ಪೂಜಾ ಗಾಂಧಿ ಬಾಳಲ್ಲಿ ಮತ್ತೆ 'ಮುಂಗಾರು ಮಳೆ': ಮದುವೆ ಆಗ್ತಿರೋ ವರ ಯಾರು?
ಮುಂಗಾರು ಮಳೆ ಖ್ಯಾತಿಯ ಪೂಜಾ ಗಾಂಧಿ ಮದುವೆ ಬಗ್ಗೆ ಮತ್ತೆ ಸುದ್ದಿಯಾಗುತ್ತಿದೆ. ಕೆಲವು ದಿನಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದ ನಟಿ ಕನ್ನಡ ಕಲಿಯುವುದರಲ್ಲಿ ಬ್ಯುಸಿಯಾಗಿದ್ದರು. ಇತ್ತೀಚೆಗೆ ಕನ್ನಡ ಚಿತ್ರರಂಗದ ಪರವಾಗಿ ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದರು. ಅದು ಬಿಟ್ಟರೆ ಈಗ ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.
ಪೂಜಾ ಗಾಂಧಿ ಸಿನಿಮಾದ ಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ಆದರೆ, ಸಿನಿಮಾದಲ್ಲಿ ಸಿಕ್ಕ ಯಶಸ್ಸು ರಾಜಕೀಯದಲ್ಲಿ ಸಿಗಲಿಲ್ಲ. ಸಿನಿಮಾ ರಾಜಕೀಯ ಏನೇ ಇದ್ದರೂ ಪೂಜಾಗಾಂಧಿ ಕನ್ನಡ ಕಲಿತು ಕನ್ನಡಿಗರ ಫೇವರಿಟ್ ನಟಿಯಾಗಿದ್ದಾರೆ. ಸದ್ಯಕೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಅಸಲಿಗೆ ಪೂಜಾ ಗಾಂಧಿ ಮದುವೆ ಆಗುತ್ತಿರುವ ಆ ವ್ಯಕ್ತಿ ಯಾರು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಪೂಜಾ ಗಾಂಧಿ ಬೆಂಗಳೂರು ಮೂಲದ ಹುಡುಗನನ್ನೇ ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ. ಮುಂಗಾರು ಮಳೆ ಬೆಡಗಿ ಪೂಜಾಗಾಂಧಿ ಬೆಂಗಳೂರಿನ ಲಾಜಿಸ್ಟಿಕ್ ಕಂಪನಿ ಮಾಲೀಕ ವಿಜಯ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆಂದು ಏಪ್ಯಾನೆಟ್‌ನ್ಯೂಸ್ ವರದಿ ಮಾಡಿದೆ.
ಇದೇ ನವೆಂಬರ್ 29ರಂದು ಬೆಂಗಳೂರಿನ ಯಲಂಹಕದ ಸಮೀಪ ನಟಿ ಪೂಜಾ ಗಾಂಧಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ವಿಶೇಷ ಅಂದರೆ, ಮಂತ್ರ ಮಾಂಗಲ್ಯ ಪದ್ಧತಿಯ ಪ್ರಕಾರ ಈ ಮದುವೆ ನಡೆಯಲಿದೆ ಎಂದು ವರದಿಯಾಗಿದೆ.

ಉದ್ಯಮಿ ವಿಜಯ್ ಅವರೇ ನಟಿ ಪೂಜಾ ಗಾಂಧಿಗೆ ಕನ್ನಡ ಕಲಿಯಲು ನೆರವಾಗಿದ್ದರು ಎಂದು ಹೇಳಲಾಗುತ್ತಿದೆ. ಯೋಗರಾಜ್ ಭಟ್ ನಿರ್ದೇಶಿಸಿದ 'ಮುಂಗಾರು ಮಳೆ' ಸಿನಿಮಾ ಮೂಲಕ ಪೂಜಾ ಗಾಂಧಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಹುಬೇಗನೇ ಕನ್ನಡ ಮಾತಾಡುವುದನ್ನೂ ಕಲಿತಿದ್ದರು. ಆದ್ರೀಗ ಕನ್ನಡ ಬರೆಯುವುದು ಹಾಗೂ ಓದುವುದನ್ನೂ ಕಲಿಯುತ್ತಿದ್ದಾರೆ.
ಪೂಜಾಗಾಂಧಿ ಮೂಲತ: ಉತ್ತರ ಪ್ರದೇಶದ ಮೀರತ್‌ನವರು. ಪಂಜಾಬಿ ಕುಟುಂಬದಲ್ಲಿ ಜನಿಸಿದ್ದ ಪೂಜಾ ಗಾಂಧಿ ದೆಹಲಿಯಲ್ಲಿ ನೆಲೆಸಿದ್ದರು. ಜಾಹೀತಾರು ಹಾಗೂ ಮಾಡಲಿಂಗ್ ಮೂಲಕ ಜನಪ್ರಿಯರಾಗಿದ್ದ ನಟಿ 'ಮುಂಗಾರು ಮಳೆ' ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದರು. ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಒಂದರ ಹಿಂದೊಂದರಂತೆ ಯಶಸ್ಸು ಇವರನ್ನು ಹಿಂಬಾಲಿಸಿಕೊಂಡು ಬಂದಿತ್ತು.
ಕನ್ನಡದಲ್ಲಿ 'ಮುಂಗಾರು ಮಳೆ', 'ಮಿಲನ', 'ಕೃಷ್ಣ', 'ದಂಡುಪಾಳ್ಯ'ದಂತಹ ಸಿನಿಮಾಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾದಂತೆ ರಾಜಕೀಯದಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದರೂ, ಪೂಜಾ ಗಾಂಧಿ ಗೆಲ್ಲಲು ಸಾಧ್ಯವಾಗಿಲ್ಲ. ಸದ್ಯ ರಾಜಕೀಯದಲ್ಲೂ ಪೂಜಾ ಗಾಂಧಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ.
ಪೂಜಾ ಗಾಂಧಿ ಇನ್ನೇನು ಮರೆತೇ ಹೋದರು ಅನ್ನುವಾಗ ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದರು. ಈಗ ಮದುವೆ ಮೂಲಕ ಸದ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಮಂತ್ರ ಮಾಂಗಲ್ಯ ಮೂಲಕ ಮದುವೆ ಆಗುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ತಮ್ಮ ಮದುವೆ ಬಗ್ಗೆ ಪೂಜಾ ಗಾಂಧಿ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಂತೆ ಕಾಣುತ್ತಿಲ್ಲ.


Click it and Unblock the Notifications











