ಮತ್ತೊಬ್ಬ ನಿರ್ದೇಶಕನಿಗೆ ಅಡ್ವಾನ್ಸ್ ಕೊಟ್ಟು ಚಿತ್ರಕ್ಕಾಗಿ ಬುಕ್ ಮಾಡಿದ ಹೊಂಬಾಳೆ?

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದೆ. ಈಗಾಗಲೇ ತೆಲುಗು, ತಮಿಳು, ಮಲಯಾಳಂನಲ್ಲಿ ತಲಾ ಒಂದೊಂದು ಸಿನಿಮಾ ನಿರ್ಮಿಸಿದೆ. 'ಸಲಾರ್' ಮಾತ್ರ ದೊಡ್ಡಮಟ್ಟದಲ್ಲಿ ಗೆದ್ದಿತ್ತು. ಪ್ರಭಾಸ್ ಕಾಂಬಿನೇಷನ್‌ನಲ್ಲಿ ಮತ್ತೆ 3 ಸಿನಿಮಾಗಳನ್ನು ಮಾಡಲು ಒಪ್ಪಂದವಾಗಿದೆ.

ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೀತಿದೆ. ಅದರಲ್ಲೂ ಪ್ರಭಾಸ್ ಹೀರೊ ಅಂದರೆ 300-400 ಕೋಟಿ ರೂ. ಬಜೆಟ್ ಬೇಕಾಗುತ್ತದೆ. ಇನ್ನು ಮೂರು ಸಿನಿಮಾ ಅಂದ್ರೆ 1000 ಕೋಟಿ ರೂ. ವರೆಗೂ ಆಗುತ್ತದೆ. ಅಷ್ಟರಮಟ್ಟಿಗೆ ಧೈರ್ಯ ಮಾಡಿ ಸಿನಿಮಾಗಳ ನಿರ್ಮಾಣಕ್ಕೆ ಹೊಂಬಾಳೆ ಸಂಸ್ಥೆ ಪ್ರಯತ್ನಿಸುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ'-1 ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ.

Buzz Prabhas asked Hombale Films to give Advance for star director

'ಕಾಂತಾರ'-1 ಬಳಿಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಯಾವ ಸಿನಿಮಾ ನಿರ್ಮಾಣ ಮಾಡುತ್ತದೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಬೇಕಿರುವ 'ರಿಚರ್ಡ್ ಆಂಟನಿ' ಹಾಗೂ 'KGF- 3' ಸಿನಿಮಾಗಳು ಲಿಸ್ಟ್‌ನಲ್ಲಿದೆ. ಇನ್ನು ಪ್ರಶಾಂತ್ ನೀಲ್ ಇದೀಗ 'ಡ್ರ್ಯಾಗನ್' ಚಿತ್ರ ಕೈಗೆತ್ತಿಕೊಂಡಿದ್ದಾರೆ. ಅದು ಮುಗಿದ ಬಳಿಕವೇ 'ಸಲಾರ್- 2' ಬಗ್ಗೆ ಯೋಚಿಸಲಿದ್ದಾರೆ.

ಪ್ರಭಾಸ್ ಕೂಡ 'ದಿ ರಾಜಾಸಾಬ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹನು ರಾಘವಪುಡಿ ನಿರ್ದೇಶನದ ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಆ ಚಿತ್ರದ ಟೈಟಲ್ 'ಫೌಜಿ' ಎನ್ನಲಾಗ್ತಿದೆ. ಒಂದು ಐತಿಹಾಸಿಕ ಕಥೆಯನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ನಡೀತಿದೆ. ಇನ್ನು 'ಸಲಾರ್- 2' ಬಿಟ್ಟು ಪ್ರಭಾಸ್ ಹಾಗೂ ಹೊಂಬಾಳೆ ಕಾಂಬಿನೇಷನ್‌ನಲ್ಲಿ ಬರುವ ಇನ್ನೆರಡು ಚಿತ್ರಗಳನ್ನು ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.

'ಹನುಮಾನ್' ಚಿತ್ರ ನಿರ್ದೇಶಿಸಿ ಗೆದ್ದಿರುವ ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಪ್ರಭಾಸ್ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಚಿತ್ರಕ್ಕೆ 'ಬಕಾ' ಎಂಬ ಟೈಟಲ್ ಫಿಕ್ಸ್ ಆಗಿದ್ದು ಈ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಿಸುತ್ತದೆ ಎಂದು ಗುಲ್ಲಾಗಿದೆ. ಮತ್ತೊಂದು ಚಿತ್ರವನ್ನು ತಮಿಳು ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನ ಮಾಡುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

Buzz Prabhas asked Hombale Films to give Advance for star director

'ಫೌಜಿ' ಸಿನಿಮಾ ಚಿತ್ರೀಕರಣದ ನಡುವೆಯೇ ಹನು ರಾಘವಪುಡಿ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಪ್ರಭಾಸ್ ನಟಿಸಲು ಮನಸ್ಸು ಮಾಡಿದ್ದಾರೆ. ಹೊಂಬಾಳೆ ಸಂಸ್ಥೆ ಆ ಚಿತ್ರಕ್ಕೆ ಹಣ ಹೂಡುತ್ತದೆ. ಪ್ರಭಾಸ್ ಸೂಚನೆಯಂತೆ ಹೊಂಬಾಳೆ ಸಂಸ್ಥೆ ಅಡ್ವಾನ್ಸ್ ಕೊಟ್ಟು ಸಿನಿಮಾ ಮಾಡಿಕೊಡುವಂತೆ ಹನು ರಾಘವಪುಡಿ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಸುದ್ದಿಗೆ ಸ್ಪಷ್ಟನೆ ಸಿಗಬೇಕಿದೆ. ಪ್ರಭಾಸ್ ಜೊತೆ ಹೊಂಬಾಳೆ ಮೂರಲ್ಲ 4 ಸಿನಿಮಾ ಮಾಡ್ತಾರಾ ಕಾದು ನೋಡಬೇಕು.

'ಅಂದಾಲ ರಾಕ್ಷಸಿ', 'ಕೃಷ್ಣಗಾಡಿ ವೀರಪ್ರೇಮಗಾಥ', 'ಲೀ', 'ಪಡಿ ಪಡಿ ಲೇಚೆ ಮನಸು' ಸಿನಿಮಾಗಳು ಹನು ರಾಘವಪುಡಿ ನಿರ್ದೇಶನದಲ್ಲಿ ಮೂಡಿ ಬಂದಿದೆ. ಕೊನೆಯದಾಗಿ 'ಸೀತಾರಾಮಂ' ಚಿತ್ರವನ್ನು ಅವರು ಕಟ್ಟಿಕೊಟ್ಟಿದ್ದರು. ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ಹಾಗೂ ರಶ್ಮಿಕಾ ಮಂದಣ್ಣ ಚಿತ್ರದ ತಾರಾಗಣದಲ್ಲಿ ಮಿಂಚಿದ್ದರು.

ಪ್ರಭಾಸ್ ಹಾಗೂ ಹನು ರಾಘವಪುಡಿ ಮತ್ತೊಂದು ಸಿನಿಮಾ ಮಾಡುತ್ತಾರಾ? ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಆ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಿಸಿದರೆ ಮತ್ತಷ್ಟು ಅದ್ಧೂರಿಯಾಗಿ ಇರುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'ಸೀತಾರಾಮಂ' ಸಿನಿಮಾ ಬಳಿಕ ಹನು ರಾಘವಪುಡಿ ನಿರ್ದೇಶನದ ಬಗ್ಗೆ ಕ್ರೇಜ್ ಹೆಚ್ಚಾಗಿದೆ.

English summary
Interesting speculations about Hombale films next line up
Read more about: hombale films prabhas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X