ಪ್ರೀತಿಸಿ ಮದುವೆಯಾದ ಪತ್ನಿ ವಿಚ್ಛೇದನ ಕೊಟ್ಟು ನಟಿಯೊಂದಿಗೆ ವಾಸ? ಯಾರದು ಕನ್ನಡದ ನಿರ್ದೇಶಕನ?

By ಫಿಲ್ಮಿಬೀಟ್ ಡೆಸ್ಕ್

ಚಿತ್ರರಂಗ ಅಂದ್ಮೇಲೆ ಗಾಳಿ ಸುದ್ಧಿಗಳಿಗೇನು ಕಮ್ಮಿಯಿರಲ್ಲ. ಯಾವುದೇ ಚಿತ್ರರಂಗಕ್ಕೆ ಹೋದರೂ ಒಂದಲ್ಲ ಒಂದು ಗಾಳಿ ಸುದ್ದಿ ಹರಿದಾಡುತ್ತಲೇ ಇರುತ್ತೆ. ಅದರಲ್ಲೂ ಅಫೇರ್‌ನಂತಹ ಸುದ್ದಿಗಳೇ ಹೆಚ್ಚು. ಸದ್ಯ ಕನ್ನಡ ಚಿತ್ರರಂಗದಲ್ಲೂ ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ. ಕನ್ನಡ ಸ್ಟಾರ್ ನಿರ್ದೇಶಕರೊಬ್ಬರು ನಟಿಯ ಪ್ರೀತಿಯಲ್ಲಿ ಮುಳುಗಿ ಹೋಗಿದ್ದಾರಂತೆ.

ಕನ್ನಡ ಚಿತ್ರರಂಗದಲ್ಲಿ ಅಫೇರ್‌ಗಳು, ವಿಚ್ಛೇದನ ಇಂತಹ ಸುದ್ದಿಗಳು ಹೊರ ಬರೋದು ತೀರಾ ವಿರಳ. ಇತ್ತೀಚೆಗಷ್ಟೇ ಒಂದಿಷ್ಟು ಯುವ ರಾಜ್‌ಕುಮಾರ್, ಚಂದನ್ ಶೆಟ್ಟಿ ಅಂತ ಯುವ ಪ್ರತಿಭೆಗಳ ಕೌಟುಂಬಿಕ ಜೀವನ ಒಡೆದು ಹೋಗಿ ಟೀಕೆಗೆ ಗುರಿಯಾಗಿತ್ತು. ಈಗ ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕರೊಬ್ಬರು ತಮ್ಮ ವಿಚ್ಛೇದನದ ಸುದ್ದಿಯನ್ನು ಮುಚ್ಚಿಟ್ಟಿದ್ದಾರೆ ಅನ್ನೋ ಗುಸುಗುಸು ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಓಡಾಡುತ್ತಿದೆ.

Buzz is that Kannada star director gave divorce to his wife and living with actress

ಅಷ್ಟಕ್ಕೂ ಈ ಸ್ಟಾರ್ ನಿರ್ದೇಶಕ ಪ್ರೀತಿಸಿ ಮದುವೆಯಾಗಿದ್ದರು. ಅವರಿಗೊಂದು ಮಗು ಕೂಡ ಇದೆ. ಇಂತಹ ವೇಳೆ ಕನ್ನಡದ ನಟಿಯ ಪ್ರೇಮಾಂಕುರವಾಗಿದೆ. ಹೀಗಾಗಿ ಪತ್ನಿಯಿಂದ ದೂರವಿದ್ದಾರೆ. ಸದ್ಯ ಆ ನಟಿಯೊಂದಿಗೆ ಲಿವ್ ಇನ್‌ ರಿಲೇಷನ್‌ಶಿಫ್‌ನಲ್ಲಿ ಇದ್ದಾರೆ ಅಂತ ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಆ ನಿರ್ದೇಶಕ ಈಗಾಗಲೇ ಕನ್ನಡ ಸೇರಿದಂತೆ ಪರಭಾಷೆಯಲ್ಲೂ ಆಕ್ಷನ್ ಕಟ್ ಹೇಳಿ ಬಂದಿದ್ದಾರಂತೆ.

ವೃತ್ತಿ ಜೀವನಕ್ಕೆ ಬಂದರೆ, ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿರುವ ಇವರಿಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಳ್ಳೆಯ ಹೆಸರಿದೆ. ಬುದ್ಧಿವಂತ ಪ್ರೇಕ್ಷಕರು ಎನಿಸಿಕೊಂಡವರು ಇವರ ಸಿನಿಮಾಗಳಿಗೆ ರೆಗ್ಯೂಲವ್ ವಿಸಿಟರ್. ಈ ನಿರ್ದೇಶಕ ಕೂಡ ಅವರಿಗಾಗಿಯೇ ಸಿನಿಮಾ ಮಾಡುತ್ತಿದ್ದಾರಾ? ಅನ್ನೋ ಪ್ರಶ್ನೆ ಕೆಲವು ಹುಟ್ಟಿಕೊಂಡಿದ್ದೂ ಕೂಡ ಇದೆ. ಇನ್ನು ರಂಗು ರಂಗಿನ ಪ್ರಪಂಚಕ್ಕೆ ಕಾಲಿಟ್ಟ ಈ ನಾಯಕಿ ಕೂಡ ನಿರ್ದೇಶಕನ ಪ್ರೀತಿಗೆ ಮನ ಸೋತಿದ್ದಾರಂತೆ.

ಅಷ್ಟಕ್ಕೂ ಕನ್ನಡದ ಸ್ಟಾರ್ ಡೈರೆಕ್ಟರ್ ಕೌಟುಂಬಿಕ ಜೀವನ ಲಾಕ್‌ಡೌನ್ ಸಮಯದಲ್ಲಿಯೇ ಅಲ್ಲಾಡುವುದಕ್ಕೆ ಶುರುವಾಗಿತ್ತಂತೆ. ಪತಿ ಹಾಗೂ ಪತ್ನಿಯ ನಡುವೆ ಮೈಮಸ್ಸು ಮೂಡಿತ್ತು. ಹೀಗಾಗಿ ಎರಡು ವರ್ಷಗಳಿಂದ ಸಂಸಾರದ ಜಂಜಾಟದಲ್ಲಿ ನಿರ್ದೇಶಕನಿದ್ದು, ಸಂಸಾರ ಬಂಧದಿಂದ ಮುಕ್ತಿ ಹೊಂದುವುದಕ್ಕೆ ಶತಪ್ರಯತ್ನ ಮಾಡುತ್ತಿದ್ದಾರೆ. ಮೈಮಸ್ಸು ಶುರುವಾದ ಆರಂಭದಲ್ಲಿ ಪತಿ-ಪತ್ನಿ ಇಬ್ಬರೂ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರಂತೆ (ಖಚಿತ ಮಾಹಿತಿ ಇಲ್ಲ). ಬಳಿಕ ಪತ್ನಿ ಅದನ್ನು ಒಪ್ಪದೆ ನಟಿ ಹಾಗೂ ಪತಿಯೊಂದು ನೆಲೆಸುವುದಕ್ಕೆ ಶುರು ಮಾಡಿದ್ದರು ಅಂತ ಗಾಂಧಿನಗರದ ಗಲ್ಲಿಯಲ್ಲಿ ಆಗುತ್ತಿರುವ ಬಿಸಿ ಬಿಸಿ ಚರ್ಚೆ.

ಸದ್ಯ ಈ ನಿರ್ದೇಶಕ ಸಿನಿಮಾದಿಂದ ದೂರ ಇದ್ದಾರೆ. ಇತ್ತೀಚೆಗೆ ದೊಡ್ಡ ಸಿನಿಮಾವೊಂದಕ್ಕೆ ಆಕ್ಷನ್ ಕಟ್ ಹೇಳಿದ್ದರು. ಆದರೆ, ಆ ಸಿನಿಮಾ ನಿರೀಕ್ಷೆ ಮಾಡಿದಷ್ಟು ಸದ್ದು ಮಾಡಲಿಲ್ಲ. ಹೀಗಾಗಿ ಸ್ವಲ್ಪ ಬ್ರೇಕ್ ತೆಗೆದುಕೊಂಡು ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರಾಂತೆ. ಜೊತೆ ಬೇರೆ ಕೆಲಸದ ಕಡೆಗೆ ಗಮನ ಹರಿಸಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿವೆ. ಆದರೆ, ಈ ನಿರ್ದೇಶಕನಿಗೂ ಆ ನಟಿಗೂ ಲಿಂಕ್ ಹೇಗಾಯ್ತು? ಪ್ರೀತಿ ಹೇಗೆ ಬೆಳೀತು? ಅಂತ ಕೇಳಿದರೆ, ಸುತ್ತಿ ಬಳಸಿ ಒಂದು ಸಿನಿಮಾ ಹೆಸರು ಹೇಳ್ತಾರೆ. ಇದು ಮಾಡರ್ನ್ ಫ್ಯಾಮಿಲಿ ಕಾನ್ಸೆಪ್ಟ್ ಸ್ವಾಮಿ ಅಂತಾರೆ.

ಇನ್ನು ಆ ನಾಯಕ ನಟಿ ಕೂಡ ಪ್ರಬುದ್ಧ ನಟಿಯೇ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಎಂಟ್ರಿ ಕೊಟ್ಟ ಕೆಲವೇ ವರ್ಷಗಳಲ್ಲಿ ತಮ್ಮ ಹೆಸರಿನ ಜೊತೆಗಿದ್ದ ಸರ್‌ ನೇಮ್ ಅನ್ನೂ ಬದಲಾಯಿಸಿಕೊಂಡಿದ್ದಾರಂತೆ. ಅವರೂ ಸಿಂಗಲ್ ಆಗೇ ಇದ್ದು, ಸೈಲೆಂಟ್‌ ಆಗಿ ಸಿನಿಮಾ ಮಾಡಿಕೊಂಡಿದ್ದವರಿಗೆ ನಿರ್ದೇಶಕನ ಮೇಲೆ ಲವ್ ಆಗಿ ಬಿಟ್ಟಿದೆ ನೋಡಿ. ಇಷ್ಟೇ ಲೈಫ್ ನೋಡಿ ಅಂತಾರೆ ವಿನ: ಹೆಸರುಗಳ ಸುಳಿವನ್ನು ಮಾತ್ರ ಬಿಟ್ಟುಕೊಡಲ್ಲ ಗಾಂಧಿನಗರದ ಮಂದಿ. ಈಗ ಆ ಜೋಡಿನೇ ಮುಂದೆ ತಮ್ಮ ಬಗ್ಗೆ ಹಬ್ಬಿರುವ ಸುದ್ದಿ ಸುಳ್ಳಾ, ನಿಜನಾ? ಅಂತ ಹೇಳಬೇಕಿದೆ.

More from Filmibeat

English summary
Buzz is that Kannada star director gave divorce to his wife and living with actress;
Read more about: sandalwood divorce affair
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X