ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ವಿಚ್ಛೇದನ ವದಂತಿ; ಬಿಗ್ ಬಿ ಪುತ್ರಿ ಮಾಡಿದ ಅವಮಾನವೇ ಕಾರಣನಾ?
ಬಾಲಿವುಡ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಬ್ಬರೂ ಬೇರೆ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಅನ್ನೋ ವದಂತಿಗಳು ಹರಿದಾಡಿದ್ದವು. ಇಂತಹ ಸುದ್ದಿಗಳು ಓಡಾಡಿದಾಗಲೆಲ್ಲ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡು ಅದೆಲ್ಲ ಸುಳ್ಳು ಎಂದು ಸಾಬೀತು ಮಾಡಿದ್ದರು.
ಈ ಬೆನ್ನಲ್ಲೆ ಮತ್ತೊಂದು ಹಳೇ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಐಶ್ವರ್ಯಾ ರೈ ಬಚ್ಚನ್ ಸಂಸಾರದಲ್ಲಿ ಬಿರುಗಾಳಿ ಎದ್ದಿರುವಾಗಲೇ ಅಮಿತಾಭ್ ಬಚ್ಚನ್ ಪುತ್ರಿ ಶ್ವೇತಾ ಬಚ್ಚನ್ ನಂದಾ ಅತ್ತಿಗೆ ಐಶ್ವರ್ಯಾಗೆ ಅವಮಾನ ಮಾಡಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಅಸಲಿಗೆ ಶ್ವೇತಾ ಬಚ್ಚನ್ ನಿಜಕ್ಕೂ ಐಶ್ವರ್ಯಾಗೆ ಅವಮಾನ ಮಾಡಿದ್ರಾ? ಏನಿದು ಸುದ್ದಿ ತಿಳಿಯುವುದಕ್ಕೆ ಮುಂದೆ ಓದಿ.

ಅಭಿಷೇಕ್ ಬಚ್ಚನ್ ಮಾಜಿ ವಿಶ್ವ ಸುಂದರಿ ಹಾಗೂ ನಟಿ ಐಶ್ವರ್ಯಾ ರೈ ಅನ್ನು ಪ್ರೀತಿಸಿ ಮದುವೆ ಆಗುವುದಕ್ಕೂ ಮುನ್ನ ಕರೀಷ್ಮಾ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಈ ಸುದ್ದಿ ಗೌಪ್ಯವಾಗೇನೂ ಉಳಿದಿರಲಿಲ್ಲ. ಇನ್ನೇ ಬಚ್ಚನ್ ಕುಟುಂಬ ಹಾಗೂ ಕಪೂರ್ ಕುಟುಂಬ ಒಂದಾಗೇ ಬಿಡ್ತು ಅನ್ನುವಾಗಲೇ ಕರೀಷ್ಮಾ ಕಪೂರ್ ಹಾಗೂ ಅಭಿಷೇಕ್ ಇಬ್ಬರೂ ಬೇರೆಯಾದರು
ಇಬ್ಬರು ಬೇರೆಯಾದ ಬಳಿಕ ಅಭಿಷೇಕ್ ಹಾಗೂ ಐಶ್ವರ್ಯಾ ಇಬ್ಬರೂ ಪ್ರೀತಿಸಿ 2007ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2011ರಲ್ಲಿ ಈ ಜೋಡಿ ಆರಾಧ್ಯಾಗೆ ಜನ್ಮ ನೀಡಿದ್ದರು. ಅಲ್ಲಿಂದ ಇಲ್ಲಿವರೆಗೂ ಇವರಿಬ್ಬರ ಸಂಸಾರದಲ್ಲಿ ಬಿರುಕು ಅನ್ನೋ ಮಾತು ಕೇಳಿ ಬಂದಿದ್ದೇ ಇಲ್ಲ. ಆದ್ರೀಗ ವಿಚ್ಚೇದನದ ಸುದ್ದಿ ಓಡಾಡುತ್ತಿರುವಾಗಲೇ ಹಿಂದೆ ಐಶ್ವರ್ಯಾಗೆ ಬಚ್ಚನ್ ಪುತ್ರಿ ಶ್ವೇತಾ ಮುಜುಗರವನ್ನುಂಟು ಮಾಡಿದ್ದರು ಎಂಬ ಸುದ್ದಿನೂ ಓಡಾಡುತ್ತಿದೆ.
ಅಷ್ಟಕ್ಕೂ ಆಗಿದ್ದಿಷ್ಟು, 2018ರಲ್ಲಿ ಅಮಿತಾಭ್ ಬಚ್ಚನ್ ಪುತ್ರಿ ಶ್ವೇತಾ ಬಚ್ಚನ್ ನಂದಾ ಹೊಸ ಉದ್ಯಮವನ್ನು ಆರಂಭಿಸಿದ್ದರು. ಮೊನಿಶಾ ಜೈಸಿಂಗ್ ಎಂಬ ಡಿಸೈನರ್ ಜೊತೆ ಸೇರಿಕೊಂಡು ಮ್ಯಾಕ್ಸ್ ಸಹಯೋಗದಲ್ಲಿ ಉಡುಪುಗಳ ಬ್ರ್ಯಾಂಡ್ ಅನ್ನು ಹೊರತಂದಿದ್ದರು. ಇದು ಉದ್ಘಾಟನಾ ಕಾರ್ಯಕ್ರಮಕ್ಕೆ ಬಾಲಿವುಡ್ ತಾರೆಯರೇ ನರೆದಿದ್ದರು. ಅದಕ್ಕೆ ಕರೀಷ್ಮಾ ಕಪೂರ್‌ಗೂ ಆಹ್ವಾನ ನೀಡಲಾಗಿತ್ತು.
ಅಭಿಷೇಕ್ ಬಚ್ಚನ್‌ನಿಂದ ಕರೀಷ್ಮಾ ಕಪೂರ್ ದೂರವಾದ್ಮೇಲೆ ಬಚ್ಚನ್ ಕುಟುಂಬ ಸದಸ್ಯರು ಕೂಡ ದೂರವಿದ್ದರು. ಮೊದಲಿನಿಂದಲೂ ಕರೀಷ್ಮಾ ಹಾಗೂ ಶ್ವೇತಾ ಬಚ್ಚನ್ ನಂದಾ ನಡುವೆ ಉತ್ತಮ ಬಾಂಧವ್ಯವಿತ್ತು. ಹೀಗಾಗಿ ಎಲ್ಲಾ ಮರೆತು ಆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಈ ಸಂದರ್ಭದಲ್ಲಿ ಐಶ್ವರ್ಯಾ ಹಾಗೂ ಕರೀಷ್ಮಾ ಮುಖಾ ಮುಖಿಯಾಗಿದ್ದರು. ಇದು ಐಶ್ವರ್ಯಾ ರೈಗೆ ಮುಜುಗರ ಉಂಟು ಮಾಡಿತ್ತು ಎಂದು ವರದಿಯಾಗಿತ್ತು.


Click it and Unblock the Notifications











