Samantha: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಮಂತಾ? ಮೊದಲ ಮಗುವಿಗೆ ಜನ್ಮ ನೀಡೋದ್ಯಾವಾಗ?
ಸಮಂತಾ ರುಥ್ ಪ್ರಭು ಬಹಳ ದಿನಗಳ ಬಳಿಕ ನಟಿಸಿರುವ ಸಿನಿಮಾ 'ಮಾ ಇಂಟಿ ಬಂಗಾರಂ' ರಿಲೀಸ್ ಆಗಿದೆ. ಮೊದಲ ದಿನವೇ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ವಿಶ್ವದಾದ್ಯಂತ ಕಳೆದ ಮೂರು ದಿನಗಳಲ್ಲಿ ಸುಮಾರು 41 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ ಎಂದು ವರದಿಯಾಗಿದೆ. ಗ್ರ್ಯಾಂಡ್ ಕಮ್‌ಬ್ಯಾಕ್ ಮಾಡಿರುವ ಸಮಂತಾಗೆ ಅವರ ಫ್ಯಾನ್ಸ್ ಅದ್ಧೂರಿ ಸ್ವಾಗತ ಕೋರಿದ್ದರು.
ಇತ್ತ ಸಮಂತಾ ಕೂಡ ಸಿನಿಮಾ ಅಷ್ಟೇ ಅಲ್ಲದೆ ವೈಯಕ್ತಿಕ ವಿಷಯದಲ್ಲೂ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಸಮಂತಾ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದ್ದವು. 'ಮಾ ಇಂಟಿ ಬಂಗಾರಂ' ಸಿನಿಮಾದ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ಸಮಂತಾ ವಿಡಿಯೋ ಹಾಗೂ ಫೋಟೋಗಳು ಚರ್ಚೆಗೆ ಒಳಗಾಗಿವೆ. ಈ ಫೋಟೊಗಳನ್ನು ನೋಡಿ ಸಮಂತಾ ಗರ್ಭಿಣಿಯಾಗಿದ್ದಾರೆಂಬ ಸುದ್ದಿ ಹಬ್ಬಿದೆ.

ಇನ್ನು ಸಮಂತಾ ಹಾಗೂ ಪತಿ ರಾಜ್ ನಿಡಿಮೋರು ಆಗಲಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿರುವ ಸುದ್ದಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಹೀಗಿದ್ದರೂ,ಈ ಫೋಟೊಗಳು ವೈರಲ್ ಆಗುತ್ತಿದ್ದಂತೆ ಸಮಂತಾ ಮೊದಲ ಮಗುವಿಗೆ ಜನ್ಮ ನೀಡಲಿರುವ ಡೇಟ್ ಬಗ್ಗೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಆ ಡೇಟ್ ಯಾವುದು? ನಿಜಕ್ಕೂ ಸಮಂತಾ ಗರ್ಭಿಣಿಯಾಗಿದ್ದಾರಾ? ಸುದ್ದಿ ಹೀಗೆಲ್ಲ ಹರಿದಾಡುತ್ತಿದೆ.
ಸಮಂತಾ ಗರ್ಭಿಣಿನಾ?
ನಟಿ ಸಮಂತಾ ವಿಚ್ಚೇದನದ ಬಳಿಕ ಸಾಕಷ್ಟು ನೋವುಗಳನ್ನು ಉಂಡಿದ್ದರು. ವಿಚ್ಛೇದನದ ನೋವಿನಲ್ಲಿದ್ದ ಅವರಿಗೆ ಅನಾರೋಗ್ಯ ಇನ್ನಷ್ಟು ಕಾಡಿತ್ತು. ಈ ಎಲ್ಲಾ ಸಂಕಷ್ಟಗಳಿಂದ ಹೊರ ಬಂದು ಕೊನೆಗೂ ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ. ನಿರ್ದೇಶಕ ರಾಜ್ ನಿಡಿಮೋರು ಅವರನ್ನು ವಿವಾಹವಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. 'ಮಾ ಇಂಡಿ ಬಂಗಾರಂ' ಸಿನಿಮಾ ಯಶಸ್ಸಿನ ಸಂಭ್ರಮದ ವೇಳೆ ಸಮಂತಾ ಗರ್ಭಿಯಾಗಿದ್ದಾರೆ ಅನ್ನೋ ಅನುಮಾನ ಮಾಡಿತ್ತು. ಈ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಸಮಂತಾ ಮೂರು ತಿಂಗಳ ಗರ್ಭಿಣಿಯಾಗಿದ್ದಾರೆಂದು ಪಿಂಕ್‌ವಿಲ್ಲಾ ವರದಿ ಮಾಡಿದೆ. ಆದರೆ, ಈ ದಂಪತಿ ಇನ್ನೂ ಅಧಿಕೃತವಾಗಿ ಹೇಳಿಲ್ಲ.
ಮೊದಲ ಮಗುವಿನ ಜನನ ಯಾವಾಗ?
ನಟಿ ಸಮಂತಾ ರುಥ್ ಪ್ರಭು ವೈಯಕ್ತಿಕ ವಿಚಾರಗಳನ್ನು ಪಬ್ಲಿಕ್‌ನಲ್ಲಿ ಚರ್ಚೆ ಮಾಡುವುದಿಲ್ಲ. ಆದರೂ, ಗರ್ಭಿಣಿ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ ಕೆಲ ಮಾಧ್ಯಮಗಳು ಡಿಲೆವರಿ ಡೇಟ್ ಅನ್ನೂ ವರದಿ ಮಾಡಿದೆ. ಬಾಲಿವುಡ್ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಸಮಂತಾ ಹಾಗೂ ರಾಜ್ ನಿಡಿಮೋರು ಡಿಸೆಂಬರ್ ತಿಂಗಳಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂದು ವರದಿ ಆಗಿವೆ.

ಅಧಿಕೃತವಾಗಿ ಒಪ್ಪಿಕೊಂಡಿಲ್ಲ
ಕಳೆದೆರಡು ಮೂರು ದಿನಗಳಿಂದ ಸಮಂತಾ ಹಾಗೂ ರಾಜ್ ನಿಡಿಮೋರು ತಂದೆ-ತಾಯಿಯಾಗುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಮಾಧ್ಯಮಗಳಲ್ಲಿ ಈ ಜೋಡಿ ಬಗ್ಗೆನೇ ಸುದ್ದಿ. ಆದರೆ, ಇದೂವರೆಗೂ ಸಮಂತಾ ಆಗಲಿ, ರಾಜ್ ಆಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಹಾಗಂತ ಈ ವಿಷಯವನ್ನು ತಳ್ಳಿ ಕೂಡ ಹಾಕಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಈ ಸುದ್ದಿ ನಿಜನೋ? ಸುಳ್ಳೋ ಎಂಬ ಗೊಂದಲಕ್ಕೆ ಬಿದ್ದಿದ್ದಾರೆ. ಆದರೆ, 'ಮಾ ಇಂಟಿ ಬಂಗಾರಂ' ಸಿನಿಮಾದ ನಿರ್ದೇಶಕಿ ನಂದಿನಿ ರೆಡ್ಡಿ ಈ ಸುದ್ದಿಯನ್ನು ಖಚಿತ ಪಡಿಸಿದ್ದಾಗಿಯೂ ವರದಿಯಾಗಿದೆ.
ಸಮಂತಾ ಮುಂದಿನ ಪ್ರಾಜೆಕ್ಟ್‌ಗಳು
ಸಮಂತಾ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಮಾ ಇಂಟಿ ಬಂಗಾರಂ' ಸಿನಿಮಾ ರಿಲೀಸ್ ಆಗಿದೆ. ಇದರಲ್ಲಿ ದೂದ್ ಪೇಡಾ ದಿಗಂತ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಯಶಸ್ಸು ಹಾದಿಯಲ್ಲಿ ಸಾಗುತ್ತಿದ್ದರಿಂದ ಸಮಂತಾ ಹೊಸ ಪ್ರಾಜೆಕ್ಟ್‌ಗೆ ಮುಂದಿನ ದಿನಗಳಲ್ಲಿ ಗ್ರೀನ್ ಸಿಗ್ನಲ್ ಕೊಡಬಹುದು. ಆದರೆ, ಸದ್ಯಕ್ಕೆ ಗರ್ಭಿಣಿಯಾಗಿರುವುದರಿಂದ ಆ ಕಡೆಗೆ ಹೆಚ್ಚು ಗಮನ ಹರಿಸಲಿದ್ದಾರೆಂದು ಹೇಳಲಾಗಿದೆ.


Click it and Unblock the Notifications
