ದರ್ಶನ್- ಜೋಗಿ ಪ್ರೇಮ್ ಸಿನಿಮಾದ ಟೈಟಲ್ ಏನು? ಅದೇ ಟೈಟಲ್ ಬೇಕು ಅಂತ್ತಿದ್ದಾರಾ ಶೋ ಮ್ಯಾನ್?

By ಫಿಲ್ಮಿಬೀಟ್ ಡೆಸ್ಕ್

ದರ್ಶನ್ ಜೊತೆ ಸಿನಿಮಾ ಮಾಡುವುದಕ್ಕೆ ನಿರ್ದೇಶಕರ ದೊಡ್ಡ ಕ್ಯೂನೇ ಇದೆ. ಚಿತ್ರರಂಗದ ಕೆಲವು ಮೂಲಗಳ ಪ್ರಕಾರ, ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿರೋ ಸಿನಿಮಾಗಳು ಮುಗಿಯೋಕೆ ಕಮ್ಮಿ ಅಂದರೂ ಎರಡು ವರ್ಷ ಬೇಕು. ಅಷ್ಟರಲ್ಲೇ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದಾರೆ. ಈ ಕಾರಣಕ್ಕೆ ದರ್ಶನ್‌ಗೆ ಸಿನಿಮಾ ಮಾಡುವುದಕ್ಕೆ ತಯಾರಿ ನಡೆಸಿದ್ದ ನಿರ್ದೇಶಕರು ತಮ್ಮ ಪ್ರಾಜೆಕ್ಟ್‌ ಅನ್ನು ಮುಂದಕ್ಕೆ ಹಾಕಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ.

ದರ್ಶನ್ ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್ ಸಿನಿಮಾ ಹೆಚ್ಚು ಚರ್ಚೆಯಲ್ಲಿತ್ತು. ಎಲ್ಲದಕ್ಕೂ ಮಿಲನಾ ಪ್ರಕಾಶ್ ನಿರ್ದೇಶಿಸುತ್ತಿದ್ದ 'ಡೆವಿಲ್' ಸಿನಿಮಾ ಮುಗಿದ ಬಳಿಕ ಯಾವ ನಿರ್ದೇಶಕರ ಸಿನಿಮಾವನ್ನು ಕೈಗೆತ್ತಿಕೊಳ್ಳುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ, ಅಷ್ಟರೊಳಗೆ ದರ್ಶನ್ ಎಡವಟ್ಟು ಮಾಡಿಕೊಂಡಿದ್ದಾರೆ.

Buzz is that Jogi Prem is trying to take the Khaidi title for his next movie with Darshan

ಈ ಬೆನ್ನಲ್ಲೇ ದರ್ಶನ್ ಫ್ಯಾನ್ಸ್‌ಗೆ ಖುಷಿ ಕೊಡುವ ವಿಷಯವೊಂದು ಹರಿದಾಡುತ್ತಿದೆ. ಜೋಗಿ ಪ್ರೇಮ್ ಈಗಾಗಲೇ ದರ್ಶನ್ ಸಿನಿಮಾಗೆ ಟೈಟಲ್ ಹುಡುಕಾಟದಲ್ಲಿ ಇದ್ದಾರಂತೆ. ಸದ್ಯಕ್ಕೆ ಒಂದು ಟೈಟಲ್ ಮೇಲೆ ಕಣ್ಣಿಟ್ಟಿದ್ದು, ಅದನ್ನೇ ತಮ್ಮ ಸಿನಿಮಾದ ಶೀರ್ಷಿಕೆ ಮಾಡಿಕೊಳ್ಳುವುದಕ್ಕೆ ಸ್ಕೆಚ್ ಹಾಕುತ್ತಿದ್ದಾರೆ ಅನ್ನೋ ಮಾತೊಂದು ಕೇಳಿ ಬರುತ್ತಿದೆ.

ದರ್ಶನ್ ಜೈಲಿಗೆ ಹೋದ ಮೇಲೆ ಅವರ ಖೈದಿ ನಂ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿತ್ತು. ದರ್ಶನ್ ಅಭಿಮಾನಿಗಳ ಈ ಕ್ರೇಜ್ ಅನ್ನು ನೋಡಿ ಜೋಗಿ ಪ್ರೇಮ್ ಇಂತಹದ್ದೇ ಒಂದು ಟೈಟಲ್‌ನ ಹುಡುಕಾಟದಲ್ಲಿ ಇದ್ದಾರಂತೆ. ಹೀಗಂತ ಕನ್ನಡ ಚಿತ್ರರಂಗದಲ್ಲಿ ಸುದ್ದಿಯೊಂದು ಓಡಾಡುತ್ತಿದೆ. ಅಸಲಿಗೆ ಜೋಗಿ ಪ್ರೇಮ್ ಹುಡುಕುತ್ತಿದ್ದಾರೆ ಎನ್ನಲಾದ ಆ ಟೈಟಲ್ ಯಾವುದು ಗೊತ್ತೇ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಹೋಗುತ್ತಿದ್ದಂತೆ ಕೈದಿ ಸಂಖ್ಯೆ 6106 ನೀಡಲಾಗಿದೆ. ಈ ವಿಷಯ ಮಾಧ್ಯಮಗಳಲ್ಲಿ ಹೊರಬೀಳುತ್ತಿದ್ದಂತೆ ದರ್ಶನ್ ಅಭಿಮಾನಿಗಳ ತಮ್ಮ ಬೈಕ್‌ಗಳ ಮೇಲೆ, ಶರ್ಟ್‌ಗಳ ಮೇಲೆ ಪ್ರಿಂಟ್ ಹಾಕಿಸಿಕೊಂಡಿದ್ದರು. ಕೆಲವರು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದರು. ಮತ್ತೊಬ್ಬ ತನ್ನ ಮಗುವಿಗೆ ಕೈದಿ ಡ್ರೆಸ್ ಹಾಕಿಸಿ, ಫೋಟೊಶೂಟ್ ಮಾಡಿಸಿ ಪೇಚಿಗೆ ಸಿಕ್ಕಿಕೊಂಡಿದ್ದ. ಈ ಎಲ್ಲಾ ಕಾರಣಕ್ಕೆ ಇದು ಟ್ರೆಂಡಿಂಗ್‌ನಲ್ಲಿತ್ತು.

Buzz is that Jogi Prem is trying to take the Khaidi title for his next movie with Darshan

ಈ ಟ್ರೆಂಡ್ ಬಳಿಕ ಜೋಗಿ ಪ್ರೇಮ್ 'ಕೈದಿ' ಅನ್ನುವ ಟೈಟಲ್‌ಗೆ ಹುಡುಕಾಡುತ್ತಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ದರ್ಶನ್ ಜೈಲಿನಿಂದ ಹೊರಬರುತ್ತಿದ್ದಂತೆ ಈ ಟೈಟಲ್ ಇಟ್ಟು ಸಿನಿಮಾ ಮಾಡುವುದಕ್ಕೆ ಚಿಂತಿಸುತ್ತಿದ್ದಾರೆ ಅನ್ನೋ ಮಾತು ಗಾಂಧಿನಗರದ ಗಲ್ಲಿಯೊಳಗೆ ಹರಿದಾಡುತ್ತಿದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಯಾರೂ ಹೇಳಿಕೆ ಕೊಟ್ಟಿಲ್ಲ. ಈ ಕಾರಣಕ್ಕೆ ಇದು ಕೇವಲ ಸಿನಿಮಾ ವಲಯದಲ್ಲಿ ಓಡಾಡುತ್ತಿರುವ ಸುದ್ದಿಯಷ್ಟೇ.

ಒಂದು ವೇಳೆ ಈ ಟೈಟಲ್‌ ಇಟ್ಟರೆ, ದರ್ಶನ್ ಒಪ್ಪುತ್ತಾರಾ? ಕೆವಿಎನ್‌ ಪ್ರೊಡಕ್ಷನ್ ಒಪ್ಪಬಹುದಾ? ಅನ್ನೋ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ. ಆದರೆ, ಪ್ರೇಮ್‌ಗೆ 'ಕೈದಿ' ಟೈಟಲ್ ಬೇಕು ಅಂತ ಅನಿಸಿದರೆ, ದರ್ಶನ್‌ರನ್ನು ಹೇಗಾದರೂ ಒಪ್ಪಿಸಬಹುದು ಅನ್ನೋ ಚರ್ಚೆ ಕೂಡ ಆಗುತ್ತಿದೆಯಂತೆ. ಅಸಲಿಗೆ 'ಕೈದಿ' ಟೈಟಲ್ ಯಾರ ಬಳಿ ಇದೆ ಅನ್ನೋದು ಗೊತ್ತಿಲ್ಲ. ನಿಜಕ್ಕೂ ಹುಡುಕುತ್ತಿದ್ದಾರಾ? ಇಲ್ವಾ? ಅನ್ನೋದನ್ನು ಪ್ರೇಮ್ ಹೇಳಬೇಕಿದೆ.

More from Filmibeat

English summary
Jogi Prem seaching for Khaidi title to Darshan movie:
Read more about: darshan prem ದರ್ಶನ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X