'ಆದಿಪುರುಷ್' ನಿರ್ದೇಶಕನ ವಿರುದ್ಧ ಗರಂ? ಟಾಲಿವುಡ್‌ನಲ್ಲೇನಿದು ಸುದ್ದಿ?

By ಫಿಲ್ಮಿಬೀಟ್ ಡೆಸ್ಕ್

ಪ್ರಭಾಸ್ ಹಾಗೂ ಆದಿಪುರುಷ್ ಕಾಂಬಿನೇಷನ್ ಸಿನಿಮಾ 'ಆದಿಪುರುಷ್' ರಿಲೀಸ್ ಆಗಿದ್ದು ಗೊತ್ತೇ ಇದೆ. ಸಿನಿಮಾ ರಿಲೀಸ್ ಆದಲ್ಲಿಂದ ನೂರೆಂಟು ಸುದ್ದಿಗಳು ಓಡಾಡುತ್ತಲೇ ಇವೆ. ಒಂದ್ಕಡೆ ಸಿನಿಮಾ ಪ್ರೇಮಿಗಳು ಸಿನಿಮಾ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಅದೇ ಇನ್ನೊಂದು ಕಡೆ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ.

ತುಂಬಾ ಆಸೆಯಿಂದ 'ಆದಿಪುರುಷ್‌'ಗಾಗಿ ಕಾದು ಕೂತಿದ್ದ ಭಾರತೀಯರಿಗೆ ಸಿನಿಮಾ ನಿರಾಸೆ ಮಾಡಿದ್ದಂತೂ ನಿಜ. ಸಿನಿಮಾದ ಕಲೆಕ್ಷನ್ ಬಿಟ್ಟರೆ, ಸಿನಿಮಾಗೆ ಯಾವುದೇ ಪಾಸಿಟಿವ್ ಟಾಕ್ ಇಲ್ಲ. ಈ ಮಧ್ಯೆ ಟಾಲಿವುಡ್‌ನಲ್ಲಿ ಹೊಸದೊಂದು ಸುದ್ದಿ ಓಡಾಡುತ್ತಿದೆ.

'ಆದಿಪುರುಷ್' ಸಿನಿಮಾದ ಟೀಸರ್ ರಿಲೀಸ್ ಮಾಡಿದಾಗಲೇ ಟ್ರೋಲ್ ಆಗಿತ್ತು. ಅಂದೇ ಪ್ರೇಕ್ಷಕರಿಗೆ ಮನವರಿಕೆ ಆಗಿತ್ತು. ಆದರೂ, ಟ್ರೈಲರ್ ಹಾಗೂ ಹಾಡುಗಳು ಪಾಸಿಟಿವ್ ಎನಿಸಿದ್ದರಿಂದ ಸಿನಿಮಾ ಬಗ್ಗೆ ಚಿಕ್ಕದೊಂದು ಹೋಪ್ ಇತ್ತು. ಅದೂ ಈಗ ಹೋಗಿದೆ. ಇದೇ ವೇಳೆ ಟಾಲಿವುಡ್‌ ಗಲ್ಲಿಗಳಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. 'ಆದಿಪುರುಷ್' ನಿರ್ದೇಶಕನ ವಿರುದ್ಧ ರಾಜಮೌಳಿ ಗರಂ ಆಗಿದ್ದಾರಂತೆ.

Buzz is going around that Rajamouli is angry at Adipurush director Om Raut.

"ಪ್ರಭಾಸ್ ಜೀಸಸ್.. ಕೋತಿ ಬನ್ನಿಯಂತೆ"

'ಆದಿಪುರುಷ್' ಟೀಸರ್ ರಿಲೀಸ್ ಆಗುತ್ತಿದ್ದಂತೆ ಸಿನಿಮಾ ಕಾರ್ಟೂನ್‌ನಂತೆ ಇದೆ ಎಂದು ಟ್ರೋಲ್ ಮಾಡಿದ್ದರು. ಅದು ಸಿನಿಮಾ ರಿಲೀಸ್ ಆದ್ಮೇಲೆ ಪ್ರೂವ್ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರಿಗೆ ಹಲವು ವಿಭಾಗಗಳಲ್ಲಿ ನಿರಾಸೆಯಾಗಿದೆ. ಸಿನಿಮಾ ಗ್ರಾಫಿಕ್ಸ್‌ನಿಂದ ಹಿಡಿದು, ಡೈಲಾಗ್, ಪಾತ್ರಗಳು, ಕಾಸ್ಟ್ಯೂಮ್ ಎಲ್ಲವೂ ನಿರಾಸೆಯನ್ನುಂಟು ಮಾಡಿದೆ.

ಸಿನಿಮಾದ ಬಳಿಕ ಪ್ರೇಕ್ಷಕರಿಗೆ ಪ್ರಭಾಸ್ ಜೀಸಸ್‌ನಂತೆ ಕಂಡಿದ್ದಾರೆ. ಇನ್ನೊಂದು ಕಡೆ ಕೋತಿಯೊಂದರ ಪಾತ್ರ ಅಲ್ಲು ಅರ್ಜುನ್‌ನಂತೆ ಕಾಣುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಈ ಸಂಬಂಧ ನಿರ್ದೇಶಕ ಓಂ ರಾವುತ್ ಅವರನ್ನು ಟೀಕೆ ಮಾಡುತ್ತಿದ್ದಾರೆ.

ನಿರ್ದೆಶಕರ ವಿರುದ್ಧ ರಾಜಮೌಳಿ ಗರಂ?

'ಆದಿಪುರುಷ್' ಬಗ್ಗೆ ಇಷ್ಟೊಂದು ಚರ್ಚೆಯಾಗುತ್ತಿರುವಂತೆ ರಾಜಮೌಳಿ ಸುದ್ದಿಯೊಂದು ಟ್ರೆಂಡಿಂಗ್‌ನಲ್ಲಿದೆ. ಈ ಸಿನಿಮಾವನ್ನು ರಾಜಮೌಳಿ ನೋಡಿದ್ದಾರಂತೆ. 'ಆದಿಪುರುಷ್' ನಿರ್ದೇಶಕ ರಾಜಮೌಳಿ ಇಷ್ಟ ಆಗಿಲ್ಲವಂತೆ. ಸಿನಿಮಾದ ಬಳಿಕ ನಿರ್ದೇಶಕ ಓಂ ರಾವುತ್ ವಿರುದ್ಧ ಸಿಟ್ಟು ವ್ಯಕ್ತಪಡಿಸಿದ್ದಾರೆಂಬ ಸುದ್ದಿ ಓಡಾಡುತ್ತಿದೆ.

ರಾಜಮೌಳಿ 'ಆದಿಪುರುಷ್' ಸಿನಿಮಾ ನೋಡಿದ ಬಳಿಕ ತಮ್ಮ ಆಪ್ತರ ಬಳಿಕ ಅಸಮಧಾನ ಹೊರಹಾಕಿದ್ದಾರಂತೆ. ರಾಮಾಯಣದ ಪಾತ್ರಗಳನ್ನು ಸರಿಯಾಗಿ ತೋರಿಸಿಲ್ಲ. ಈ ಮಟ್ಟಿಗೆ ಕೆಟ್ಟದಾಗಿ ಸಿನಿಮಾ ಮಾಡುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ ಎಂದು ರಾಜಮೌಳಿ ತೀವ್ರ ಅಸಮಧಾನ ಹೊರಹಾಕಿದ್ದಾರಂತೆ. ಟಾಲಿವುಡ್‌ನಲ್ಲಿ ಈ ಬಗ್ಗೆ ಹಲವು ವೆಬ್‌ ಪೋರ್ಟಲ್‌ಗಳಲ್ಲಿ ಸುದ್ದಿಯಾಗಿದೆ.

Buzz is going around that Rajamouli is angry at Adipurush director Om Raut.

ರಾಮಾಯಣಕ್ಕೆ ಸ್ಕೆಚ್ ಹಾಕಿದ್ದ ರಾಜಮೌಳಿ

'ಬಾಹುಬಲಿ' ಮೂಲಕ ಪ್ರಭಾಸ್ ಅನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ್ದೇ ರಾಜಮೌಳಿ. ಆದರೆ, 'ಬಾಹುಬಲಿ' ಬಳಿಕ ಪ್ರಭಾಸ್ ಒಂದೇ ಸಿನಿಮಾ ಮೆಗಾ ಹಿಟ್ ಆಗಿಲ್ಲ. ಇನ್ನೊಂದು ಕಡೆ ರಾಜಮೌಳಿಯೇ 'ರಾಮಾಯಣ', 'ಮಹಾಭಾರತ'ವನ್ನು ತೆರೆಮೇಲೆ ತರುವ ಆಸೆ ವ್ಯಕ್ತಪಡಿಸಿದ್ದರು.

ಆದರೆ, ಸಮಯದ ಅಭಾವದಿಂದ ರಾಜಮೌಳಿ ಈಗಲೇ ಈ ಎರಡು ಸಬ್ಜೆಕ್ಟ್‌ಗಳಿಗೆ ಕೈಹಾಕುವುದಿಲ್ಲ ಎಂದಿದ್ದರು. ಈ ಸುದ್ದಿಯ ಬಳಿಕ 'ಆದಿಪುರುಷ್' ಸಿನಿಮಾವನ್ನು ರಾಜಮೌಳಿಯೇ ಮಾಡಿದ್ದರೆ, ಮೆಗಾ ಹಿಟ್ ಆಗುತ್ತಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

More from Filmibeat

English summary
Buzz is going around that Rajamouli is angry at Adipurush director Om Raut, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X