Naga Chaitanya: ವಿಚ್ಛೇದನ ನೀಡಿದ 2 ವರ್ಷಗಳ ಬಳಿಕ 2ನೇ ಮದುವೆಗೆ ನಾಗಚೈತನ್ಯ ರೆಡಿ? ಸಮಂತಾ ಫ್ಯಾನ್ಸ್‌ಗೆ ನಿರಾಸೆ!
ನಾಗ ಚೈತನ್ಯ ಹಾಗೂ ಸಮಂತಾ ದಕ್ಷಿಣ ಭಾರತದ ಕ್ಯೂಟ್ ಜೋಡಿಗಳಲ್ಲೊಂದಾಗಿತ್ತು. ಆದರೆ, ಮದುವೆಯಾದ ನಾಲ್ಕು ವರ್ಷಗಳಲ್ಲಿಯೇ ಇಬ್ಬರೂ ಬೇರೆಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದರು. ಇದು ನಾಗ ಚೈತನ್ಯ ಹಾಗೂ ಸಮಂತಾ ಫ್ಯಾನ್ಸ್‌ಗೆ ದೊಡ್ಡ ಶಾಕ್ ಕೊಟ್ಟಿತ್ತು.
ದಕ್ಷಿಣ ಭಾರತದ ಈ ತಾರಾ ಜೋಡಿ ವಿಚ್ಛೇದನಕ್ಕೆ ಮುಂದಾಗುತ್ತಿದ್ದಂತೆ ಫ್ಯಾನ್ಸ್ ಒಂದಾಗಿ ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದರು. ಆದರೆ, ಒಡೆದ ಮನಸ್ಸುಗಳು ಮತ್ತೆ ಒಂದಾಗುವುದು ಅಷ್ಟು ಸುಲಭ ಅಲ್ಲ ಅನ್ನೋದು ಅವರಿಗೂ ಗೊತ್ತಿತೆ. ಈಗ ನಾಗ ಚೈತನ್ಯ ಹಾಗೂ ಸಮಂತಾ ಇಬ್ಬರೂ ತಮ್ಮದೇ ಶೈಲಿಯಲ್ಲಿ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಇಬ್ಬರು ಬೇರೆಯಾಗಿ ಬಹುತೇಕ ಎರಡು ವರ್ಷಗಳಾಗಿವೆ. ಮತ್ತೆ ಒಂದಾಗುತ್ತಾರೆಂಬ ಆಶಾಭಾವನೆಯನ್ನು ಫ್ಯಾನ್ಸ್ ಇಟ್ಟುಕೊಂಡಿದ್ದರು. ಅವರೀಗ ನಿರಾಸೆಯಾಗುವಂತಹ ಸುದ್ದಿಯೊಂದು ಓಡಾಡುತ್ತಿದೆ. ನಾಗ ಚೈತನ್ಯ ಎರಡನೇ ಮದುವೆ ರೆಡಿಯಾಗುತ್ತಿದ್ದಾರೆಂದು ಟಾಲಿವುಡ್ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಅಸಲಿ ಎರಡನೇ ಮದುವೆ ಬಗ್ಗೆ ಏನಿದೆ ಸುದ್ದಿ?
ಶೋಭಿತಾ ಜೊತೆ ನಾಗಚೈತನ್ಯ ಡೇಟಿಂಗ್?
ನಾಗ ಚೈತನ್ಯ ಬದುಕಿನಿಂದ ಸಮಂತಾ ದೂರಾದ ಮೇಲೆ ಶೋಭಿತಾ ಧುಲಿಪಾಲ ಹೆಸರು ಕೇಳಿಬಂದಿತ್ತು. ನಾಗಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಸೀಕ್ರೆಟ್ ಡೇಟಿಂಗ್‌ನಲ್ಲಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಈ ಜೋಡಿ ವಿದೇಶದಲ್ಲಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೊಗಳು ಕೂಡ ಹರಿದಾಡಿದ್ದವು. ಆದರೆ, ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ನಿರಾಕರಿಸಿದ್ದರು. ಈ ಬೆನ್ನಲ್ಲೇ ನಾಗ ಚೈತನ್ಯ ಎರಡನೇ ಮದುವೆ ಬಗ್ಗೆ ಸುದ್ದಿಯಾಗುತ್ತಿದೆ.
ನಾಗಚೈತನ್ಯ ನಾಗಚೈತನ್ಯ 2ನೇ ಮದುವೆ ?
ನಾಗಚೈತನ್ಯ ಎರಡನೇ ಮದುವೆ ಬಗ್ಗೆ ಟಾಲಿವುಡ್‌ನಲ್ಲಿ ಸುದ್ದಿಯಂತೂ ಓಡಾಡುತ್ತಿದೆ. ನಾಗ ಚೈತನ್ಯ ತಂದೆ ನಾಗಾರ್ಜುನಾ ಮಗನಿಗೆ ಮತ್ತೆ ಮದುವೆ ಮಾಡುವುದಕ್ಕೆ ಓಡಾಡುತ್ತಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಈ ಬಗ್ಗೆ ನಾಗಾರ್ಜುನಾ ತುಂಬಾನೇ ಗಂಭೀರವಾಗಿ ಚಿಂತಿಸುತ್ತಿದ್ದಾರೆ ಅಂತ ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ನಾಗ ಚೈತನ್ಯ ಎರಡನೇ ಮದುವೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

2ನೇ ಮದುವೆ ಆಗುತ್ತಿರೋ ಹುಡುಗಿ ಯಾರು?
ನಾಗಚೈತನ್ಯ ಹೆಸರು ನಟಿ ಶೋಭಿತಾ ಧುಲಿಪಾಲ ಜೊತೆ ತಳುಕು ಹಾಕಿಕೊಂಡಿರುವುದೇನೋ ನಿಜ. ಆದರೆ, ಈಗಾಗಲೇ ಚರ್ಚೆಯಾಗುತ್ತಿರುವ ಪ್ರಕಾರ, ನಾಗಾರ್ಜುನ ತಮ್ಮ ಮಗನಿಗಾಗಿ ಬ್ಯುಸಿನೆಸ್ ಕುಟುಂಬದ ಜೊತೆ ಸಂಬಂಧ ಬೆಳೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಮಾತುಕತೆ ಕೂಡ ನಡೆಯುತ್ತಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಅಕ್ಕಿನೇನಿ ಕುಟುಂಬದಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ನಾಗಚೈತನ್ಯ ವಿರುದ್ಧ ಕಿಡಿಕಾರಿದ್ದ ಫ್ಯಾನ್ಸ್
ಶೋಭಿತಾ ಧೂಲಿಪಾಲ ಜೊತೆ ನಾಗಚೈತನ್ಯ ಹೆಸರು ತಳುಕು ಹಾಕಿಕೊಂಡಾಗ, ಸಮಂತಾ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ನಾಗಚೈತನ್ಯ ನಡೆಯ ವಿರುದ್ಧ ಸಮಂತಾ ಅಭಿಮಾನಿಗಳು ಕಿಡಿಕಾರಿದ್ದರು. ಸಮಂತಾ ಆ ವೇಳೆ ಮಯೋಸೈಟಿಸ್ ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದರು. ಇದು ಅವರ ಅಭಿಮಾನಿಗಳನ್ನು ಬೇಸರಕ್ಕೂ ಕಾರಣವಾಗಿತ್ತು.


Click it and Unblock the Notifications











