'ಸಲಾರ್' ಸಿನಿಮಾದಿಂದ ಹೊಂಬಾಳೆ ಫಿಲ್ಮ್ಸ್ ನಷ್ಟದಲ್ಲಿ ಇದೆಯಾ? ತೆಲುಗು ಚಿತ್ರರಂಗದಲ್ಲಿ ಓಡಾಡ್ತಿರೋ ಸುದ್ದಿಯೇನು?

By ಫಿಲ್ಮಿಬೀಟ್ ಡೆಸ್ಕ್

'ಸಲಾರ್' ಸಿನಿಮಾ ಮೂವರಿಗೆ ಗೆಲ್ಲಲೇ ಬೇಕು. 'ಕೆಜಿಎಫ್ 2' ಅಂತಹ ಮೆಗಾ ಸಿನಿಮಾಗಳನ್ನು ಕೊಟ್ಟಿರೋ ಪ್ರಶಾಂತ್ ನೀಲ್ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಹೀಗಾಗಿ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೇರಲು ಈ ಸಿನಿಮಾ ಅವರಿಗೆ ಗೆಲ್ಲಲೇಬೇಕು. ಇನ್ನೊಂದು ಕಡೆ 'ಕೆಜಿಎಫ್', 'ಕಾಂತಾರ' ಬಳಿಕ ದೊಡ್ಡ ಸಕ್ಸಸ್ ಕೊಡದ ಹೊಂಬಾಳೆ ಫಿಲ್ಮ್ಸ್‌ಗೂ ಈ ಸಿನಿಮಾ ಗೆಲ್ಲಲೇ ಬೇಕು.

ಇತ್ತ 'ಬಾಹುಬಲಿ 2'ನಿಂದ ಒಂದೇ ಒಂದು ಮೆಗಾ ಹಿಟ್ ಕೊಡಲು ಪರದಾಡುತ್ತಿರೋ ಪ್ರಭಾಸ್‌ಗೂ ಗೆಲ್ಲಲೇಬೇಕಿದೆ. 'ಸಾಹೋ', 'ರಾಧೆ ಶ್ಯಾಮ್', 'ಆದಿಪುರುಷ್' ಅಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದು ಪ್ರಭಾಸ್ ಕರಿಯರ್‌ಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ. ಹೀಗಾಗಿ ಫ್ಯಾನ್ಸ್ 'ಸಲಾರ್' ಮೇಲೆ ನಂಬಿಕೆ ಇಟ್ಟು ಕೂತಿದ್ದಾರೆ.

hombale-films-prashanth-neel-prabhas

ಇಷ್ಟೆಲ್ಲ ಲೆಕ್ಕಾಚಾರಗಳ ಮಧ್ಯೆ ಟಾಲಿವುಡ್‌ನಲ್ಲಿ ಸುದ್ದಿಯೊಂದು ಓಡಾಡುತ್ತಿದೆ. 'ಸಲಾರ್' ಸಿನಿಮಾದಿಂದ ಹೊಂಬಾಳೆ ಫಿಲ್ಮ್ಸ್‌ಗೆ ದೊಡ್ಡ ಮಟ್ಟದ ನಷ್ಟ ಆಗಿದೆ. ಇದಕ್ಕೆ ಕಾರಣ ಪ್ರಶಾಂತ್ ನೀಲ್ ತೆಗೆದುಕೊಂಡ ಒಂದು ನಿರ್ಧಾರ ಎಂದು ವರದಿ ಮಾಡಲಾಗಿದೆ. ಅಷ್ಟಕ್ಕೂ 'ಸಲಾರ್' ರಿಲೀಸ್ ಆಗದೇನೇ ಹೊಂಬಾಳೆ ಫಿಲ್ಮ್ಸ್‌ಗೆ ನಷ್ಟ ಆಗಿದ್ದೇಗೆ? ತಿಳಿಯಲು ಮುಂದೆ ಓದಿ..

'ಸಲಾರ್' ಸಿನಿಮಾವನ್ನು ಗೆಲ್ಲಿಸಲೇಬೇಕು ಅಂತ ಹೊಂಬಾಳೆ ಫಿಲ್ಮ್ಸ್ ಹಾಗೂ ಪ್ರಶಾಂತ್ ನೀಲ್ ಪಣ ತೊಟ್ಟು ನಿಂತಿದ್ದಾರೆ. ಅದಕ್ಕೆ ಈಗಾಗಲೇ ನೂರಾರು ಕೋಟಿ ಹಣವನ್ನು ಖರ್ಚು ಮಾಡಿದ್ದಾರೆ. ಆಕ್ಷನ್-ಥ್ರಿಲ್ಲರ್ ಸಿನಿಮಾ ಆಗಿದ್ದರಿಂದ 'ಸಲಾರ್' ಪ್ರಭಾಸ್‌ಗೆ ದೊಡ್ಡ ಮಟ್ಟದ ಸಕ್ಸಸ್ ಕೊಡುತ್ತೆ ಅನ್ನೋ ನಿರೀಕ್ಷೆಯಿದೆ. ಆದರೆ, ಇತ್ತೀಚೆಗೆ ಪ್ರಶಾಂತ್ ನೀಲ್ ಕೆಲವು ದೃಶ್ಯಗಳನ್ನು ರೀ-ಶೂಟ್ ಮಾಡಿದ್ದರು. ಅದು ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದೆ.

ಇನ್ನೊಂದು ಕಡೆ ಶಾರುಖ್ ಖಾನ್ ಸಿನಿಮಾ 'ಡಂಕಿ' ಜೊತೆ 'ಸಲಾರ್' ರಿಲೀಸ್ ಆಗುತ್ತಿರೋದ್ರಿಂದ ಮತ್ತಷ್ಟು ಆತಂಕ ಹುಟ್ಟಿಸಿದೆ. ಶಾರುಖ್ ಖಾನ್ ಎರಡು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಂದ ಮತ್ತೆ ಬಾಕ್ಸಾಫೀಸ್ ಕಿಂಗ್ ಆಗಿ ಹೊರ ಹೊಮ್ಮಿದ್ದಾರೆ. ಈ ಮಧ್ಯೆ 'ಡಂಕಿ'ಗೆ ರಾಜ್‌ಕುಮಾರ್ ಹಿರಾನಿ ನಿರ್ದೇಶನವಿದೆ. ಈ ಎಲ್ಲಾ ಕಾರಣಕ್ಕೆ 'ಸಲಾರ್' ಸ್ವಲ್ಪ ಟೆನ್ಷನ್‌ನಲ್ಲಿದೆ ಎಂದು ಟಾಲಿವುಡ್ ಸುದ್ದಿ ಬಿತ್ತರಿಸುವ ಮಾಧ್ಯಮಗಳು ವರದಿ ಮಾಡಿವೆ.

hombale-films-prashanth-neel-prabhas

ಇಷ್ಟೇ ಅಲ್ಲ. 'ಸಲಾರ್' ಸಿನಿಮಾ ಮಾಡಿ ಹೊಂಬಾಳೆ ಫಿಲ್ಮ್ಸ್ ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಮೇಲೆ ನಂಬಿಕೆ ಇಟ್ಟಿರೋ ಹೊಂಬಾಳೆ ಮೊದಲ ಸಾಕಷ್ಟು ಹಣವನ್ನು ಸುರಿದಿತ್ತು. ಆದರೆ, ಸಿನಿಮಾ ಮುಗಿದ ಮೇಲೆ ಕೆಲವು ದೃಶ್ಯಗಳನ್ನು ಪ್ರಶಾಂತ್ ನೀಲ್ ಡಿಲೀಟ್ ಮಾಡಿ ಹೊಸದಾಗಿ ಶೂಟ್ ಮಾಡಿದ್ದಾರೆ. ಇದರಿಂದ ಸಾಕಷ್ಟು ಹಣ ನಷ್ಟ ಆಗಿದೆ ಎಂದು ಟಾಲಿವುಡ್‌ನಲ್ಲಿ ಸುದ್ದಿಯಾಗಿದೆ.

ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರ್ ಬಾಲ್ಯದ ದೃಶ್ಯಗಳು ಪ್ರಶಾಂತ್‌ ನೀಲ್‌ಗೆ ತೃಪ್ತಿ ಕೊಟ್ಟಿಲ್ಲ. ಈ ಎಪಿಸೋಡ್‌ ಅನ್ನು ಸಿನಿಮಾ ಹೆಚ್ಚು ಸಮಯವಿದ್ದು, ಅದನ್ನು ಡಿಲೀಟ್ ಮಾಡಿ ಮತ್ತೆ ಚಿತ್ರೀಕರಣ ಮಾಡಿದ್ದಾರೆ. ಇದರಿಂದ ಮೊದಲೇ ಹೆಚ್ಚು ಹಣ ಸುರಿದು ಶೂಟ್ ಮಾಡಿದ್ದ ದೃಶ್ಯಗಳು ತೆಗೆದು ಹಾಕಿ ಮತ್ತೆ ಹೊಸದಾಗಿ ಚಿತ್ರೀಕರಣ ಮಾಡಿದ್ದರಿಂದ ಹೊಂಬಾಳೆ ಫಿಲ್ಮ್ಸ್‌ಗೆ ನಷ್ಟ ಆಗಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಎರಡು ಮೆಗಾ ಹಿಟ್‌ಗಳನ್ನು ಕೊಟ್ಟಿರೋ ಹೊಂಬಾಳೆ ಫಿಲ್ಮ್ಸ್ ಅಂತಹ ಸಂಸ್ಥೆಗೆ ನಷ್ಟ ಅಂದರೆ ಯಾರಾದರೂ ನಂಬುವುದುಂಟೇ.. ಈ ಸುದ್ದಿಗೆ ಹೊಂಬಾಳೆ ಫಿಲ್ಮ್ಸ್ ಇನ್ನೂ ಪ್ರತಿಕ್ರಿಯೆ ನೀಡಬೇಕಿದೆ. ಅಲ್ಲಿಗೆವರೆಗೂ ಈ ಸುದ್ದಿ ಕೇವಲ ಗಾಳಿ ಸುದ್ದಿಯೇ ಹರಿದಾಡುತ್ತಾ ಇರುತ್ತೆ. ಹಾಗೇ 'ಸಲಾರ್' ಟೀಸರ್ ಬರೋವರೆಗೂ ಎಲ್ಲವೂ ನಿಗೂಢವಾಗಿಯೇ ಇರುತ್ತೆ.

More from Filmibeat

English summary
Hombale Films in huge loss because of salaar re-shoots
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X