ಡಿಸೆಂಬರ್ ಬಾಕ್ಸಾಫೀಸ್‌ನಲ್ಲಿ 'ಮ್ಯಾಕ್ಸ್' - 'ಯುಐ' ಕಾದಾಟ? ಏನಿದು ಹೊಸ ಸುದ್ದಿ?
ಸ್ಯಾಂಡಲ್‌ವುಡ್‌ನ ಎರಡು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿವೆ. ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ರಿಲೀಸ್ ಡೇಟ್ ಮಾಡಿದೆ. ಹಾಗೇ ಕಳೆದ ಕೆಲವು ದಿನಗಳಿಂದ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಕೂಡ ಡಿಸೆಂಬರ್ ತಿಂಗಳಲ್ಲಿಯೇ ರಿಲೀಸ್ ಆಗುತ್ತೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಯಾವ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋದೇ ಇಂಟ್ರೆಸ್ಟಿಂಗ್.
ಉಪೇಂದ್ರ ಬಹಳ ದಿನಗಳ ಬಳಿಕ ಆಕ್ಷನ್ ಕಟ್ ಹೇಳಿದ 'ಯುಐ' ಇದೇ ಡಿಸೆಂಬರ್ 20ರಂದು ರಿಲೀಸ್ ಎಂದು ಡೇಟ್ ಅನೌನ್ಸ್ ಮಾಡಿದೆ. ಅದಕ್ಕೆ ಬೇಕಿರುವ ಸಿದ್ದತೆಗಳು ಕೂಡ ಆರಂಭ ಆಗಿದೆ. ವ್ಯಾಪಾರದ ಮಾತುಕಥೆಗಳು ಕೂಡ ಮುಗಿದಿವೆ. ಈ ವೇಳೆ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸುದ್ದಿಯೊಂದು ಓಡಾಡುವುದಕ್ಕೆ ಶುರು ಮಾಡಿದ್ದು, ಅದು ಸಿನಿಮಾ ಮಂದಿಗೆ ತಲೆ ಬಿಸಿ ಮಾಡಿದೆ.

ಸ್ಯಾಂಡಲ್‌ವುಡ್‌ನ ಗಲ್ಲಿಯಲ್ಲೊಂದು ಸುದ್ದಿ ಸೈಲೆಂಟ್ ಆಗಿ ಹರಿದಾಡುವುದಕ್ಕೆ ಶುರು ಮಾಡಿದೆ. ಕಿಚ್ಚ ಸುದೀಪ್ ಅಭಿಮಾನಿಗಳು ಹಲವು ದಿನಗಳಿಂದ ಸಿನಿಮಾ ಬಗ್ಗೆ ಅಪ್‌ಡೇಟ್ ಕೊಡುವಂತೆ ಒತ್ತಾಯ ಮಾಡಿದ್ದರು. ಇನ್ನೆರಡು ದಿನಗಳಲ್ಲಿ ಕಿಚ್ಚ ಕೂಡ 'ಮ್ಯಾಕ್ಸ್' ಬಗ್ಗೆ ಬಿಗ್ ಅಪ್‌ಡೇಟ್ ಕೊಡಲಿದ್ದಾರೆ. ಅದು ರಿಲೀಸ್ ಡೇಟ್ ಆಗಿರುತ್ತೆ ಅನ್ನೋದು ಸಿನಿಮಾ ಮಂದಿಯ ನಂಬಿಕೆ. ಹಾಗಿದ್ದರೆ 'ಮ್ಯಾಕ್' ರಿಲೀಸ್ ಡೇಟ್ ಅನೌನ್ಸ್ ಮಾಡುವುದಕ್ಕೂ, ಉಪ್ಪಿ 'ಯುಐ' ರಿಲೀಸ್‌ಗೂ ಏನು ಸಂಬಂಧ? ಇದಕ್ಕೆ ಸಿನಿಮಾ ಮಂದಿ ಯಾಕೆ ಟೆನ್ಷನ್ ಆಗಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಸಿನಿಮಾ ಅಂದ್ಮೇಲೆ ದಿನಕ್ಕೆ ಸಾವಿರ ಸುದ್ದಿಗಳು ಓಡಾಡುತ್ತಲೇ ಇರುತ್ತವೆ. ಹಾಗೇ ಕನ್ನಡದ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆನೂ ಹರಿದಾಡುತ್ತಿರುವ ಸುದ್ದಿಯೊಂದು ಸಂಚಲ ಸೃಷ್ಟಿಸಿದೆ. ಅದೇನಪ್ಪಾ ಅಂದರೆ,ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಕೂಡ ಡಿಸೆಂಬರ್‌ನಲ್ಲಿಯೇ ರಿಲೀಸ್ ಆಗಲಿದೆ ಎಂಬ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿದೆ.

'ವಿಕ್ರಾಂತ್ ರೋಣ' ಬಳಿಕ ಕಿಚ್ಚ ಸುದೀಪ್ ಒಂದೂ ಸಿನಿಮಾ ರಿಲೀಸ್ ಆಗಿಲ್ಲ. ಈ ಕಾರಣಕ್ಕೆ ಸುದೀಪ್ ಮೇಲೆ ಅಭಿಮಾನಿಗಳ ಒತ್ತಡ ಹೆಚ್ಚಿದೆ. ಆದಷ್ಟು ಬೇಗ ಅವರು ತಮ್ಮ ಸಿನಿಮಾವನ್ನು ರಿಲೀಸ್ ಮಾಡಲೇಬೇಕಿದೆ. ಈ ಕಾರಣಕ್ಕೆ 'ಮ್ಯಾಕ್ಸ್' ಸಿನಿಮಾವನ್ನು ಡಿಸೆಂಬರ್ 25ರ ಸುತ್ತಮುತ್ತ ರಿಲೀಸ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಆದರೆ, ಉಪೇಂದ್ರ ನಿರ್ದೇಶಿಸಿದ ಸಿನಿಮಾ 'ಯುಐ' ಡಿಸೆಂಬರ್ 20ಕ್ಕೆ ರಿಲೀಸ್ ಆಗಲಿದೆ. ಹೆಚ್ಚು ಕಡಿಮೆ ಒಂದು ವಾರದ ಅಂತರದಲ್ಲಿ 'ಮ್ಯಾಕ್ಸ್' ರಿಲೀಸ್ ಮಾಡುವ ನಿರ್ಧಾರಕ್ಕೆ ಕಿಚ್ಚ ಬಂದಿದ್ದಾರೆ ಎನ್ನುವ ಗುಲ್ಲೆದ್ದಿದೆ.
ಸಾಮಾನ್ಯವಾಗಿ ಬಿಗ್ ಸ್ಟಾರ್ ಸಿನಿಮಾಗಳು ಒಂದೇ ದಿನ ರಿಲೀಸ್ ಆದ ಉದಾಹರಣೆಗಳು ಇವೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಎರಡು ಗ್ಯಾಪ್ ಕೊಡಬೇಕು ಅನ್ನೋ ನಿಯಮವನ್ನು ಅವರೇ ಮಾಡಿಕೊಂಡಿದ್ದಾರೆ. ಹೀಗಾಗಿ ಒಂದು ವಾರದ ಅಂತರದಲ್ಲಿ ಉಪೇಂದ್ರ ನಿರ್ದೇಶಿಸಿ, ನಟಿಸಿರುವ 'ಯುಐ' ಡಿಸೆಂಬರ್ 20ಕ್ಕೂ, ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್' ಡಿಸೆಂಬರ್ 25ಕ್ಕೂ ರಿಲೀಸ್ ಆಗುತ್ತಾ? ಇದು ಡೌಟೇ ಆಗಿದ್ದರೂ, ಸ್ಯಾಂಡಲ್‌ವುಡ್‌ನಲ್ಲಿ ಮಾತ್ರ ಬಲವಾಗಿ ಚರ್ಚೆಯಾಗುತ್ತಿದೆ.
ಎರಡೂ ಸಿನಿಮಾಗಳು ಕ್ರಿಸ್‌ಮಸ್, ಹೊಸ ವರ್ಷ ಹಾಗೂ ಸಂಕ್ರಾಂತಿಯನ್ನು ಗಮನದಲ್ಲಿಟ್ಟುಕೊಂಡು ರಿಲೀಸ್ ಪ್ಲಾನ್ ಮಾಡಿವೆ. 'ಮ್ಯಾಕ್ಸ್' ರಿಲೀಸ್ ಡೇಟ್ ಅನೌನ್ಸ್ ಮಾಡುವುದಕ್ಕೂ ಮುನ್ನ 'ಯುಐ' ಟೀಮ್ ರಾಕ್‌ಲೈನ್ ವೆಂಕಟೇಶ್ ಮೊರೆ ಹೋಗಿದ್ದು, ಕಿಚ್ಚನಿಗೆ ತಮ್ಮ ಸಿನಿಮಾ ಮುಂದೂಡುವಂತೆ ಮನವಿ ಮಾಡಿಕೊಂಡಿವೆ ಅಂತ ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಇದ್ಯಾವುದಕ್ಕೂ ಪುರಾವೆಗಳಿಲ್ಲ. ಇದು ಕೇವಲ ಚಿತ್ರರಂಗದಲ್ಲಿ ಹರಿದಾಡುತ್ತಿರುವ ಸುದ್ದಿ. ಒಂದು ವೇಳೆ ಸುದೀಪ್ ನವೆಂಬರ್ 27ಕ್ಕೆ ರಿಲೀಸ್ ಅನೌನ್ಸ್ ಮಾಡಿದರೆ, ಎಲ್ಲದಕ್ಕೂ ಕ್ಲಾರಿಟಿ ಸಿಗುತ್ತೆ. ಹಾಗೇ ಮ್ಯಾಕ್ಸ್ ಕ್ರಿಸ್‌ಮಸ್‌ಗೆ ರಿಲೀಸ್ ಅಂತ ಆದರೆ, ಅಲ್ಲಿಗೆ ಡಿಸೆಂಬರ್‌ನಲ್ಲಿ ಬಾಕ್ಸಾಫೀಸ್ ಕಾದಾಟ ಶುರು ಅಂತಲೇ..


Click it and Unblock the Notifications











