ಸುಂದರ್ ರಾಜ್, ಪ್ರಮೀಳಾ ಬಳಿಕ ರಜನಿಕಾಂತ್ ಜೊತೆ ತೆರೆಹಂಚಿಕೊಂಡ ಮೇಘನಾ ರಾಜ್!

ಪತಿ ಚಿರಂಜೀವಿ ಸರ್ಜಾ ಅಗಲಿಕೆ ಬಳಿಕ ನಟಿ ಮೇಘನಾ ರಾಜ್ ಮಗ ರಾಯನ್ ಆರೈಕೆಯಲ್ಲಿ ಒಂದಷ್ಟು ಸಮಯ ಕಳೆದಿದ್ದರು. ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದಾರೆ. 'ತತ್ಸಮ ತದ್ಭವ' ಚಿತ್ರದಲ್ಲಿ ನಟಿಸಿ ಮೋಡಿ ಮಾಡಿದ್ದರು. ಇದೀಗ ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳುತ್ತಾರೆ ಎನ್ನಲಾಗ್ತಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸುವುದು ಎಂಥಹವರಿಗೂ ಹೆಮ್ಮೆಯ ವಿಷಯ. ತಲೈವಾ ಜೊತೆ ಒಂದು ಫೋಟೊ ಕ್ಲಿಕ್ಕಿಸಿಕೊಂಡರೆ ಸಾಕು ಎಂದು ಕಾಯುವವರು ಇದ್ದಾರೆ. ಹಾಗಿರುವಾಗ ಅವರೊಟ್ಟಿಗೆ ನಟಿಸುವ ಅವಕಾಶ ಸಿಕ್ಕರೆ ಬಿಡುವುದುಂಟೆ. 'ಕೂಲಿ' ಬಳಿಕ 'ಜೈಲರ್- 2' ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ.

Buzz Meghana Raj to Join Super star Rajinikanth in Jailer 2

ಎರಡು ವರ್ಷಗಳ ಹಿಂದೆ ಬಂದಿದ್ದ ಸೂಪರ್ ಹಿಟ್ ಸಿನಿಮಾ ಸೀಕ್ವೆಲ್ ಇದು. ನೆಲ್ಸನ್ ಜೊತೆ ಮತ್ತೊಮ್ಮೆ ರಜನಿಕಾಂತ್ ಕೈಜೋಡಿಸಿದ್ದಾರೆ. ನರಸಿಂಹ ಆಗಿ ಶಿವಣ್ಣ ಮತ್ತೊಮ್ಮೆ ಜೈಲರ್‌ ಮುತ್ತುಪಾಂಡಿಯನ್‌ಗೆ ಸಾಥ್ ಕೊಟ್ಟಿದ್ದಾರೆ. ಇದೀಗ ಮೇಘನಾ ರಾಜ್ ಕೂಡ ತಂಡ ಸೇರಿದ್ದಾರೆ ಎನ್ನಲಾಗ್ತಿದೆ. ಆಕೆಯ ತಮಿಳು ಚಿತ್ರರಂಗ ಹೊಸದೇನು ಅಲ್ಲ. ಈಗಾಗಲೇ ಎರಡ್ಮೂರು ತಮಿಳು ಚಿತ್ರದಲ್ಲಿ ನಟಿಸಿ ಗೆದ್ದಿದ್ದಾರೆ.

'ಕಾದಲ್ ಸೊಲ್ಲ ವಂಧೇನ್' ಸಿನಿಮಾ ಮೂಲಕ 15 ವರ್ಷಗಳ ಹಿಂದೆ ಮೇಘನಾ ಕಾಲಿವುಡ್ ಪ್ರವೇಶಿಸಿದ್ದರು. 'ಉಯರ್ತಿರು 420' ಹಾಗೂ 'ನಂದಾ ನಂದಿತಾ' ಎಂಬ ಮತ್ತೆರಡು ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ 'ಜೈಲರ್- 2' ಚಿತ್ರದ ಮೂಲಕ ಮತ್ತೆ ತಮಿಳು ಚಿತ್ರರಂಗಕ್ಕೆ ವಾಸಪ್ ಹೋಗುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ. ಅದೇ ನಿಜವಾದರೆ ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಷಾಯ್ ದಂಪತಿಗಳ ಬಳಿಕ ಮಗಳು ರಜನಿಕಾಂತ್ ಜೊತೆ ತೆರೆ ಹಂಚಿಕೊಂಡಂತೆ ಆಗುತ್ತದೆ.

Buzz Meghana Raj to Join Super star Rajinikanth in Jailer 2

ಮೇಘನಾ ತಂದೆ ತಾಯಿ ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ಆರಂಭದ ದಿನಗಳಲ್ಲಿ ರಜನಿಕಾಂತ್ ಜೊತೆಗೂ ಬಣ್ಣ ಹಚ್ಚಿ ನಟಿಸಿದ್ದರು. 1978ರಲ್ಲಿ ಬಂದಿದ್ದ 'ತಪ್ಪಿದ ತಾಳ' ಚಿತ್ರದಲ್ಲಿ ರಜನಿಕಾಂತ್ ಜೊತೆ ಸುಂದರ್ ರಾಜ್ ಹಾಗೂ ಪ್ರಮೀಳಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಕೆ. ಬಾಲಚಂದರ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ಹಾಗೂ ಸರಿತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಅವರಿಬ್ಬರನ್ನು ಬಿಟ್ಟರೆ ಸೋಮ ಹಾಗೂ ಆತನ ಮಡದಿ ಪಾತ್ರಗಳಲ್ಲಿ ಸುಂದರ್ ರಾಜ್ ಹಾಗೂ ಪ್ರಮೀಳಾ ನಟಿಸಿದ್ದರು. ಇನ್ನು ಸನ್ ಪಿಕ್ಚರ್‌ ಬ್ಯಾನರ್ ಅಡಿಯಲ್ಲಿ 'ಜೈಲರ್'-2 ಸಿನಿಮಾ ನಿರ್ಮಾಣವಾಗ್ತಿದೆ. ಅನಿರುದ್ಧ್ ರವಿಚಂದಿರನ್ ಈ ಚಿತ್ರಕ್ಕೂ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

ಕೇರಳ ಸೇರಿದಂತೆ ಹಲವು ಭಾಗಗಳಲ್ಲಿ 'ಜೈಲರ್- 2' ಚಿತ್ರದ ಚಿತ್ರೀಕರಣ ನಡೆದಿದೆ. ಮುಂದಿನ ವರ್ಷ ಜೂನ್ 12ಕ್ಕೆ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಮತ್ತೊಮ್ಮೆ ರಜನಿಕಾಂತ್ ಪತ್ನಿ ಪಾತ್ರದಲ್ಲಿ ರಮ್ಯಾಕೃಷ್ಣ ನಟಿಸುತ್ತಿದ್ದಾರೆ. ವಿಲನ್ ಆಗಿ ಎಸ್‌. ಜೆ ಸೂರ್ಯ ಅಬ್ಬರಿಸಿದ್ದಾರೆ. ಈ ಚಿತ್ರದಲ್ಲಿ ಮುತ್ತು ಪಾಂಡಿಯನ್ ಮುಂದಿನ ಕಥೆ ಮಾತ್ರವಲ್ಲ ಹಿಂದಿನ ಕಥೆ ಕೂಡ ಇರಲಿದೆ.

'ಜೈಲರ್' ಚಿತ್ರದಲ್ಲಿ ಶಿವಣ್ಣನ ಪಾತ್ರವನ್ನು ಚಿಕ್ಕದಾಗಿ ತೋರಿಸಿದ್ದರು. ಎರಡು ಸನ್ನಿವೇಶಗಳಲ್ಲಿ ಮಾತ್ರ ಅವರು ಮಿಂಚಿದ್ದರು. ಆದರೆ ಸೀಕ್ವೆಲ್‌ನಲ್ಲಿ ನರಸಿಂಹನ ಹಿನ್ನೆಲೆ ಏನು ಎನ್ನುವ ಮತ್ತಷ್ಟು ಕಥೆ ಇರಲಿದೆ. ಮೇಘನಾ ರಾಜ್ ಅವರದ್ದು ಕೂಡ ಇಲ್ಲಿ ಪ್ರಮುಖ ಪಾತ್ರ ಎನ್ನಲಾಗ್ತಿದೆ. ರಜನಿಕಾಂತ್ ಇತ್ತೀಚೆಗೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಹಾಗಾಗಿ ಆದಷ್ಟು ಬೇಗ 'ಜೈಲರ್'-2 ಸಿನಿಮಾ ಮುಗಿಸುವ ಲೆಕ್ಕಾಚಾರದಲ್ಲಿದ್ದಾರೆ. ಅಭಿಮಾನಿಗಳು ಕೂಡ ಈ ಆಕ್ಷನ್ ಥ್ರಿಲ್ಲರ್ ಚಿತ್ರದ ಹೊಸ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ.

More from Filmibeat

Read more about: jailer rajinikanth meghana raj
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X