ಬಜೆಟ್ ಕಾರಣಕ್ಕೆ ಸೆಟ್ಟೇರುವ ಮುನ್ನ ನಿಂತೇ ಹೋಯ್ತಾ ಹೃತಿಕ್ ರೋಷನ್ ಸಿನಿಮಾ?

ಚಿತ್ರರಂಗದಲ್ಲೀಗ ನೂರಾರು ಕೋಟಿ ಕೋಟಿ ಲೆಕ್ಕಾಚಾರ ಶುರುವಾಗಿದೆ. 1000 ಕೋಟಿ, 2000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಆದರೆ ರಿಸ್ಕ್ ಕೂಡ ಜಾಸ್ತಿ ಇದೆ. ಸಾವಿರಾರು ಕೋಟಿ ಬಜೆಟ್‌ನಲ್ಲಿ 'ರಾಮಾಯಣ' ಸಿನಿಮಾ ನಿರ್ಮಾಣವಾಗ್ತಿದೆ. ಅಲ್ಲು ಅರ್ಜುನ್ ಹಾಗೂ ಅಟ್ಲಿ ಸಿನಿಮಾ, ರಾಜಮೌಳಿ 'ವಾರಣಾಸಿ' ಸಿನಿಮಾಗಳ ಬಜೆಟ್ ಸಾವಿರ ಕೋಟಿವರೆಗೆ ಎನ್ನಲಾಗ್ತಿದೆ. ಆದರೆ ಬಜೆಟ್ ಕಾರಣಕ್ಕೆ ಹೃತಿಕ್ ಸಿನಿಮಾ ನಿಂತು ಹೋಗಿದೆ ಎನ್ನಲಾಗ್ತಿದೆ.

'ವಾರ್‌-2' ಸಿನಿಮಾ ಮಾಡಿ ಹೃತಿಕ್ ರೋಷನ್ ಸೋತಿದ್ದಾರೆ. ಬಾಲಿವುಡ್ ಸಿನಿಮಾಗಳು ಅಲ್ಲೊಂದು ಇಲ್ಲೊಂದು ಗೆಲ್ಲುತ್ತಿದೆ. 'ಛಾವ', 'ಸಯ್ಯಾರ' ಹಾಗೂ 'ಧುರಂಧರ್' ಬಿಟ್ಟರೆ ಯಾವುದೇ ಸಿನಿಮಾ ಇತ್ತೀಚೆಗೆ ಸದ್ದು ಮಾಡಲಿಲ್ಲ. ಈ 3 ಸಿನಿಮಾಗಳ ಬಜೆಟ್ ಕಮ್ಮಿ. ಅನಿರೀಕ್ಷಿತ ಎನ್ನುವಂತೆ ಗೆದ್ದು ಬಿಟ್ಟವು. ಆದರೆ ಆರಂಭದಿಂದ ನಿರೀಕ್ಷೆ ಹುಟ್ಟಾಗಿ ಆ ನಿರೀಕ್ಷೆ ತಲುಪುವಲ್ಲಿ ಸಾಕಷ್ಟು ಸಿನಿಮಾಗಳು ಸೋತಿವೆ.

Buzz Hrithik Roshan s Krrish 4 Put on Hold Amid Budget Concerns and Producer Disagreement

ಹೃತಿಕ್ ರೋಷನ್ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೂಡ ಕಾಲ್‌ಶೀಟ್ ಪಡೆದಿದೆ. ಆದರೆ ಯಾರು ನಿರ್ದೇಶಕ, ಯಾವಾಗ ಸಿನಿಮಾ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಈ ನಡುವೆ ಸೂಪರ್ ಹಿಟ್ 'ಕ್ರಿಶ್' ಸರಣಿ ಮುಂದುವರೆಸುವುದಾಗಿ ಹೃತಿಕ್ ಹೇಳಿದ್ದರು. ಈ ಬಾರಿ ತಾವೇ ಸಿನಿಮಾ ನಿರ್ದೇಶಿಸಿ ನಟಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಸದ್ಯಕ್ಕೆ ಸಿನಿಮಾ ನಿಂತು ಹೋಗಿದೆ ಎನ್ನುವ ಗುಸುಗುಸು ಶುರುವಾಗಿದೆ.

ಸದ್ಯಕ್ಕೆ 400ರಿಂದ 500 ಕೋಟಿ ರೂ. ಬಜೆಟ್ ಹಾಕಿ ಸಿನಿಮಾ ಮಾಡುವುದು. ಅದರಲ್ಲೂ 'ಕ್ರಿಶ್' ಸರಣಿಯ ಮುಂದುವರೆದ ಭಾಗ ಕಟ್ಟಿಕೊಡುವುದು ಕಷ್ಟ ಎನ್ನುವ ವಾದ ಶುರುವಾಗಿದೆ. ಇದೇ ಕಾರಣಕ್ಕೆ ಸದ್ಯಕ್ಕೆ 'ಕ್ರಿಶ್- 4' ಸಿನಿಮಾ ಮಾಡದಿರಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಇನ್ನು ನಾಲ್ಕೈದು ವರ್ಷಗಳ ಬಳಿಕ ಸಿನಿಮಾ ಆರಂಭವಾಗಬಹುದು ಎನ್ನುವ ಊಹಾಪೋಹ ಶುರುವಾಗಿದೆ.

Buzz Hrithik Roshan s Krrish 4 Put on Hold Amid Budget Concerns and Producer Disagreement

ಪ್ರೇಕ್ಷಕರ ನಿರೀಕ್ಷೆ ಹೆಚ್ಚುತ್ತಿದೆ. ಈ ಹಿಂದಿನ ಕ್ರಿಶ್ ಸರಣಿ ಸಿನಿಮಾಗಳು ಬಂದಾಗ ಸಿನಿಮಾ ನೋಡುವವರ ಮನಸ್ಥಿತಿ ಬೇರೆ ಇತ್ತು. ಈಗ ಸೋಶಿಯಲ್ ಮೀಡಿಯಾದಲ್ಲಿ ಹೋಲಿಕೆ ಹೆಚ್ಚಾಗುತ್ತಿದೆ. 'ಅವೆಂಜರ್ಸ್', 'ಸ್ಪೈಡರ್‌ಮ್ಯಾನ್' ಸಿನಿಮಾಗಳಿಗೆ 'ಕ್ರಿಶ್'-4 ಚಿತ್ರವನ್ನು ಹೋಲಿಸುವ ಪ್ರಯತ್ನ ಮಾಡಬಹುದು. ಇದು ಸಹಜವಾಗಿಯೇ ಚಿತ್ರಕ್ಕೆ ಹಿನ್ನಡೆ ತಂದೊಡ್ಡಲಿದೆ ಎನ್ನುವ ಚರ್ಚೆ ಶುರುವಾಗಿದೆ.

ಹೃತಿಕ್ 500 ಕೋಟಿ ರೂ. ಬಜೆಟ್‌ನಲ್ಲಿ 'ಕ್ರಿಶ್‌- 4' ಸಿನಿಮಾ ಮಾಡಲು ಮನಸ್ಸು ಮಾಡಿದ್ದಾರೆ. ಆದರೆ ನಿರ್ಮಾಪಕ ಆದಿತ್ಯಾ ಚೋಪ್ರಾ ಅದಕ್ಕೆ ಒಪ್ಪುತ್ತಿಲ್ಲ ಎಂದು ಬಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. 350 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮುಗಿಸಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗ್ತಿದೆ. ನಿರ್ಮಾಪಕರ ಸಲಹೆಯನ್ನು ಒಪ್ಪಿಕೊಂಡು ಸದ್ಯಕ್ಕೆ 'ಕ್ರಿಶ್'-4 ಬಿಟ್ಟು ಬೇರೆ ಸಿನಿಮಾ ಮಾಡಲು ಹೃತಿಕ್ ಮನಸ್ಸು ಮಾಡಿದ್ದಾರೆ ಎಂದು ಹೇಳಲಾಗ್ತಿದೆ.

23 ವರ್ಷಗಳ ಹಿಂದೆ ಬಂದಿದ್ದ 'ಕೋಯಿ... ಮಿಲ್ ಗಯಾ' ಚಿತ್ರದ ಕ್ರಿಶ್ ಸರಣಿಗೆ ಬುನಾದಿ ಹಾಕಿತ್ತು. ಆ ಚಿತ್ರದ ಕ್ರಿಶ್ ಪಾತ್ರವನ್ನು ಮುಂದೆ ಎರಡು ಸಿನಿಮಾಗಳಲ್ಲಿ ಮುಂದುವರೆಸಲಾಗಿತ್ತು. 2006ರಲ್ಲಿ 'ಕ್ರಿಶ್' ಸಿನಿಮಾ ತೆರೆಗೆ ಬಂದಿತ್ತು. ಬಳಿಕ 2013ರಲ್ಲಿ 'ಕ್ರಿಶ್‌- 3' ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಸರಣಿಯ ಸಿನಿಮಾಗಳೆಲ್ಲಾ ಗೆದ್ದಿತ್ತು. 3 ಸಿನಿಮಾಗಳನ್ನು ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ನಿರ್ಮಿಸಿ ನಿರ್ದೇಶಿಸಿದ್ದರು.

More from Filmibeat

Read more about: hrithik roshan bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X