ಕಿಚ್ಚ ಸುದೀಪ್ 50ನೇ ಚಿತ್ರಕ್ಕೆ ರಿಷಬ್ ಶೆಟ್ಟಿ ಆಕ್ಷನ್ ಕಟ್: ಕಿಚ್ಚನ ಮೆಗಾ ಸಿನಿಮಾ ಆಗುತ್ತಾ?
ಕಿಚ್ಚ ಸುದೀಪ್ ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ 46ನೇ ಸಿನಿಮಾ ಸೆಟ್ಟೇರಿದ್ದು, ಶೂಟಿಂಗ್ ಅದ್ಧೂರಿಯಾಗಿ ನಡೆಯುತ್ತಿದೆ. ತಮಿಳಿನ ಜನಪ್ರಿಯ ನಿರ್ಮಾಪಕ ಕಲೈಪುಲಿ ಎಸ್ ತನು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಕಿಚ್ಚ ಸುದೀಪ್ 50ನೇ (ಸೆಪ್ಟೆಂಬರ್ 2) ಹುಟ್ಟುಹಬ್ಬದಂದು 46ನೇ ಸಿನಿಮಾಗೆ 'ಮ್ಯಾಕ್ಸ್' ಟೈಟಲ್ ಕೂಡ ರಿವೀಲ್ ಆಗಿತ್ತು. ಬರ್ತ್‌ಡೇ ದಿನವೇ ಸುದೀಪ್ ಹೊಸ ಹೊಸ ಪ್ರಾಜೆಕ್ಟ್‌ಗಳು ಅನೌನ್ಸ್ ಆಗಿದ್ದವು. ಆದ್ರೀಗ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ.

50ನೇ ಹುಟ್ಟುಹಬ್ಬಕ್ಕೆ ಕಿಚ್ಚನ 49ನೇ ಸಿನಿಮಾವರೆಗೂ ಅನೌನ್ಸ್ ಆಗಿತ್ತು. ಆದ್ರೀಗ 50ನೇ ಸಿನಿಮಾದ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಿಚ್ಚ ಸುದೀಪ್ 50ನೇ ಸಿನಿಮಾವನ್ನು ರಿಷಬ್ ಶೆಟ್ಟಿನೇ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಏನಿದು ಕಿಚ್ಚನ 50ನೇ ಸಿನಿಮಾ ಮ್ಯಾಟರ್? ತಿಳಿಯಲು ಮುಂದೆ ಓದಿ..
ಕಿಚ್ಚ-ರಿಷಬ್ ದೋಸ್ತಿ ಹೊಸದಲ್ಲ
ಕಿಚ್ಚ ಸುದೀಪ್ ಹಾಗೂ ರಿಷಬ್ ಶೆಟ್ಟಿ ದೋಸ್ತಿ ಹೊಸದೇನೂ ಅಲ್ಲ. ಒಟ್ಟಿಗೆ ಸಿನಿಮಾ ಮಾಡದೇ ಇದ್ದರೂ, ಚಿತ್ರರಂಗದಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಕಿಚ್ಚ ಸುದೀಪ್ ಹಾಗೂ ರಿಷಬ್ ಶೆಟ್ಟಿ ಆಗಾಗ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭೇಟಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ಸುಮಲತಾ ಅಂಬರೀಷ್ ಹುಟ್ಟುಹಬ್ಬದಂದು ಕಿಚ್ಚ ಹಾಗೂ ರಿಷಬ್ ಒಟ್ಟಿಗೆ ಸೇರಿಕೊಂಡಿದ್ದರು. ಇದೇ ವೇಳೆ ಇಬ್ಬರ ಕಾಂಬಿನೇಷನ್ ಸಿನಿಮಾ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ಕಿಚ್ಚನ 50ನೇ ಸಿನಿಮಾಗೆ ರಿಷಬ್ ಆಕ್ಷನ್ ಕಟ್
ಪ್ರತಿಯೊಬ್ಬ ಸೂಪರ್‌ಸ್ಟಾರ್ ವೃತ್ತಿ ಬದುಕಿನಲ್ಲಿ 50ನೇ ಸಿನಿಮಾ ತುಂಬಾನೇ ಮುಖ್ಯ. ಇಂಹದ್ದೊಂದು ಮೈಲುಗಲ್ಲು ತಲುಪುವ ಹೊತ್ತಲ್ಲಿ ತಮ್ಮ ಅಭಿಮಾನಿಗಳಿಗೆ ವಿಶೇಷವಾದ ಸಿನಿಮಾ ಕೊಡಬೇಕು ಅನ್ನೋ ಆಸೆ ಸೂಪರ್‌ಸ್ಟಾರ್‌ನಲ್ಲಿ ಇರುತ್ತೆ. ಹೀಗಾಗಿ ಸುದೀಪ್ 50ನೇ ಸಿನಿಮಾವನ್ನು 'ಕಾಂತಾರ'ದಂತಹ ಮೆಗಾ ಸಕ್ಸಸ್ ಕೊಟ್ಟ ರಿಷಬ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಈ ಸುದ್ದಿ ನಿಜವೇ ಆದರೆ, ಕಿಚ್ಚ ಹಾಗೂ ರಿಷಬ್ ಅಭಿಮಾನಿಗಳಿಗೆ ಹಬ್ಬವೇ ಸರಿ.
ಕಿಚ್ಚನ ಕೈಯಲ್ಲಿ ಸಾಲು ಸಾಲು ಸಿನಿಮಾ
ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಭರಾಟೆಯಲ್ಲಿ ಕನ್ನಡ ಸೂಪರ್‌ಸ್ಟಾರ್‌ಗಳು ಸಿನಿಮಾ ನಿಧಾನವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹದಲ್ಲಿ 'ವಿಕ್ರಾಂತ್ ರೋಣ' ಬಳಿಕ ಗ್ಯಾಪ್ ತೆಗೆದುಕೊಂಡು ಕಿಚ್ಚ ಸುದೀಪ್ ಮತ್ತೆ ಆಕ್ಟೀವ್ ಆಗಿದ್ದಾರೆ. 46ನೇ 'ಮ್ಯಾಕ್ಸ್' ಶೂಟಿಂಗ್ ಚಾಲ್ತಿಯಲ್ಲಿದೆ. ಹಾಗೇ ಕೆಆರ್‌ಜಿ ಸ್ಟುಡಿಯೋ ಜೊತೆ ಹೊಸ ಸಿನಿಮಾ ಅನೌನ್ಸ್ ಆಗಿದೆ. ಆರ್.ಚಂದ್ರು ಹಾಗೂ ಸುದೀಪ್ ಕಾಂಬಿನೇಷನ್ ಸಿನಿಮಾನೂ ಅನೌನ್ಸ್ ಆಗಿದೆ.
'ಕಾಂತಾರ 2' ಬಳಿಕ ಕಿಚ್ಚನ ಸಿನಿಮಾ?
ಕಿಚ್ಚ ಸುದೀಪ್ ಎರಡು ಮೂರು ಪ್ರಾಜೆಕ್ಟ್‌ನಲ್ಲಿ ಬ್ಯುಸಿ. ಜೊತೆಗೆ ಬಿಗ್ ಬಾಸ್ ಸೀಸನ್ 10 ಕೂಡ ಆರಂಭ ಆಗುತ್ತಿದೆ. ಈಗಾಗಲೇ ಒಪ್ಪಿಕೊಂಡಿರೋ ಪ್ರಾಜೆಕ್ಟ್‌ಗಳೆಲ್ಲ ಮುಗಿಯುತ್ತಿದ್ದಂತೆ 50ನೇ ಸಿನಿಮಾಗೆ ರೆಡಿಯಾಗಲಿದ್ದಾರೆ. ಹಾಗೇ ರಿಷಬ್ ಕೂಡ 'ಕಾಂತಾರ 2'ನಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಮಾಡಿ ಮುಗಿಸುವ ಹೊತ್ತಿಗೆ ಕಿಚ್ಚ 50ನೇ ಸಿನಿಮಾಗೆ ರೆಡಿಯಾಗುತ್ತಾರೆ ಅನ್ನೋದು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ. ಒಂದು ವೇಳೆ ಇದು ಗಾಳಿ ಸುದ್ದಿಯಾಗದೇ ಇದ್ದರೆ, ಫ್ಯಾನ್ಸ್‌ಗೆ ಹಬ್ಬ.


Click it and Unblock the Notifications











