'ಮ್ಯಾಕ್ಸ್' ನಿರ್ಮಾಪಕನ ಮುಂದಿನ ಸಿನಿಮಾ ಯಾವುದು? ಸಿನಿಮಾ ಮಂದಿ ಬಾಯಲ್ಲಿ ರಿಷಬ್ ಶೆಟ್ಟಿ ಹೆಸರೇಕೆ?

By ಫಿಲ್ಮಿಬೀಟ್ ಡೆಸ್ಕ್

ಸಿನಿಮಾರಂಗದಲ್ಲಿ ಸುದ್ದಿಗಳಿಗೇನು ಕಮ್ಮಿ ಹೇಳಿ.. ಒಂದು ಸಿನಿಮಾ ಹಿಟ್ ಆದರೆ ಸಾಕು ಒಂದಲ್ಲ ಸುದ್ದಿಗಳು ಗಾಳಿಯಂತೆ ಹುಟ್ಟಿಕೊಳ್ಳುತ್ತವೆ. ಯಾರದ್ದೋ ಯಾರೊಂದಿಗೋ ಸೇರಿ ಒಂದು ಸಿನಿಮಾ ಆಗೋವರೆಗೂ ಬಂದು ನಿಂತು ಬಿಡುತ್ತೆ. ಅವುಗಳಲ್ಲಿ ಕೆಲವು ನಿಜ ಆಗುತ್ತವೆ. ಮತ್ತೆ ಕೆಲವು ಸುಳ್ಳಾಗುತ್ತವೆ. ಇಂತಹ ಸಾಕಷ್ಟು ಸುದ್ದಿಗಳ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತವೆ.

ಸದ್ಯ ಗಾಂಧಿನಗರದಲ್ಲಿ ಇಂತಹದ್ದೇ ಒಂದು ಸುದ್ದಿ ಓಡಾಡುತ್ತಿದೆ. ಇತ್ತೀಚೆಗೆ ಕಿಚ್ಚ ಸುದೀಪ್ ಜೊತೆ ಸೇರಿಕೊಂಡು 'ಮ್ಯಾಕ್ಸ್' ಸಿನಿಮಾ ನಿರ್ಮಾಣ ಮಾಡಿದ್ದ ತಮಿಳು ನಿರ್ಮಾಪಕ ಕಲೈಪುಲಿ ಎಸ್ ತನು ಕಥೆಯಿದು. ತಮಿಳಿನಲ್ಲಿ ಸೂಪರ್‌ ಹಿಟ್ ಸಿನಿಮಾಗಳನ್ನು ನೀಡಿದ ನಿರ್ಮಾಪಕ ಇವರು. ರಜನಿಕಾಂತ್, ದಳಪತಿ ವಿಜಯ್ ಸೂಪರ್‌ಸ್ಟಾರ್‌ಗಳಿಗೆ ಸಿನಿಮಾ ಮಾಡಿ ಗೆದ್ದವರು. ಇತ್ತೀಚೆಗೆ 'ಮ್ಯಾಕ್ಸ್' ನಿರ್ಮಾಣ ಮಾಡಿ ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದಾರೆ.

Buzz Kichcha Sudeep Max film producer kalaipuli s thanu next movie with Rishab Shetty

ಕಿಚ್ಚ ಸುದೀಪ್ ಹಾಗೂ ಕಲೈಪುಲಿ ಎಸ್ ತನು ಜೋಡಿ ಗೆದ್ದಿದೆ. ಹೀಗಾಗಿ ಮತ್ತೆ ಕಿಚ್ಚ ಸುದೀಪ್ ಜೊತೆ ಸೇರಿ 'ಮ್ಯಾಕ್ಸ್' ಸೀಕ್ವೆಲ್ ಮಾಡಬಹುದೆಂಬ ನಿರೀಕ್ಷೆಯಿತ್ತು. ಆದ್ರೀಗ ಗಾಂಧಿನಗರ ಹೇಳುತ್ತಿರುವ ಸುದ್ದಿ ಬೇರೆನೇ ಇದೆ. ತಮಿಳಿನ ಈ ನಿರ್ಮಾಪಕ ಕಿಚ್ಚ ಸುದೀಪ್ ಜೊತೆ ಸಿನಿಮಾ ಮಾಡುತ್ತಿಲ್ಲ. ಇಬ್ಬರೂ ಕಮಿಟ್ಮೆಂಟ್‌ಗಳನ್ನು ಮುಗಿಸಿ ಬೇರೆ ಬೇರೆ ಪ್ರಾಜೆಕ್ಟ್‌ಗಳಿಗೆ ಕೈ ಹಾಕಿದ್ದಾರೆ. ಅದರಲ್ಲೂ ಕಲೈಪುಲಿ ತನು ಕನ್ನಡದಲ್ಲಿಯೇ ಇನ್ನೊಂದು ಸಿನಿಮಾ ಮಾಡುತ್ತಾರೆ ಅನ್ನೋದು ಸುದ್ದಿ.

'ಮ್ಯಾಕ್ಸ್' ಸಿನಿಮಾ 2024ರ ಕೊನೆಯಲ್ಲಿ ರಿಲೀಸ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಕ್ಕಿತ್ತು. ವಿಜಯ್ ಕಾರ್ತಿಕೇಯಾ ಮೊದಲ ಪ್ರಯತ್ನದಲ್ಲಿಯೇ ಗೆದ್ದಿದ್ದರು. ಕನ್ನಡಿಗರು ಕೂಡ ಥಿಯೇಟರ್‌ಗೆ ಮುಗಿಬಿದ್ದು ಸಿನಿಮಾ ನೋಡಿದ್ದರು. 2024ರ ಕೊನೆಯಲ್ಲಿ ತೆರೆಕಂಡ ಸಿನಿಮಾ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಲಿಸ್ಟ್ ಸೇರಿಕೊಂಡಿತ್ತು. ಹೀಗಾಗಿ ಕಿಚ್ಚ ಸುದೀಪ್ ಹಾಗೂ ಕಲೈಪುಲಿ ಎಸ್ ತನು ಕಾಂಬಿನೇಷನ್ ವರ್ಕ್ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿಲ್ಲ ಅಂತ ಗಾಂಧಿನಗರ ಹೇಳುತ್ತಿದೆ.

ಕಲೈಪುಲಿ ಎಸ್ ತನು ಕನ್ನಡದಲ್ಲಿಯೇ ಇನ್ನೊಂದು ಸಿನಿಮಾ ಮಾಡುವುದು ಗ್ಯಾರಂಟಿ ಎನ್ನಲಾಗಿದೆ. ಸದ್ಯಕ್ಕೆ ಇನ್ನೂ ಹೊಸ ಪ್ರಾಜೆಕ್ಟ್ ಮಾತುಕಥೆಯ ಹಂತದಲ್ಲಿ ಇದ್ದು, ರಿಷಬ್ ಶೆಟ್ಟಿಗೆ ಸಿನಿಮಾ ಮಾಡುವ ಉತ್ಸಾಹದಲ್ಲಿ ಇದ್ದಾರೆ ಅಂತ ಗಾಂಧಿನಗರ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಇಬ್ಬರೂ ಚರ್ಚೆ ಮಾಡಿರುವುದಕ್ಕೂ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ, ಕಲೈಪುಲಿ ಎಸ್ ತನು ಹಾಗೂ ರಿಷಬ್ ಶೆಟ್ಟಿ ಇಬ್ಬರೂ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಸುಳಿವನ್ನು ಬಿಟ್ಟುಕೊಟ್ಟಿಲ್ಲ.

Buzz Kichcha Sudeep Max film producer kalaipuli s thanu next movie with Rishab Shetty

ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1'ರಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ಅಕ್ಟೋಬರ್ 2 ರಂದು ದೇಶಾದ್ಯಂತ ರಿಲೀಸ್ ಮಾಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಇದರ ಜೊತೆ ಇನ್ನೂ ಎರಡು ಪ್ರಾಜೆಕ್ಟ್‌ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ಕಲೈಪುಲಿ ಎಸ್ ತನುಗೆ ರಿಷಬ್ ಶೆಟ್ಟಿ ಡೇಟ್ಸ್ ಸಿಗುತ್ತಾ ಸಿಕ್ಕರೂ ಎಷ್ಟನೇ ಸಿನಿಮಾಗುತ್ತೆ ಅನ್ನೋ ಬಗ್ಗೆ ಇನ್ನೋದು ಲೆಕ್ಕಕ್ಕೆ ಸಿಗದ ಲೆಕ್ಕಾಚಾರ.

ಇನ್ನೊಂದು ಕಡೆ ಕಿಚ್ಚ ಸುದೀಪ್ 'ಮ್ಯಾಕ್ಸ್' ಪ್ರೀಕ್ವೆಲ್ ಮಾಡುವ ಬಗ್ಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. 'ಮ್ಯಾಕ್ಸ್' ಪ್ರೀಕ್ವೆಲ್ ಅಥವಾ ಸೀಕ್ವೆಲ್ ಮಾಡುವ ಹಕ್ಕುಗಳು ಕಿಚ್ಚನ ಬಳಿನೇ ಇದೆ ಎನ್ನಲಾಗಿದೆ. ಹೀಗಾಗಿ ವಿಜಯ್ ಕಾರ್ತಿಕೇಯ ಅವರಿಗೇ ಪ್ರೀಕ್ವೆಲ್‌ಗೆ ಕಥೆ ರೆಡಿ ಮಾಡುವಂತೆ ಹೇಳಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಈ ಎರಡೂ ಸುದ್ದಿಗಳ ಬಗ್ಗೆನೂ ಅಧಿಕೃತ ಮಾಹಿತಿ ಇಲ್ಲ. ಇದು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿಯಷ್ಟೇ.

More from Filmibeat

English summary
Buzz: Kichcha Sudeep Max film producer Kalaipuli S Thanu next movie with Rishab Shetty;
Read more about: rishab shetty sudeep sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X