನೆ ಬಗ್ಗೆನೂ ಚರ್ಚೆಯಾಗುತ್ತಿದೆ. ನಿರೂಪಣೆಯಿಂದೇ ಅನುಶ್ರೀ ಸುಮಾರು 50 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಅನ್ನೋ ವರದಿಯಾಗಿವೆ. ಆದರೆ, ಈ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿಯಿಲ್ಲ. ಅನುಶ್ರೀ ಕೂಡ ಈ ಸಂಖ್ಯೆಯನ್ನು ಒಪ್ಪಿಕೊಳ್ಳುತ್ತಾರಾ? ಅನ್ನೋ ಕುತೂಹಲವಿದೆ. ಒಂದು ವೇಳೆ ನಿರೂಪಣೆ, ಯೂಟ್ಯೂಬ್ ಚಾನೆಲ್ ಹಾಗೂ ಇವೆಂಟ್‌ಗಳಿಂದಲೇ ಇಷ್ಟೊಂದು ಹಣ ಗಳಿಸಿದ್ದರೆ ಅದು ನಿಜಕ್ಕೂ ದೊಡ್ಡ ಸಾಧನೆಯೇ?

More from Filmibeat

English summary
Buzz going around about Kannada anchor Anushree's net worth. Here are the details;
Read more about: anushree anchor filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X