ವಿತರಕರ ಮುಂದೆ ₹1000 ಕೋಟಿ ಡಿಮ್ಯಾಂಡ್ ಇಟ್ಟ 'ಪುಷ್ಪ': ಅಲ್ಲು ಅರ್ಜುನ್‌ಗೆ ಇಷ್ಟೊಂದ್ಯಾಕೆ ಬೇಕು?

By ಫಿಲ್ಮಿಬೀಟ್ ಡೆಸ್ಕ್

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದ ದಕ್ಷಿಣದ ಸೂಪರ್‌ಸ್ಟಾರ್‌ಗಳಲ್ಲಿ ಅಲ್ಲು ಅರ್ಜುನ್ ಕೂಡ ಇದ್ದಾರೆ. 'ಪುಷ್ಪ' ಭಾರತದಷ್ಟೇ ಅಲ್ಲ, ವಿದೇಶಗಳಲ್ಲಿಯೂ ಸದ್ದು ಮಾಡಿದ್ದು ಗೊತ್ತಿರದ ವಿಷಯವೇನಲ್ಲ. ಅಲ್ಲು ಅರ್ಜುನ್ ಐಕಾನ್ ಸ್ಟಾರ್ ಆಗಿದ್ದು, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚುವಂತೆ ಮಾಡಿದ್ದು ಇದೇ ಸಿನಿಮಾ. ಹೀಗಾಗಿ ಮೆಗಾ ಹಿಟ್ ಕೊಡುವುದಕ್ಕೆ 'ಪುಷ್ಪ 2' ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಕೂಡ ಆರಂಭ ಆಗಿದೆ.

'ಪುಷ್ಪ 2' ಇಡೀ ದೇಶವೇ ಎದುರು ನೋಡುತ್ತಿರುವ ಸಿನಿಮಾ. ದಕ್ಷಿಣ ಭಾರತದ 'ಬಾಹುಬಲಿ 2', 'ಕೆಜಿಎಫ್ 2' ಅಂತಹ ಸೀಕ್ವೆಲ್‌ಗಳು ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದ್ದವು. ಈಗ 'ಪುಷ್ಪ 2' ಕೂಡ ಈ ಸಿನಿಮಾಗಳಂತೆಯೇ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡುತ್ತೆ ಎಂದು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಇದೇ ವೇಳೆ 'ಪುಷ್ಪ 2'ಗಾಗಿ ಅಲ್ಲು ಅರ್ಜುನ್ ಭಾರಿ ಡಿಮ್ಯಾಂಡ್ ಇಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

Buzz Is That Allu Arjun Demanding 1000 Crore For Theatricla Rights For the Movie Pushpa 2

'ಪುಷ್ಪ 2' ₹1000 ಕೋಟಿ ಡಿಮ್ಯಾಂಡ್

ಅಲ್ಲು ಅರ್ಜುನ್ 'ಪುಷ್ಪ 2' ಸಿನಿಮಾಗಾಗಿ ₹1000 ಕೋಟಿ ಡಿಮ್ಯಾಂಡ್ ಇಟ್ಟಿದ್ದಾರಂತೆ. ಈ ಬಗ್ಗೆ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆಲ್ ಓವರ್ ಇಂಡಿಯಾದಲ್ಲಿ 'ಪುಷ್ಪ 2' ಸಿನಿಮಾ ವಿತರಣೆ ಮಾಡಲು ₹1000 ಕೋಟಿ ನೀಡುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಅನ್ನೋದು ಸುದ್ದಿ. 'ಪುಷ್ಪ 2' ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಪಾರ್ಟ್ 1 ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದ್ದರಿಂದ ಈ ಮಟ್ಟಿಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಸುಕುಮಾರ್ ನಿರ್ದೇಶಿಸಿದ 'ಪುಷ್ಪ' 2021ರಲ್ಲಿ ರಿಲೀಸ್ ಆಗಿತ್ತು. ಕೋವಿಡ್ ಇದ್ದಾಗಲೂ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಅಲ್ಲು ಅರ್ಜುನ್ ಸ್ಟೈಲ್, ಮ್ಯಾನರಿಸಂ, ಸ್ಟೆಪ್ಸ್ ಎಲ್ಲವೂ ಮೋಡಿ ಮಾಡಿದ್ದವು. ಹಾಗೇ ರಶ್ಮಿಕಾ ಮಂದಣ್ಣ ಡಿಗ್ಲಾಮರ್ ರೋಲ್‌ನಲ್ಲಿ ಕಂಡಿದ್ದರೂ ಸಿನಿಪ್ರಿಯರಿಗೆ ಇಷ್ಟ ಆಗಿತ್ತು. ಅದೇ ಮೊದಲ ಬಾರಿಗೆ ಹಿಂದಿ ಬೆಲ್ಟ್‌ಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಮೊದಲ ಪ್ರಯತ್ನದಲ್ಲೇ ಅಲ್ಲು ಅರ್ಜುನ್ ಸಿನಿಮಾ ₹100 ಕೋಟಿ ಕೊಳ್ಳೆ ಹೊಡೆದಿತ್ತು.

'RRR'ಗಿಂತ ಹೆಚ್ಚು ಡಿಮ್ಯಾಂಡ್

ಬಿಡುಗಡೆಯ ಬಳಿಕವೂ ವಿಶ್ವದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿರುವ 'RRR' ಬಿಡುಗಡೆಗೂ ಮುನ್ನವೇ 900 ಕೋಟಿ ರೂ.ಗಳಷ್ಟು ಬ್ಯುಸಿನೆಸ್ ಮಾಡಿತ್ತು. ಈಗ 'ಪುಷ್ಪ 2' ಅದಕ್ಕಿಂತಲೂ ಹೆಚ್ಚು ಬ್ಯುಸಿನೆಸ್ ಮಾಡಲು ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ. ಈ ಮೂಲಕ 'RRR' ಬ್ಯುಸಿನೆಸ್ ರೆಕಾರ್ಡ್‌ ಅನ್ನು ಬ್ರೇಕ್ ಮಾಡುವುದಕ್ಕೆ ಅಲ್ಲು ಅರ್ಜುನ್ ಮುಂದಾಗಿದ್ದಾರೆ ಎನ್ನಲಾಗಿದೆ.

Buzz Is That Allu Arjun Demanding 1000 Crore For Theatricla Rights For the Movie Pushpa 2

ಅಲ್ಲು ಅರ್ಜುನ್ ವಿತರಕರ ಬಳಿ ₹1000 ಕೋಟಿ ಡಿಮ್ಯಾಂಡ್ ಮಾಡುತ್ತಿದ್ದಾರೆ ಅನ್ನೋದು ಸುದ್ದಿ ಟಾಲಿವುಡ್‌ನಲ್ಲಿ ಗುಲ್ಲೆದ್ದಿದೆ. ಇದೇ ವೇಳೆ 'ಪುಪ್ಪ 2' ಇಷ್ಟೊಂದು ದೊಡ್ಡ ಕೇಳಿದ್ದು ಸುಳ್ಳು. ಇಂತಹ ಸುದ್ದಿಯನ್ನು ಸುಮ್ಮನೆ ಹಬ್ಬಿಸಲಾಗುತ್ತಿದೆ ಎಂದು ಟಾಲಿವುಡ್‌ನ ಕೆಲವು ಮೂಲಗಳು ಹೇಳುತ್ತಿವೆ. ಆದರೂ, 'ಪುಷ್ಪ 2'ಗಿರುವ ಡಿಮ್ಯಾಂಡ್ ಬಗ್ಗೆ ಟಾಲಿವುಡ್‌ನಲ್ಲಿ ಜೋರಾಗಿ ಚರ್ಚೆಯಂತೂ ಆಗುತ್ತಿದೆ.

'ಪುಷ್ಪ 2' ಶೂಟಿಂಗ್ ಬಿಡುವಿಲ್ಲದೆ ನಡೆಯುತ್ತಿದೆ. ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿದ್ದು, ಇನ್ನೊಂದು ಹಂತದ ಚಿತ್ರೀಕರಣ ನಡೆಯುತ್ತಿದೆ. ಸುಕುಮಾರ್ ಈ ಸಿನಿಮಾವನ್ನು ಗ್ಲೋಬಲ್ ಲೆವೆಲ್‌ನಲ್ಲಿ ರೀಚ್ ಮಾಡುವುದಕ್ಕೆ ಹೊರಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಜೆಟ್ ಕೂಡ ಗಗನಕ್ಕೇರಿದೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಜೋರಾಗಿಯೇ ಓಡಾಡುತ್ತಿದೆ. ಏನೇ ಇದ್ರೂ, ಅಲ್ಲು ಅರ್ಜುನ್ 'ಪುಷ್ಪ 2'ಗಾಗಿ ₹1000 ಕೋಟಿ ಡಿಮ್ಯಾಂಡ್ ಮಾಡಿದ್ರಾ? ಅನ್ನೋ ಪ್ರಶ್ನೆಯಂತು ಚರ್ಚೆಯಾಗುತ್ತಿದೆ.

More from Filmibeat

English summary
Buzz Is That Allu Arjun Demanding 1000 Crore For Theatricla Rights For the Movie Pushpa 2, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X