ಕನ್ನಡದ ನಟಿ ರುಕ್ಮಿಣಿ ವಸಂತ್‌ಗೆ ಷರತ್ತು ಹಾಕಿದರೇ ಜೂ.ಎನ್‌ಟಿಆರ್? ಒಪ್ಪಿಕೊಳ್ಳಲಾಗದ ಆ ಷರತ್ತು ಏನದು?
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಬಳಿಕ ರಕ್ಮಿಣಿ ವಸಂತ್ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದಾರೆ. ಕನ್ನಡದಲ್ಲಿಇತ್ತೀಚೆಗೆ ರುಕ್ಮಿಣಿ ನಟಿಸಿದ ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆಯಾಗಿತ್ತು. 'ಬಘೀರ' ಹಾಗೂ 'ಭೈರತಿ ರಣಗಲ್' ಎರಡೂ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ಹಿಟ್ ಅಂತಾ ಸಾಬೀತಾಗಿದೆ. ಇದರ ಜೊತೆಗೆ ತಮಿಳು ಹಾಗೂ ತೆಲುಗು ಭಾಷೆಯ ಸಿನಿಮಾಗಳಲ್ಲೂ ರಕ್ಮಿಣಿ ನಟಿಸುತ್ತಿದ್ದಾರೆ.
ದಕ್ಷಿಣ ಭಾರತದ ಸೂಪರ್ ಸ್ಟಾರ್ ಸಿನಿಮಾಗಳಿಂದಲೂ ರುಕ್ಮಿಣಿ ವಸಂತ್‌ಗೆ ಆಫರ್ ಬರುತ್ತಿವೆ. ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಜೂ.ಎನ್‌ಟಿಆರ್ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಜೂ.ಎನ್‌ಟಿಆರ್ ಕನ್ನಡದ ನಟಿ ರುಕ್ಮಿಣಿ ವಸಂತ್‌ಗೆ ತಮ್ಮ ಸಿನಿಮಾದಲ್ಲಿ ನಟಿಸುವುದಕ್ಕೂ ಮುನ್ನ ಒಂದು ಕಂಡಿಷನ್ ಹಾಕಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಜೂ.ಎನ್‌ಟಿಆರ್‌ಗೆ ಆಕ್ಷನ್ ಕಟ್ ಹೇಳುತ್ತಿರುವ ಪ್ರಶಾಂತ್ ನೀಲ್ ತಮ್ಮ ಸಿನಿಮಾಗೆ 'ಡ್ರಾಗನ್' ಅಂತ ಹೆಸರಿಟ್ಟಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಕೂಡ ಆರಂಭ ಆಗುತ್ತಿದೆ. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ರುಕ್ಮಿಣಿ ವಸಂತ್‌ಗೆ ಜೂ.ಎನ್‌ಟಿಆರ್ ಷರತ್ತು ಒಂದನ್ನು ಹಾಕಿದ್ದಾರೆ. ಅದಕ್ಕೆ ರುಕ್ಮಿಣಿ ವಸಂತ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಆ ಷರತ್ತು ಏನು? ಈ ಸುದ್ದಿ ನಿಜವೇ?
ಹೌದು, ಕೆಲವು ದಿನಗಳ ಹಿಂದೆ ಜೂ.ಎನ್‌ಟಿಆರ್ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಪ್ರಶಾಂತ್ ನೀಲ್ ತಮ್ಮ ಮುಂದಿನ ಸಿನಿಮಾಗೆ ಕನ್ನಡದ ನಟಿಯನ್ನೇ ಆಯ್ಕೆ ಮಾಡಿಕೊಂಡಿರುವ ಬಗ್ಗೆ ತೆಲುಗು ಮಾಧ್ಯಮಗಳು ಸುದ್ದಿ ಮಾಡಿದ್ದವು. ಈಗ ಜೂ.ಎನ್‌ಟಿಆರ್ ಕನ್ನಡದ ನಟಿಗೆ ಷರತ್ತು ಹಾಕಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಹೌದು, ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಈ ಸಿನಿಮಾ ರಿಲೀಸ್ ಆಗುವವರೆಗೂ ರುಕ್ಮಿಣಿ ವಸಂತ್ ಬೇರೊಂದು ಸಿನಿಮಾದಲ್ಲಿ ನಟಿಸುವಂತಿಲ್ಲ. ಇಂತಹದ್ದೊಂದು ಷರತ್ತು ಸ್ವತ: ತೆಲುಗಿನ ಸೂಪರ್‌ಸ್ಟಾರ್ ಜೂ.ಎನ್‌ಟಿಆರ್ ಹಾಕಿದ್ದಾರೆಂಬ ಸುದ್ದಿ ಹಬ್ಬಿದೆ. ತೆಲುಗು ಹಾಗೂ ಕನ್ನಡದ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಈ ಸುದ್ದಿ ವೈರಲ್ ಆಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡ ಹಾಗೂ ರುಕ್ಮಿಣಿ ವಸಂತ್ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಅಂದ್ಹಾಗೆ, ಕೆಲವು ತಿಂಗಳ ಹಿಂದೇನೆ ರುಕ್ಮಿಣಿ ವಸಂತ್ ತಾನು ಜೂ.ಎನ್‌ಟಿಆರ್ ಸಿನಿಮಾದಲ್ಲಿ ನಟಿಸುತ್ತಿಲ್ಲ. ತನಗೆ ಅಂತಹ ಯಾವುದೇ ಆಫರ್ ಇದೂವರೆಗೂ ಬಂದಿಲ್ಲ ಎಂದು ಹೇಳಿದ್ದಾಗಿ ವರದಿಗಳಾಗಿದ್ದವು. ಹೀಗಾಗಿ ಜೂ.ಎನ್‌ಟಿಆರ್ ಸಿನಿಮಾ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೋ ಇಲ್ಲವೋ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಅಷ್ಟರಲ್ಲೇ ಜೂ.ಎನ್‌ಟಿಆರ್ ಷರತ್ತು ಹಾಕಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.
'ಭೈರತಿ ರಣಗಲ್' ಬಳಿಕ ರುಕ್ಮಿಣಿ ವಸಂತ್ ಕನ್ನಡದ ಹೊಸ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಈಗಾಗಲೇ ತಮಿಳಿನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಿಜಯ್ ಸೇತುಪತಿ ನಟನೆಯ 'ಏಸ್' ಹಾಗೂ ಶಿವಕಾರ್ತಿಕೇಯ್ ನಟಿಸುತ್ತಿರುವ ಹೊಸ ಸಿನಿಮಾಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಗೇ ಜೂನಿಯರ್ ಎನ್‌ಟಿಆರ್ 31 ಹಾಗೂ 32ನೇ ಸಿನಿಮಾಗೂ ಇವರೇ ನಾಯಕಿ ಎಂದು ತೆಲುಗು ಮಾಧ್ಯಮಗಳು ಹೇಳುತ್ತಿವೆ. ಆದರೆ, ರುಕ್ಮಿಣಿ ವಸಂತ್ ಇನ್ನೂ ಕನ್ಫರ್ಮ್ ಮಾಡಿಲ್ಲ.


Click it and Unblock the Notifications











