Ganesh Movie:ಅರಸು ಅಂತಾರೆ ಸಿನಿಮಾಗೆ ದುಬಾರಿ ಸಂಭಾವನೆ ಪಡೆದರೇ ಗಣೇಶ್? ಗಣಿ ಅಕೌಂಟ್‌ಗೆ ಸೇರಿದ್ದೆಷ್ಟು?

By ಫಿಲ್ಮಿಬೀಟ್ ಡೆಸ್ಕ್

ಗೋಲ್ಡನ್ ಸ್ಟಾರ್ ಗಣೇಶ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಿದ್ದಂತೆ ಗಣೇಶ್‌ಗೆ ಡಿಮ್ಯಾಂಡ್ ಮತ್ತೆ ಹೆಚ್ಚಾಗಿದೆ. ಬ್ಯಾಕ್ ಟು ಬ್ಯಾಕ್ ಈ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸುತ್ತಿರುವ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಜೊತೆಗೆ ಇಂದು (ಏಪ್ರಿಲ್ 6) ರಾಮ ನವಮಿಯ ಶುಭ ಸಂದರ್ಭದಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ.

ಸ್ಯಾಂಡಲ್‌ವುಡ್‌ನಲ್ಲಿ ಸಿನಿ ಸಾಹಿತಿಯಾಗಿ ಗುರುತಿಸಿಕೊಂಡಿರುವ ಅರಸು ಅಂತಾರೆ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಗಣೇಶ್ ಹಾಗೂ ಅರಸು ಅಂತಾರೆ ಕಾಂಬಿನೇಷನ್‌ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಕಣ್ಣು ಅರಳಿಸುವಂತೆ ಮಾಡಿದೆ. ಈ ಹೊಸ ಸಿನಿಮಾಗೆ ಗೋಲ್ಡನ್ ಸ್ಟಾರ್ ಪಡೆದಿರುವ ಸಂಭಾವನೆ ಬಗ್ಗೆನೂ ಸ್ಯಾಂಡಲ್‌ವುಡ್ ಮಂದಿ ಚರ್ಚೆ ಮಾಡುತ್ತಿದ್ದಾರೆ.

Buzz is that actor Ganesh got huge remuneration for Arasu Anthare directorial movie

ಸಿನಿಮಾ ಹಿಟ್ ಆದ ಕೂಡಲೇ ಸ್ಟಾರ್‌ಗಳು ಸಂಭಾವನೆಯನ್ನು ಹೆಚ್ಚಿಸಿಕೊಳ್ಳುವುದು ವಾಡಿಕೆ. ಹಾಗೇ ಗಣೇಶ್ ಕೂಡ 'ಕೃಷ್ಣಂ ಪ್ರಣಯ ಸಖಿ' ಬಳಿಕ ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ರಾಮ ನವಮಿಯಂದು ಸೆಟ್ಟೇರುತ್ತಿರುವ ಸಿನಿಮಾಗೆ ಗಣೇಶ್ ಪಡೆದ ಸಂಭಾವನೆ ಎಷ್ಟು? ಗೋಲ್ಡನ್ ಸ್ಟಾರ್ ಕೈಯಲ್ಲಿ ಇರುವ ಸಿನಿಮಾಗಳು ಎಷ್ಟು? ತಿಳಿಯಲು ಮುಂದೆ ಓದಿ.

ರೊಮ್ಯಾಂಟಿಕ್ ಸ್ಟೋರಿಗಳ ಜೊತೆಗೆ ಗಣೇಶ್ ವಿಭಿನ್ನ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ತನ್ನ ಅಭಿಮಾನಿಗಳಿಗೆ ನಾನಾ ಅವತಾರಗಳಲ್ಲಿ ಕಾಣಿಸಿಕೊಂಡು ಮನರಂಜನೆ ನೀಡುವುದಕ್ಕೆ ಸಜ್ಜಾಗಿದ್ದಾರೆ. ಈಗ ಕ್ಯೂನಲ್ಲಿರುವ ಸಿನಿಮಾಗಳು ಕೂಡ ಅದನ್ನೇ ಸೂಚಿಸುತ್ತಿವೆ. 'ಕೃಷ್ಣ ಪ್ರಣಯ ಸಖಿ" ಬಳಿಕ ಗಣೇಶ್ ಮತ್ತೆ ಅಂತಹದ್ದೇ ಪ್ರಕಾರದ ಸಿನಿಮಾವನ್ನು ಒಪ್ಪಿಕೊಳ್ಳುವುದಕ್ಕೆ ಹೋಗಲಿಲ್ಲ.

ಇನ್ನು ಅರಸು ಅಂತಾರೆ ದಶಕದ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. 2014ರಲ್ಲಿ ಅರಸು ಅಂತಾರೆ 'ಲವ್ ಇನ್ ಮಂಡ್ಯ' ಸಿನಿಮಾ ಮೂಲಕ ನಿರ್ದೇಶನಕ್ಕೂ ಕಾಲಿಟ್ಟಿದ್ದರು. ಈ ಸಿನಿಮಾದಲ್ಲಿ ನೀನಾಸಂ ಸತೀಶ್, ಸಿಂಧು ಲೋಕನಾಥ್ ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಇದು ಬಾಕ್ಸಾಫೀಸ್‌ನಲ್ಲಿ ಹಿಟ್ ಅಂತ ಸಾಬೀತಾಗಿತ್ತು. ಆದರೂ, ಮತ್ತೊಂದು ಸಿನಿಮಾ ನಿರ್ದೇಶನ ಮಾಡುವುದಕ್ಕೆ ಒಂದು ದಶಕ ತೆಗೆದುಕೊಂಡಿದ್ದಾರೆ. ಸಿನಿ ಸಾಹಿತಿಯಾಗಿ ಅದ್ಭುತ ಹಾಡುಗಳನ್ನು ರಚಿಸಿರುವ ಅರಸು ಅಂತಾರೆ, ಈಗ ಗಣೇಶ್‌ಗೆ ನಿರ್ದೇಶಿಸುತ್ತಿರುವ ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಿನಿಮಾ ಮಂದಿ ಗಣೇಶ್ ಪಡೆದಿರುವ ಸಂಭಾವನೆ ಬಗ್ಗೆನೂ ಚರ್ಚೆ ಮಾಡುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಸಿನಿಮಾಗಾಗಿ ದೊಡ್ಡ ಮೊತ್ತದ ಹಣವನ್ನೇ ಪಡೆದಿದ್ದಾರೆ ಎಂದು ಹೇಳುತ್ತಿದ್ದಾರೆ. ಎಸ್‌ಎನ್‌ಟಿ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ರವಿ ಎಂಬುವವರು ನಿರ್ಮಿಸುತ್ತಿರುವ ಈ ಸಿನಿಮಾಗೆ ಗಣೇಶ್ ಬರೋಬ್ಬರು ನಾಲ್ಕುವರೆ ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಸಿನಿಮಾ ಮುಹೂರ್ತಕ್ಕೂ ಮುನ್ನ ಒಂದು ಕೋಟಿ ರೂಪಾಯಿ ಮುಂಗಡ ಹಣವನ್ನು ನೀಡಿದ್ದಾರೆಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

Buzz is that actor Ganesh got huge remuneration for Arasu Anthare directorial movie

ಚಿತ್ರರಂಗ ಅಂದ್ಮೇಲೆ ಇಂತಹ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಯಾವುದೇ ಸ್ಟಾರ್‌ಗಳ ಹೊಸ ಸಿನಿಮಾ ಆರಂಭಗೊಂಡರೆ, ಅವರ ಸಂಭಾವನೆ ಬಗ್ಗೆನೂ ಅಷ್ಟೇ ಜೋರಾಗಿ ಸುದ್ದಿಯಾಗುತ್ತೆ. ಈಗ ಕನ್ನಡದ ಸಿನಿಮಾ ಮಂದಿ ಕೂಡ ಗಣೇಶ್ 'ಕೃಷ್ಣಂ ಪ್ರಣಯ ಸಖಿ' ಬಳಿಕ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಅರಸು ಅಂತಾರೆ ಸಿನಿಮಾಗೆ ಇಷ್ಟೊಂದು ಸಂಭಾವನೆ ಪಡೆದಿದ್ದಾರೆ ಅಂತ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, ಚಿತ್ರತಂಡ ಆಗಲಿ, ಗಣೇಶ್ ಆಗಲಿ ತಮ್ಮ ಸಂಭಾವನೆ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿದ್ದಾರೆ.

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಕೈಯಲ್ಲಿ ಈ ಸಿನಿಮಾವೂ ಸೇರಿ ಮೂರು ಪ್ರಾಜೆಕ್ಟ್‌ಗಳು ಇವೆ. ಈಗಾಗಲೇ 'ಯುವರ್ಸ್ ಸಿನ್ಸಿಯರ್ಲಿ ರಾಮ್' ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾದಲ್ಲಿ ರಮೇಶ್ ಅರವಿಂದ್ ಕೂಡ ನಟಿಸುತ್ತಿದ್ದಾರೆ. ಹಾಗೇ ತೆಲುಗು ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ 'ಪಿನಾಕಾ' ಶೂಟಿಂಗ್ ಆರಂಭ ಆಗಬೇಕಿದೆ. ಈ ಮಧ್ಯೆ ಅರಸು ಅಂತಾರೆ ನಿರ್ದೇಶನದ ಸಿನಿಮಾ ಕೂಡ ಸೆಟ್ಟೇರಿದೆ.

More from Filmibeat

English summary
Buzz is that actor Ganesh got huge remuneration for Arasu Anthare directorial movie; ಅರಸು ಅಂತಾರೆ ನಿರ್ದೇಶಿಸುತ್ತಿರುವ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಪಡೆದಿರುವ ಸಂಭಾವನೆ ಎಷ್ಟು?
Read more about: ganesh remuneration sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X