ಶಾರುಖ್‌ಗೆ ಸ್ಟಾರ್ ಪಟ್ಟ ಕೊಟ್ಟ DDLJ ರಿಮೇಕ್‌ನಲ್ಲಿ ವಿಜಯ್ ದೇವರಕೊಂಡ: ಏನಂತಿಗೆ ಟಾಲಿವುಡ್?
ವಿಜಯ್ ದೇವರಕೊಂಡ ಭಾರತೀಯ ಚಿತ್ರರಂಗದ ಜನಪ್ರಿಯ ನಟ. 'ಲೈಗರ್' ಸಿನಿಮಾ ಹೀನಾಯವಾಗಿ ಸೋತಿದ್ದರೂ, ವಿಜಯ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಫೇಮಸ್ ಆಗಿದ್ದರು. ಪುರಿ ಜಗನ್ನಾಥ್ ನಿರ್ದೇಶಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗಿತ್ತು. ಈಗ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ ಅನ್ನೋ ಸುದ್ದಿ ಸದ್ದು ಮಾಡುತ್ತಿದೆ.
ಟಾಲಿವುಡ್ ರೌಡಿ ವಿಜಯ್ ದೇವರಕೊಂಡ ಫಿಮೇಲ್ ಫ್ಯಾನ್ ಫಾಲೋವಿಂಗ್ ಏನೂ ಕಮ್ಮಿಯಿಲ್ಲ. 'ಲೈಗರ್' ಸಿನಿಮಾ ಪ್ರಚಾರದ ವೇಳೆನೇ ಈ ಅದು ಸಾಬೀತಾಗಿದೆ. ಈ ಬೆನ್ನಲ್ಲೇ ಟಾಲಿವುಡ್‌ನಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ.
ಬಾಲಿವುಡ್‌ನ ಟಾಪ್ ಡೈರೆಕ್ಟರ್ ಆದಿತ್ಯ ಚೋಪ್ರಾ ಹೊಸ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಅದು ಅವರೇ ನಿರ್ದೇಶಿಸಿದ್ದ DDLJ ಸಿನಿಮಾದ ರಿಮೇಕ್. ಈ ಸಿನಿಮಾ ಬಗ್ಗೆನೇ ಟಾಲಿವುಡ್‌ನಲ್ಲೀಗ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಅಷ್ಟಕ್ಕೂ ಏನಿದು DDLJ ಮ್ಯಾಟರ್? ಈ ಸಿನಿಮಾ ಸೆಟ್ಟೇರೋದು ನಿಜವೇ? ಅದನ್ನು ತಿಳಿಯೋಕೆ ಮುಂದೆ ಓದಿ.

DDLJ ರಿಮೇಕ್‌ನಲ್ಲಿ ವಿಜಯ್ ದೇವರಕೊಂಡ?
ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡಬೇಕು ಅಂತ ವಿಜಯ್ ದೇವರಕೊಂಡ ಕನಸು ಕಂಡಿದ್ದರು. ಅದಕ್ಕಾಗಿಯೇ 'ಲೈಗರ್' ಸಿನಿಮಾ ಸೆಟ್ಟೇರಿತ್ತು. ಆದರೆ, ವಿಜಯ್ ನಸೀಬು ಸರಿಯಿರಲಿಲ್ಲ. ಪುರಿ ಜಗನ್ನಾಥ್ ನಿರ್ದೇಶಿಸಿದ ಈ ಸಿನಿಮಾ ಗೆಲ್ಲಲಿಲ್ಲ. ಈ ಸಿನಿಮಾ ವಿಜಯ್ ದೇವರಕೊಂಡ ವೃತ್ತಿ ಬದುಕಿನ ಅತಿ ದೊಡ್ಡ ದುರಂತ ಎಂದು ಸಾಬೀತಾಗಿದೆ. ನಿರಾಸೆಯಾದ ಬೆನ್ನಲ್ಲೇ ಹೊಸ ಸಿನಿಮಾ ಬಗ್ಗೆ ಸದ್ದಿರಲಿಲ್ಲ. ಆದ್ರೀಗ ವಿಜಯ್ ದೇವರಕೊಂಡ DDLJ ರಿಮೇಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ರಿಮೇಕ್ ಆಗುತ್ತಾ 'DDLJ'?
ಕೆಲವು ದಿನಗಳಿಂದ ಹಲವು ತೆಲುಗು ಮೀಡಿಯಾಗಳಲ್ಲಿ ಈ ಬಗ್ಗೆ ಸುದ್ದಿಯಾಗುತ್ತಿದೆ. ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ' ರಿಮೇಕ್ ಆಗುತ್ತಿದೆ. ನಿರ್ದೇಶಕ ಆದಿತ್ಯ ಚೋಪ್ರಾ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ. ಶಾರುಖ್ ಖಾನ್ ಪಾತ್ರದಲ್ಲಿ ನಟಿಸೋಕೆ ವಿಜಯ್ ದೇವರಕೊಂಡ ಆಯ್ಕೆಯಾಗಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿತ್ತು. ಆದರೆ, ಈ ಬಗ್ಗೆ ವಿಜಯ್ ದೇವರಕೊಂಡ ಆಗಲಿ, ಆದಿತ್ಯ ಚೋಪ್ರಾ ಆಗಲಿ ಅಧಿಕೃತವಾಗಿ ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಆದರೂ, ಟಾಲಿವುಡ್‌ನಲ್ಲಿ ಈ ಸುದ್ದಿ ವೈರಲ್ ಆಗುತ್ತಿದೆ.

ಈ ಸುದ್ದಿ ನಿಜನಾ? ಇಲ್ಲ ಸುಳ್ಳಾ?
ಧರ್ಮ ಪ್ರೊಡಕ್ಷನ್ ಬಳಿಕ ಯಶ್ ರಾಜ್ ಫಿಲ್ಮ್ಸ್ ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡೋಕೆ ತುದಿಗಾಲಲ್ಲಿ ನಿಂತಿದೆ ಎಂದು ವರದಿಯಾಗಿವೆ. ಆದರೆ. ಇದೆಲ್ಲಾ ಕೇವಲ ಗಾಳಿ ಸುದ್ದಿಯಷ್ಟೇ ಅಂತ ಬಾಲಿವುಡ್ ಮೂಲಗಳ ಹೇಳುತ್ತಿವೆ. ಆದಿತ್ಯಾ ಚೋಪ್ರಾ ತಮ್ಮದೇ ಎವರ್‌ಗ್ರೀನ್ ಸಿನಿಮಾ DDLJಯನ್ನು ರಿಮೇಕ್ ಮಾಡುವುದಿಲ್ಲ. ಅಂತಹ ಸಾಹಸಕ್ಕೆ ಯಾರೇ ಒತ್ತಾಯ ಮಾಡಿದರೂ ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ಇದೆಲ್ಲಾ ಬರೀ ಸುಳ್ಳು ಸುದ್ದಿ ಎಂದೂ ಹೇಳಲಾಗುತ್ತಿದೆ.

'ಖುಷಿ' ಸಿನಿಮಾ ಮೇಲೆ ಗಮನ
ಹೀನಾಯ ಸೋಲಿನ ಬಳಿಕ ವಿಜಯ್ ದೇವರಕೊಂಡ ಬ್ಲಾಕ್ ಬಸ್ಟರ್ ಸಿನಿಮಾ ಕೊಡುವ ಒತ್ತಡದಲ್ಲಿದ್ದಾರೆ. ಸದ್ಯ ಅವರ ಬಳಿ ಇರುವ ಸಿನಿಮಾ 'ಖುಷಿ'. ಸಮಂತಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಸದ್ಯ ಸಮಂತಾ ಆರೋಗ್ಯ ಸರಿಯಿಲ್ಲದ ಕಾರಣ, 'ಖುಷಿ' ಚಿತ್ರೀಕರಣ ನಿಂತಿದೆ. ಇದೇ ತಿಂಗಳ ಡಿಸೆಂಬರ್ 23ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಬಿಡುಗಡೆ ತಡವಾಗುವ ಸಾಧ್ಯತೆಯಿದೆ.


Click it and Unblock the Notifications











