Malaika Arora-Arjun Kapoor: ಬೇರೆ ಆದವೇ ಜೋಡಿ ಹಕ್ಕಿಗಳು.. 4 ವರ್ಷಗಳ ಪ್ರೀತಿ-ಪ್ರೇಮಕ್ಕೆ ಬಿತ್ತಾ ಬ್ರೇಕ್?
ಬಾಲಿವುಡ್ ನಟಿ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಲವ್ ಸ್ಟೋರಿ ಬಗ್ಗೆ ವಿಶೇಷವಾಗಿ ಏನೂ ಹೇಳಬೇಕಿಲ್ಲ. 2018ರಲ್ಲಿ ಮೊದಲ ಬಾರಿಗೆ ಇವರಿಬ್ಬರ ಬಗ್ಗೆ ಗಾಳಿ ಸುದ್ದಿ ಮೊದಲ ಬಾರಿಗೆ ಹರಿದಾಡಿತ್ತು. ಅದಾಗಲೇ ಮದುವೆ ಆಗಿದ್ದ ಮಲೈಕಾ ಅರೋರಾ ಗಪ್ ಚುಪ್ ಪ್ರೇಮದ ಬಗ್ಗೆ ಬಾಲಿವುಡ್‌ನಲ್ಲಿ ಜೋರಾಗಿಯೇ ಸುದ್ದಿಯಾಗಿತ್ತು.
ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ನಡುವೆ ಸುಮಾರು 12 ವರ್ಷಗಳ ನಡುವಿನ ಅಂತರವಿದೆ. ಆದರೂ, ಈ ಜೋಡಿಯ ಲವ್ ಸ್ಟೋರಿ ಪುಕಾರು ಹಬ್ಬುವುದಕ್ಕೆ ಶುರುವಾಗಿತ್ತು. 2019ರಲ್ಲಿ ಈ ಜೋಡಿ ಅಧಿಕೃತವಾಗಿ ಒಟ್ಟಿಗೆ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿತ್ತು.

ಇಲ್ಲಿಂದ ಮಲೈಕಾ ಅರೋರಾ-ಅರ್ಜುನ್ ಕಪೂರ್ ಸಂಬಂಧದ ಬಗ್ಗೆ ಒಂದಿಲ್ಲ ಒಂದು ಸುದ್ದಿ ಓಡಾಡುತ್ತಲೇ ಇರುತ್ತೆ. ಈಗ ಬಾಲಿವುಡ್ ಅಂಗಳದಲ್ಲಿ ಮತ್ತೊಮ್ಮೆ ಇವರಿಬ್ಬರ ಬ್ರೇಕಪ್ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜವೇ? ಬಾಲಿವುಡ್‌ನಲ್ಲಿ ಏನಾಗ್ತಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ನಾಲ್ಕು ವರ್ಷದಿಂದ ಡೇಟಿಂಗ್
ಬಾಲಿವುಡ್‌ನ ಬ್ಯೂಟಿ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ 2019ರಲ್ಲಿ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ಘೋಷಿಸಿದ್ದರು. ಅರ್ಜುನ್ ಕಪೂರ್ ಬರ್ತ್‌ಡೇಯಂದೇ ಗಾಳಿ ಸುದ್ದಿ ನಿಜವಾಗಿತ್ತು. ಅಲ್ಲಿಂದ ಈ ಜೋಡಿ ಒಬ್ಬರಿಗೊಬ್ಬರು ಬೆಂಬಲವಾಗಿಯೇ ನಿಂತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜೊತೆಯಾಗಿರುವ ಫೋಟೊಗಳನ್ನು ತಮ್ಮ ಅಭಿಮಾನಿಗಳಿಗಾಗಿ ಶೇರ್ ಮಾಡುತ್ತಲೇ ಇರುತ್ತಾರೆ. ಇದೇ ವೇಳೆ ಅಭಿಮಾನಿಗಳೂ ಕೂಡ ಮದುವೆ ಡೇಟ್ ಅನೌನ್ಸ್ ಮಾಡಬಹುದು ಎಂದು ಕಾಯುತ್ತಲೇ ಇರುತ್ತಾರೆ. ಈ ಹೀಗಿರುವಾಗಲೇ ಮಧ್ಯದಲ್ಲಿ ಬ್ರೇಕಪ್ ಸುದ್ದಿನೂ ಓಡಾಡುತ್ತಿರುತ್ತೆ.

ಅರ್ಜುನ್-ಮಲೈಕಾ ಬ್ರೇಕಪ್ ಮಾಡಿಕೊಂಡ್ರಾ?
ಸದ್ಯ ಬಾಲಿವುಡ್‌ನಲ್ಲಿ ಆಗುತ್ತಿರುವ ಬಿಸಿಬಿಸಿ ಚರ್ಚೆಯಿದು. ಹಾಗಂತ ಇವರಿಬ್ಬರ ಬ್ರೇಕಪ್ ಸುದ್ದಿ ಬಂದಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಓಡಾಡಿತ್ತು. ಆಗ ಈ ಜೋಡಿ ಒಟ್ಟಿಗೆ ಫೋಟೊಗಳನ್ನು ಶೇರ್ ಮಾಡಿಕೊಂಡು ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದರು. ಈಗ ಮತ್ತೊಮ್ಮೆ ಈ ಜೋಡಿ "ನಾನೊಂದು ತೀರ.. ನೀನೊಂದು ತೀರ" ಅಂತಿವೆ ಅನ್ನೋ ಮಾತು ಹೇಳಿಬರುತ್ತಿದೆ. ಅಲ್ಲದೆ ಕಾರಣವೇನು ಅಂತನೂ ಕೆಲ ಮಾಧ್ಯಮಗಳು ವರದಿ ಮಾಡಿವೆ.
ಬ್ರೇಕಪ್ ಕಾರಣ ಕೊಡ್ತಿರೋದೇನು?
ಇತ್ತೀಚೆಗೆ ಅರ್ಜುನ್ ಕಪೂರ್ ಒಂಟಿಯಾಗಿ ಪ್ರವಾಸ ಮಾಡಿದ್ದರು. ಆ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಪೋಟೊ ಇಟ್ಟುಕೊಂಡೇ ನೆಟ್ಟಿಗರು ಡಿಕೋಡ್ ಮಾಡುವುದಕ್ಕೆ ಶುರು ಮಾಡಿದ್ದರು. ಇದೇ ವೇಳೆ ಮಲೈಕಾ ಅರೋರಾ ಕೂಡ ಎಪಿ ಧಿಲ್ಲೋನ್ ಪಾರ್ಟಿಗೆ ಒಂಟಿಯಾಗಿ ಬಂದಿದ್ದರು. ಈ ಎರಡು ಬೇರೆ ಬೇರೆ ಘಟನೆಗಳನ್ನು ಇಟ್ಟುಕೊಂಡು ಬ್ರೇಕಪ್ ಆಗಿರಬಹುದು ಎಂದು ಅಂದಾಜಿಸುತ್ತಿದ್ದಾರೆ.
ಬ್ರೇಕಪ್ ಆಗಿದ್ದು ನಿಜವೇ?
ಕೆಲವು ಮೂಲಗಳ ಪ್ರಕಾರ, ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಇಬ್ಬರೂ ಒಟ್ಟಿಗೆ ಇದ್ದಾರೆ. ಬ್ರೇಕಪ್ ವಿಚಾರ ಎಲ್ಲವೂ ಶುದ್ಧ ಶುಳ್ಳು. ಇಬ್ಬರೂ ಇಂತಹ ಗಾಳಿ ಸುದ್ದಿಗಳಿಗೆ ಗಮನ ಹರಿಸದೇ ಇರುವುದಕ್ಕೆ ನಿರ್ಧರಿಸಿದ್ದಾರೆ. ಮಲೈಕಾ ಹಾಗೂ ಅರ್ಜುನ್ ನಡುವೆ 12 ವರ್ಷಗಳ ಗ್ಯಾಪ್ ಇದೆ. ಹೀಗಾಗಿ ಈ ಜೋಡಿ ಹೆಚ್ಚು ದಿನ ಒಟ್ಟಿಗೆ ಇರಲ್ಲ ಅಂತ ನೆಟ್ಟಿಗರು ಆಗಾಗ ಕಮೆಂಟ್ ಮಾಡುತ್ತಲೇ ಇರುತ್ತಾರೆ.


Click it and Unblock the Notifications











