ಹೊಂಬಾಳೆ ಫಿಲ್ಮ್ಸ್ ಹಾಗೂ ಪ್ರಭಾಸ್ ಸಿನಿಮಾ ನಿಂತೇ ಹೋಯ್ತಾ?

ಮಾತುಕತೆ ನಡೆಸಿದ ಸಿನಿಮಾಗಳೆಲ್ಲಾ ಸೆಟ್ಟೇರಿ ತೆರೆಗೆ ಬರಲ್ಲ. ಅರ್ಧಕ್ಕೆ ನಿಂತ ಸಿನಿಮಾಗಳ ಸಂಖ್ಯೆ ದೊಡ್ಡದಿದೆ. ಇದೀಗ ಹೊಂಬಾಳೆ ಫಿಲ್ಮ್ಸ್ ಹಾಗೂ ಪ್ರಭಾಸ್ ಮಾಡಬೇಕಿದ್ದ ಸಿನಿಮಾ ನಿಂತೇಹೋಗುತ್ತೆ ಎಂದು ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ.

'ಸಲಾರ್' ಬಳಿಕ ಪ್ರಭಾಸ್ ಜೊತೆ 3 ಸಿನಿಮಾಗಳನ್ನು ಮಾಡಲು ಹೊಂಬಾಳೆ ಫಿಲ್ಮ್ಸ್ ಒಪ್ಪಂದ ಮಾಡಿಕೊಂಡಿದೆ. ಅದಕ್ಕಾಗಿ ಭಾರೀ ಮೊತ್ತದ ಸಂಭಾವನೆ ಕೊಡಲು ಮಾತುಕತೆ ನಡೆದಿದೆ. ಇದೇ ಕಾಂಬಿನೇಷನ್‌ನಲ್ಲಿ 'ಸಲಾರ್- 2' ಸಿನಿಮಾ ಬರಬೇಕಿದೆ. ಇನ್ನು ಎರಡು ಸಿನಿಮಾಗಳನ್ನು ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಸುದ್ದಿ ವೈರಲ್ ಆಗ್ತಿದೆ.

Buzz in Tollywood Prabhas Hombale Films Project with Prashanth Varma Reportedly Stalled Amid Controversy

ಪ್ರಭಾಸ್ ಹಾಗೂ ಹೊಂಬಾಳೆ ಸಂಸ್ಥೆಯ ಮತ್ತೊಂದು ಚಿತ್ರವನ್ನು ಪ್ರಶಾಂತ್ ವರ್ಮ ನಿರ್ದೇಶ ಮಾಡುತ್ತಾರೆ ಎಂದು ಗುಲ್ಲಾಗಿತ್ತು. 'ಬ್ರಹ್ಮರಾಕ್ಷಸ' ಹೆಸರಿನಲ್ಲಿ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ ಎನ್ನುವ ಅಂತೆಕಂತೆ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. 'ಹನುಮಾನ್' ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಶಾಂತ್ ವರ್ಮ ಕ್ರೇಜ್ ಶುರುವಾಗಿದೆ. ರಿಷಬ್ ಶೆಟ್ಟಿ ಕಾಂಬಿನೇಷನ್‌ನಲ್ಲಿ 'ಜೈ ಹನುಮಾನ್' ಚಿತ್ರವನ್ನು ಅವರು ಘೋಷಿಸಿದ್ದಾರೆ. ಅದರ ಜೊತೆಗೆ ಎರಡ್ಮೂರು ಚಿತ್ರಗಳ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದಾರೆ.

ಪ್ರಶಾಂತ್ ವರ್ಮ ಸಿನಿಮಾ ಮಾಡುವುದಾಗಿ ಹೇಳಿ ಅಡ್ವಾನ್ಸ್ ತಗೊಂಡು ಬಳಿಕ ಸತಾಯಿಸುತ್ತಿದ್ದಾರೆ ಎನ್ನುವ ಆರೋಪ ಶುರುವಾಗಿದೆ. ಈ ಬಗ್ಗೆ ತೆಲುಗು ಫಿಲ್ಮ್ ಚೇಂಬರ್‌ನಲ್ಲಿ ದೂರು ದಾಖಲಾಗಿದೆ. ನಮ್ಮ ಬಳಿ 10 ಕೋಟಿ ರೂ. ಅಡ್ವಾನ್ಸ್ ಪಡೆದು ಸಿನಿಮಾ ಮಾಡಿಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಆರೋಪಿಸಿದೆ. ಆದರೆ ಇದನ್ನು ಪ್ರಶಾಂತ್ ವರ್ಮ ಖಂಡಿಸಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.

Buzz in Tollywood Prabhas Hombale Films Project with Prashanth Varma Reportedly Stalled Amid Controversy

ಸದ್ಯ ನಿರ್ದೇಶಕ ಪ್ರಶಾಂತ್ ವರ್ಮಾ ವಿವಾದಗಳಲ್ಲಿ ಸಿಲುಕಿರುವುದರಿಂದ ಪ್ರಭಾಸ್ ಜೊತೆ ಮಾಡಬೇಕಿದ್ದ ಸಿನಿಮಾ ಕೂಡ ನಿಂತು ಹೋಗುವಂತಿದೆ ಎನ್ನುವ ಊಹಾಪೋಹ ಶುರುವಾಗಿದೆ. ಸದಾ ವಿವಾದಗಳಿಂದ ದೂರ ಇರುವ ಪ್ರಭಾಸ್ ಪ್ರಶಾಂತ್ ವರ್ಮ ಜೊತೆ ಸಿನಿಮಾ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದೆ. ಇದೆಲ್ಲ ಸುಳ್ಳು ಎನ್ನುವವರು ಇದ್ದಾರೆ.

ಘೋಷಣೆ ಆಗದೇ ಇರುವ ಸಿನಿಮಾ ನಿಂತು ಹೋಗುವುದು ಹೇಗೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಪ್ರಭಾಸ್- ಪ್ರಶಾಂತ್ ಹಾಗೂ ಹೊಂಬಾಳೆ ಸಂಸ್ಥೆ ಒಟ್ಟಾಗಿ ಸಿನಿಮಾ ಮಾಡಲು ಮಾಡುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹೀಗಾಗಿ ಸಿನಿಮಾ ನಿಂತು ಹೋಯಿತು ಎನ್ನುವುದಕ್ಕೆ ಹೇಗೆ ಸಾಧ್ಯ ಎಂದು ವಾದಿಸುತ್ತಿದ್ದಾರೆ. ಡಿವಿವಿ ಸಂಸ್ಥೆ ಈಗಾಗಲೇ ಪ್ರತಿಕಾ ಪ್ರಕಟನೆ ನೀಡಿ ಪ್ರಶಾಂತ್ ವರ್ಮಾ ಜೊತೆ ಯಾವುದೇ ಸಿನಿಮಾ ಮಾತುಕತೆ ನಡೆದಿಲ್ಲ ಎಂದಿದೆ. ಅದೇ ರೀತಿ ಪ್ರಶಾಂತ್ ವರ್ಮಾ ಹಾಗೂ ಹೊಂಬಾಳೆ ಸಿನಿಮಾ ಬಗ್ಗೆ ಕೂಡ ಬರೀ ಸುಳ್ಳು ಸುದ್ದಿ ಹರಿದಾಡ್ತಿದೆ ಎಂದು ಹೇಳಲಾಗ್ತಿದೆ.

ಪ್ರಭಾಸ್ ಸದ್ಯ 'ರಾಜಾಸಾಬ್', 'ಫೌಜಿ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ 'ಸ್ಪಿರಿಟ್' ಚಿತ್ರದಲ್ಲಿ ನಟಿಸಲಿದ್ದಾರೆ. ಮತ್ತೊಂದು ಕಡೆ ಹೊಂಬಾಳೆ ಫಿಲ್ಮ್ಸ್ 'ಕಾಂತಾರ- 1' ಸಿನಿಮಾ ಗೆಲುವಿನ ಸಂಭ್ರಮದಲ್ಲಿದೆ. ಮುಂದೆ ಮತ್ತಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಲು ಉತ್ಸುಕವಾಗಿದೆ. ಸಾಕಷ್ಟು ಸಿನಿಮಾಗಳನ್ನು ಸಂಸ್ಥೆ ವಿತರಣೆ ಸಹ ಮಾಡುತ್ತಿದೆ. 'ಸಲಾರ್- 2' ಸಿನಿಮಾ ಇನ್ನು ತಡವಾಗಲಿದೆ. ಅದಕ್ಕೂ ಮುನ್ನ ಬೇರೆ ಯಾವ ಚಿತ್ರ ಸಂಸ್ಥೆ ಕೈಗೆತ್ತಿಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

More from Filmibeat

Read more about: prabhas hombale films tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X