ತನ್ನ ಪ್ರಣಯ ಸಖಿಯ ಮೇಲೆ ವಿರಾಟ ರೂಪ ತೋರಿಸುತ್ತಿರೋ ಯುವ ನಟ: ಗಾಂಧೀನಗರದಲ್ಲಿ ಏನಿದು ಸುದ್ದಿ?

By ಫಿಲ್ಮಿಬೀಟ್ ಡೆಸ್ಕ್

ಯಾವುದೇ ಚಿತ್ರರಂಗಕ್ಕೆ ಹೋದರೂ ಅಷ್ಟೇ. ಅಲ್ಲಿ ಲೆಕ್ಕವಿಲ್ಲದಷ್ಟು ಲವ್ ಸ್ಟೋರಿಗಳು ಸಿಗುತ್ತವೆ. ಒಂದೊಂದು ದಿಕ್ಕಿನಿಂದ ಒಂದೊಂದು ಲವ್ ಸ್ಟೋರಿ ಹುಟ್ಟಿಕೊಳ್ಳುತ್ತವೆ. ಅದರಲ್ಲೂ ಈಗ ತಾನೇ ಚಿತ್ರರಂಗಕ್ಕೆ ಕಾಲಿಟ್ಟ ಪ್ರತಿಭೆಗಳಲ್ಲೂ ಲೈಟ್‌ ಆಗಿ ಪ್ರೀತಿ ಚಿಗುರೊಡೆದಿರುತ್ತೆ. ಇಂತಹ ಸಾಕಷ್ಟು ಲವ್ ಸ್ಟೋರಿಗಳ ಬಗ್ಗೆ ಸಿನಿಮಾ ಮಂದಿನೇ ಮಾತಾಡಿಕೊಂಡು ಓಡಾಡುತ್ತಿರುತ್ತಾರೆ. ಈಗ ಸ್ಯಾಂಡಲ್‌ವುಡ್‌ನಲ್ಲೊಂದು ಒಂದು ಲವ್ ಸ್ಟೋರಿ ಗಾಂಧಿನಗರವೆಲ್ಲ ಸುತ್ತಾಕುತ್ತಿದೆಯಂತೆ.

ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯವಾಗಿ ಲವ್ ಸ್ಟೋರಿಗಳು ಹೊರಗೆ ಬರೋದಿಲ್ಲ. ಅವು ತುಂಬಾನೇ ಗಂಭೀರವಾಗಿ ಮದುವೆವರೆಗೂ ಹೋದಾಗಲೇ ಪ್ರಪಂಚಕ್ಕೆ ಗೊತ್ತಾಗೋದು. ಕನ್ನಡ ಚಿತ್ರರಂಗದಲ್ಲಿ ಲವ್ ಸ್ಟೋರಿಗಳಿಗೇನು ಕಮ್ಮಿಯಿಲ್ಲ. ಅನಂತ್‌ನಾಗ್-ಗಾಯತ್ರಿ, ವಿಷ್ಣುವರ್ಧನ್-ಭಾರತಿ ಹೀಗಿ ಹಳೆ ಪೀಳಿಗೆಯಿಂದ ಶುರು ಮಾಡಿ ಯಶ್-ರಾಧಿಕಾ ಪಂಡಿತ್, ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್, ವಸಿಷ್ಠ ಸಿಂಹ-ಹರಿಪ್ರಿಯಾವರೆಗೂ ಬಂದು ನಿಲ್ಲುತ್ತೆ.

Buzz is that Kannada Young Hero Controlling His Love Interest Actress Full Details Inside

ಇವೆಲ್ಲ ಸೀಕ್ರೆಟ್ ಆಗಿ ಲವ್ ಮಾಡಿ, ಮದುವೆ ಆಗು ಖುಷಿ ಖುಷಿಯಾಗಿದ್ದಾರೆ. ಇನ್ನು ಇಂದಿನ ಯುವ ಪೀಳಿಗೆ ಕೂಡ ಲವ್‌ನಲ್ಲಿ ಬಿದ್ದಿವೆ. ಒಬ್ಬೊಬ್ಬರದ್ದೂ ಒಂದೊಂದು ಟ್ರ್ಯಾಕ್ ನಡೆಯುತ್ತಿದೆ. ಅವು ಕೂಡ ಸೀಕ್ರೆಟ್‌ ಆಗಿಯೇ ನಡೆಯುತ್ತಿದೆ. ಆದರೂ, ಸಿನಿಮಾ ಇಂಡಸ್ಟ್ರಿ ಅಂದ್ಮೇಲೆ ಗೌಪ್ಯವಾಗಿ ಇಡೋದು ಅಷ್ಟು ಸುಲಭವಲ್ಲ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಸೀಕ್ರೆಟ್ ಆಗಿ ಒಂದು ಲವ್ ಸ್ಟೋರಿ ನಡೆಯುತ್ತಿದೆಯಂತೆ. ಆದರೆ, ಈ ಹೀರೋ ತನ್ನ ಪ್ರೇಯಸಿ (ನಟಿಯೂ ಹೌದು) ಯನ್ನು ಸಿಕ್ಕಾಪಟ್ಟೆ ಕಂಟ್ರೋಲ್ ಮಾಡುತ್ತಿದ್ದಾರಂತೆ. ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ. ಅವರು ಯಾರು ಅಂತ ಹೇಳುವುದಕ್ಕಿಂತ, ಮ್ಯಾಟರ್ ಏನು ಅಂತ ತಿಳಿದುಕೊಳ್ಳೋಣ.

ಇತ್ತೀಚೆಗಷ್ಟೇ ಒಂದು ಸೂಪರ್‌ ಹಿಟ್ ಸಿನಿಮಾದಲ್ಲಿ ನಟಿಸಿರುವ ಯುವ ನಟಿ ಹಾಗೂ ಕನ್ನಡದ ಉದಯೋನ್ಮುಖ ನಟನ ನಡುವೆ ಲವ್ ಆಗಿದ್ಯಂತೆ. ಇಬ್ಬರೂ ತುಂಬಾನೇ ಡೀಪ್ ಆಗಿ ಲವ್ ಮಾಡುವುದಕ್ಕೆ ಶುರು ಮಾಡಿದ್ದಾರಂತೆ. ಇಬ್ಬರೂ ತಮ್ಮ ಕರಿಯರ್ ಅನ್ನು ರೂಪಿಸಿಕೊಳ್ಳುವುದರ ಕಡೆಗೆ ಗಮನ ಹರಿಸುತ್ತಿದ್ದರೂ, ಇತ್ತ ಪ್ರೀತಿಯ ಸೆಳೆತ ಒಬ್ಬರನ್ನು ಬಿಟ್ಟು ಒಬ್ಬರು ಇರೋದಕ್ಕೆ ಆಗುತ್ತಿಲ್ಲವಂತೆ.

ಅದರಲ್ಲೂ ರಾಯಲ್ ಮನೆತನದ ಆ ಯುವ ನಟ ಸಿಕ್ಕಾಪಟ್ಟೆ ತನ್ನ ಪ್ರೇಯಸಿಯ ಮೇಲೆ ಪೊಸೆಸಿವ್ ಆಗಿಬಿಟ್ಟಿದ್ದಾರಂತೆ. ಹೀಗಾಗಿ ಆಕೆಯನ್ನು ಬಿಟ್ಟೇ ಇರುತ್ತಿಲ್ವಂತೆ. ಆ ನಟಿ ಹೋದಲೆಲ್ಲ ನಾನು ಜೊತೆಗೆ ಬರುತ್ತೇನೆ ಅಂತ ಹಠ ಬಿದ್ದು ಹಿಂದಿಂದೆ ಹೋಗುತ್ತಿದ್ದಾರಂತೆ. ಸೀರಿಯಸ್ ಆಗಿ ನಡೆಯುತ್ತಿರುವ ಈ ಲವ್ ಸ್ಟೋರಿಯಲ್ಲಿ ನಾಯಕ ಕೆಲವೊಮ್ಮೆ ವಿರಾಟ ಸ್ವರೂಪ ತಾಳುವುದು ಆ ಸಖಿಗೂ ಇರಿಸು ಮುರಿಸು ಆಗುತ್ತಿದೆ ಅಂತ ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

Buzz is that Kannada Young Hero Controlling His Love Interest Actress Full Details Inside

ಇತ್ತೀಚೆಗೆ ಒಂದೊಳ್ಳೆ ಪ್ರೊಡಕ್ಷನ್ ಕಂಪನಿ ನಿರ್ಮಿಸಿದ ಸಿನಿಮಾದಲ್ಲಿ ನಟಿಸಿದರೂ ಹೀರೋಗೆ ಯಶಸ್ಸು ಸಿಕ್ಕಿಲ್ಲ. ಹಾಗಂತ ಸ್ಯಾಂಡಲ್‌ವುಡ್‌ನಲ್ಲಿ ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದೇ ಸಿನಿಮಾ ಮಂದಿಯ ಅಭಿಪ್ರಾಯ. ಹೀಗಿರುವಾಗ ಸಿನಿಮಾ ಕಡೆಗೆ ಗಮನ ಹರಿಸೋದು ಬಿಟ್ಟು ತನ್ನ ಸಖಿಯ ಹಿಂದೇನೆ ಒಡಾಡಿಕೊಂಡು ಸಮಯ ವ್ಯರ್ಥ ಮಾಡುತ್ತಿದ್ದಾರೆಂಬ ಮಾತು ಕೂಡ ಕೇಳಿಬರುತ್ತಿದೆ.

ಇನ್ನೊಂದು ಕಡೆ ಕನ್ನಡದ ಆ ಯುವ ನಟಿ ಪರಭಾಷೆಯ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ನಾಯಕಿ ಕರಿಯರ್ ಈಗ ಶುರುವಾಗಿದೆ. ಇಬ್ಬರೂ ತಮ್ಮ ವೃತ್ತಿ ಬದುಕಿನ ಟರ್ನಿಂಗ್ ಪಾಯಿಂಟ್‌ನಲ್ಲಿ ಬಂದು ನಿಂತಿದ್ದಾರೆ. ಇಂತಹ ಸಮಯದಲ್ಲಿ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ. ಅದರಲ್ಲೂ ನಟಿಗೆ ಉಸಿರು ಗಟ್ಟಿಸುವಂತಹ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಅಂತ ಚರ್ಚೆ. ಇದು ಸಖಾ-ಸಖಿಯ ಕಿವಿಗೆ ಬಿದ್ದಿದೆಯೋ ಇಲ್ವೋ ಗೊತ್ತಿಲ್ಲ. ಅಂದ್ಹಾಗೆ ಆ ಜೋಡಿಯ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ. ಇದು ಪೊಸೆಸಿವ್ ನಟನೊಬ್ಬನ ಪ್ರೇಮ್ ಕಹಾನಿ ಅಷ್ಟೇ.

More from Filmibeat

English summary
Kannada film young hero is making noise for allegedly controlling his love interest, who is also an actress. Here are the complete details about their relationship.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X