Salaar: ರಿಲೀಸ್‌ಗೂ ಮೊದ್ಲೆ ಹೊಂಬಾಳೆಗೆ ಲಾಭ: ಯಾವ OTT, ಟಿವಿ ಚಾನಲ್‌ಗೆ ಬರ್ತಾನೆ ಗೊತ್ತಾ 'ಸಲಾರ್'?
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿದೆ. ಯಾವಾಗ ರಿಲೀಸ್ ಅನ್ನೋದನ್ನು ಹೊಂಬಾಳೆ ಸಂಸ್ಥೆ ಇನ್ನು ಸ್ಪಷ್ಟಪಡಿಸಿಲ್ಲ. ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಆಗಲ್ಲ ಅನ್ನೋ ಸುದ್ದಿ ಮಾತ್ರ ಅಭಿಮಾನಿಗಳಿಗೆ ಬೇಸರ ತಂದಿದೆ. ಲೇಟ್ ಆದರೂ ಲೇಟೆಸ್ಟ್ ಆಗಿ ಸಿನಿಮಾ ತೆರೆಗೆ ತನ್ನಿ ಎಂದು ಹೇಳಿ ಸುಮ್ಮನಾಗುತ್ತಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಪ್ರಭಾಸ್ ಅಬ್ಬರಿಸಿದ್ದಾರೆ. ಹೊಂಬಾಳೆ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ 2 ಭಾಗಗಳಾಗಿ ಚಿತ್ರವನ್ನು ತೆರೆಗೆ ತರ್ತಿದೆ. ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದು ಜಗಪತಿ ಬಾಬು, ದೇವರಾಜ್, ಪೃಥ್ವಿರಾಜ್ ಸುಕುಮಾರ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಬಹುತೇಕ ಸಿನಿಮಾ ಚಿತ್ರೀಕರಣ ಕೂಡ ಮುಕ್ತಾಯವಾಗಿದೆ.

ಗ್ರಾಫಿಕ್ಸ್ ವರ್ಕ್ ಚೆನ್ನಾಗಿ ಮೂಡಿ ಬಂದಿಲ್ಲ ಎನ್ನುವ ಕಾರಣಕ್ಕೆ ರೀವರ್ಕ್ ಮಾಡಲಾಗುತ್ತಿದೆಯಂತೆ. ಇದೇ ಕಾರಣಕ್ಕೆ ಸಿನಿಮಾ ರಿಲೀಸ್ ಮುಂದೂಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಸಿನಿಮಾ ಡಿಜಿಟಲ್ ಹಾಗೂ ಸ್ಯಾಟಲೈಟ್ ರೈಟ್ಸ್ ಸೇರಿ ಈಗಾಗಲೇ ಸಿನಿಮಾ 350 ಕೋಟಿ ರೂ. ಹೊಂಬಾಳೆ ಸಂಸ್ಥೆಗೆ ಹರಿದು ಬಂದಿದೆ ಎನ್ನಲಾಗ್ತಿದೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಪ್ರಶಾಂತ್ ನೀಲ್ ಕಾಂಬಿನೇಷನ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದು ಅದಕ್ಕೆ ತಕ್ಕಂತೆ ಡೀಲ್ ಕುದುರಿದೆ ಎನ್ನುವ ಚರ್ಚೆ ನಡೀತಿದೆ.
ಸ್ಟಾರ್ ಟಿವಿ 'ಸಲಾರ್' ಚಿತ್ರದ 5 ಭಾಷೆಯ ಸ್ಯಾಟಲೈಟ್ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. ಅದೇ ರೀತಿ ನೆಟ್‌ಫ್ಲಿಕ್ಸ್ ಸಂಸ್ಥೆ 5 ಭಾಷೆಯ ಓಟಿಟಿ ರೈಟ್ಸ್ ತನ್ನದಾಗಿಸಿಕೊಂಡಿದೆ ಎನ್ನಲಾಗ್ತಿದೆ. ಇದಕ್ಕಾಗಿ ಭಾರೀ ಮೊತ್ತ ಹೊಂಬಾಳೆ ಸಂಸ್ಥೆಗೆ ಸಿಕ್ಕಿದೆಯಂತೆ. ಆಡಿಯೋ, ಡಿಜಿಟಲ್, ಸ್ಯಾಟಲೈಟ್ ರೈಟ್ಸ್‌ನಿಂದಲೇ 350 ಕೋಟಿ ರೂ. ಬ್ಯುಸಿನೆಸ್ ಆಗಿದ್ದು ಇದು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಆಗಸ್ಟ್ ಕೊನೆ ವಾರದಲ್ಲಿ 'ಸಲಾರ್' ಟ್ರೈಲರ್ ರಿಲೀಸ್ ಮಾಡುವುದಾಗಿ ಹೊಂಬಾಳೆ ಸಂಸ್ಥೆ ಘೋಷಿಸಿತ್ತು. ಆದರೆ ಸೆಪ್ಟೆಂಬರ್ 2ನೇ ವಾರ ಬಂದರೂ ಟ್ರೈಲರ್ ಬರಲಿಲ್ಲ. ಅಷ್ಟರಲ್ಲೇ ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಕೊನೆಗೂ ಮೌನ ಮುರಿದಿರುವ ಹೊಂಬಾಳೆ ಸಂಸ್ಥೆ ಸಿನಿಮಾ ರಿಲೀಸ್ ಮುಂದೂಡಲು ಕಾರಣ ಏನು ಎಂದು ಹೇಳಿದೆ. ನಮ್ಮೊಟ್ಟಿಗೆ ಇರಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದೆ.
"ಸಲಾರ್' ಸಿನಿಮಾ ಮೇಲೆ ನೀವು ಅಪರಿಮಿತ ಪ್ರೀತಿಯನ್ನು, ಅಭಿಮಾನವನ್ನು ತೋರಿಸುತ್ತಾ ಸಪೋರ್ಟ್ ಮಾಡುತ್ತಿದ್ದೀರ. ನಿಮ್ಮ ಆಧರಾಭಿಮಾನ ನೋಡುತ್ತಿದ್ದರೆ ನಮಗೆ ತುಂಬಾ ಸಂತೋಷವಾಗುತ್ತಿದೆ. ಅನಿರೀಕ್ಷಿತ ಪರಿಸ್ಥಿತಿಯ ಕಾರಣ ಸೆಪ್ಟೆಂಬರ್ 28 ರಂದು ಬಿಡುಗಡೆ ಮಾಡಬೇಕಾದ 'ಸಲಾರ್' ಚಿತ್ರವನ್ನು ಬಿಡುಗಡೆ ಮಾಡಲಾಗದೇ ಮುಂದೂಡುತ್ತಿದ್ದೇವೆ. ನಿಮಗೆ ಅದ್ಭುತವಾದ ಸಿನಿಮ್ಯಾಟಿಕ್ ಅನುಭವ ನೀಡಬೇಕು ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದೇವೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ"
"ನಮ್ಮ ತಂಡವು ಅದ್ಭುತ ಸಿನಿಮಾ ತೆರೆಗೆ ತರಲು ಅಹರ್ನಿಶ ವಿಶ್ರಾಂತಿ ಇಲ್ಲದೇ ಕೆಲಸ ಮಾಡುತ್ತಿದೆ. ಸದ್ಯಕ್ಕೆ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಲು ಸಾಧ್ಯವಾಗುತ್ತಿಲ್ಲ. ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ನಮ್ಮೊಟ್ಟಿಗೆ ಈ ಪಯಣದಿಂದ ಭಾಗಿ ಆಗಿರುವುದಕ್ಕೆ ಧನ್ಯವಾದ" ಎಂದು ಹೊಂಬಾಳೆ ಸಂಸ್ಥೆ ಪೋಸ್ಟ್ ಮಾಡಿದೆ. ಕ್ರಿಸ್‌ಮಸ್ ಅಥವಾ ಸಂಕ್ರಾಂತಿ ಹಬ್ಬಕ್ಕೆ 'ಸಲಾರ್' ರಿಲೀಸ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ.


Click it and Unblock the Notifications











