'ಬಾಹುಬಲಿ', 'KGF', 'ಪುಷ್ಪ'ಗಿಂತ ಪ್ರಭಾಸ್ 'ಕಲ್ಕಿ' ಕಥೆ ದೊಡ್ಡದಾ?

ಪ್ರಭಾಸ್ ನಟನೆಯ ಕಲ್ಕಿ2898AD ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಈ ಸೈನ್ಸ್ ಫಿಕ್ಷನ್ ಸಿನಿಮಾ ಸಿದ್ಧವಾಗುತ್ತಿದೆ. ಪ್ರಭಾಸ್ ಜೊತೆಗೆ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ನಟಿಸುತ್ತಿರುವುದು ವಿಶೇಷ.

ನಾಗ್‌ ಅಶ್ವಿನ್ ನಿರ್ದೇಶನದ 'ಕಲ್ಕಿ' ಭಾರತೀಯ ಚಿತ್ರರಂಗದಲ್ಲೇ ದುಬಾರಿ ಸಿನಿಮಾ ಎನ್ನಲಾಗ್ತಿದೆ. ಇಷ್ಟೇ ಬಜೆಟ್ ಎಂದು ಫಿಕ್ಸ್ ಮಾಡದೇ ಕಥೆ ಕೇಳಿದ್ದನ್ನೆಲ್ಲಾ ಕೊಟ್ಟು ನಿರ್ಮಾಪಕರು ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಸಣ್ಣ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಮಲ್ಟಿಸ್ಟಾರರ್ ಸಿನಿಮಾ ಮೇ 9ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ.

Buzz: Prabhas starrer Kalki 2898AD is going to have 9 parts

ಹಾಲಿವುಡ್ ಶೈಲಿಯಲ್ಲಿ 'ಕಲ್ಕಿ 2898AD' ಸಿನಿಮಾ ಮೂಡಿ ಬರ್ತಿದೆ. ಟೈಟಲ್ ರೋಲ್‌ನಲ್ಲಿ ಪ್ರಭಾಸ್, ಅಶ್ವತ್ಥಾಮನಾಗಿ ಅಮಿತಾಬ್ ಬಚ್ಚನ್ ಹಾಗೂ ಕಲಿ ಆಗಿ ಕಮಲ್ ಹಾಸನ್ ಅಬ್ಬರಿಸುತ್ತಿದ್ದಾರೆ. ಇನ್ನುಳಿದಂತೆ ದಿಶಾ ಪಟಾನಿ, ಪಶುಪತಿ, ಸಶ್ವತಾ ಚಟರ್ಜಿ ಚಿತ್ರದ ತಾರಾಗಣದಲ್ಲಿದ್ದಾರೆ.

ಭಾರತೀಯ ಚಿತ್ರರಂಗದಲ್ಲೀಗ ಹಾಲಿವುಡ್ ಮಾದರಿಯ ಸರಣಿ ಸಿನಿಮಾಗಳು ನಿರ್ಮಾಣವಾಗುತ್ತಿದೆ. ರಾಜಮೌಳಿ 'ಬಾಹುಬಲಿ' ಚಿತ್ರವನ್ನು ಎರಡು ಭಾಗಗಳಾಗಿ ಕಟ್ಟಿಕೊಟ್ಟ ಬಳಿಕ ಟ್ರೆಂಡ್ ಹೆಚ್ಚಾಯಿತು. 'KGF' ಹಾಗೂ 'ಪುಷ್ಪ' ಸರಣಿ ಕೂಡ ಅದೇ ಹಾದಿಯಲ್ಲಿ ಹೊಸ ದಾಖಲೆ ಬರೆದಿವೆ. ಇನ್ನು 'KGF'-3 ಬರುತ್ತೆ ಎಂದು ಚಿತ್ರತಂಡ ಹೇಳಿದೆ. ಹಲವು ಭಾಗಗಳಾಗಿ ಸಿನಿಮಾ ತೆರೆಗೆ ತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸುಕುಮಾರ್ ಸಹ 'ಪುಷ್ಪ' 2 ಭಾಗಗಳಾಗಿ ಮಾತ್ರ ನಿಲ್ಲಿಸದೇ ಕಥೆ ಮುಂದುವರೆಸುವ ಲೆಕ್ಕಾಚಾರದಲ್ಲಿದ್ದಾರೆ. ಅಲ್ಲು ಅರ್ಜುನ್ ಕೂಡ ಈ ಬಗ್ಗೆ ಸುಳಿವು ನೀಡಿದ್ದಾರೆ. ಅದೇ ರೀತಿ 'ಕಲ್ಕಿ' ಚಿತ್ರವನ್ನು 9 ಭಾಗಗಳಾಗಿ ತೆರೆಗೆ ತರುವ ಬಗ್ಗೆ ಗುಸುಗುಸು ಕೇಳಿಬರ್ತಿದೆ. ಸದ್ಯ ಸಿನಿಮಾ 2 ಭಾಗಳಾಗಿ ಬರುತ್ತದೆ ಎನ್ನುವ ಚರ್ಚೆ ನಡೀತಿದೆ. ಆದರೆ ಮುಂದೆ ಈ ಸರಣಿ ಹೀಗೆ ಮುಂದುವರೆಯುತ್ತದೆ ಎಂದು ಹೇಳಲಾಗ್ತಿದೆ.

Buzz: Prabhas starrer Kalki 2898AD is going to have 9 parts

ಹಾಲಿವುಡ್‌ನಲ್ಲಿ ಇಂತಹ ಫ್ರಾಂಚೆಸಿ ಸಿನಿಮಾಗಳ ಇತಿಹಾಸ ದೊಡ್ಡದಿದೆ. ಅವೇಂಜರ್ಸ್, ಫಾಸ್ಟ್ ಅಂಡ್ ಫ್ಯೂರಿಯಸ್, ಜೇಮ್ಸ್ ಬಾಂಡ್ ಸರಣಿ ಸಿನಿಮಾಗಳನ್ನು ಹಲವು ಭಾಗಗಳಾಗಿ ಪ್ರೇಕ್ಷಕರ ಮುಂದೆ ತರಲಾಗಿದೆ. ಅದೇ ರೀತಿಯಲ್ಲಿ ಕಲ್ಕಿ ಚಿತ್ರವನ್ನು 9 ಭಾಗಗಳಾಗಿ ಮುಂದುವರೆಸುತ್ತಾರೆ ಎನ್ನುವ ಚರ್ಚೆ ನಡೀತಿದೆ. ಮೊದಲು 3 ಭಾಗಗಳಾಗಿ ಪ್ರಭಾಸ್ ನಟಿಸಲಿದ್ದು ಬಳಿಕ ಬೇರೆ ಕಲಾವಿದರು ತಾರಾಗಣದಲ್ಲಿ ಮುಂದುವರೆಯುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.

'ಕಲ್ಕಿ' ಸಿನಿಮಾ ಮೇ 9ಕ್ಕೆ ಬಿಡುಗಡೆ ಆಗಲ್ಲ ಎನ್ನುವ ಚರ್ಚೆ ಶುರುವಾಗಿದೆ. ಆದರೆ ಚಿತ್ರತಂಡ ಮಾತ್ರ ಹೇಳಿದಂತೆಯೇ ಅದೇ ದಿನ ಸಿನಿಮಾ ತೆರೆಗೆ ತರುವ ತಯಾರಿಯಲ್ಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಚಿತ್ರೀಕರಣ ತಡವಾಗಿ ಮುಂದೂಡುವಂತಾಗಿತ್ತು. ಕಮಲ್ ಹಾಸನ್ ಎಂಟ್ರಿಯಿಂದ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

ಸದ್ಯ ಪ್ರಭಾಸ್ 'ಕಲ್ಕಿ' ಜೊತೆಗೆ 'ರಾಜಾ ಸಾಬ್' ಎನ್ನುವ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಳಿಕ 'ಸಲಾರ್' ಸೀಕ್ವೆಲ್ ಮಾಡಬೇಕಿದೆ. ಪ್ರಶಾಂತ್ ನೀಲ್ ಮುಂದಿನ ವರ್ಷವೇ 'ಸಲಾರ್'-2 ಶೌರ್ಯಾಂಗ ಪರ್ವ ತೋರಿಸಲು ಮನಸ್ಸು ಮಾಡಿದ್ದಾರೆ. ಹೊಂಬಾಳೆ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಲಿದೆ.

ಸಂದೀಪ್ ರೆಡ್ಡಿ ವಂಗಾ ಜೊತೆ 'ಸ್ಪಿರಿಟ್' ಎನ್ನುವ ಇನ್ನೊಂದು ಚಿತ್ರವನ್ನು ಸಹ ಪ್ರಭಾಸ್ ಒಪ್ಪಿಕೊಂಡಿದ್ದಾರೆ. ಹಾಗಾಗಿ 'ಕಲ್ಕಿ' ಸರಣಿಯ 3 ಸಿನಿಮಾಗಳಲ್ಲಿ ನಟಿಸುತ್ತಾರಾ? ಹಾಗಾದರೆ ಆ ಸಿನಿಮಾಗಳು ಯಾವಾಗ ಬರುತ್ತದೆ? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಮೊದಲಿಗೆ 'ಕಲ್ಕಿ' ಸಿನಿಮಾ ತೆರೆಗೆ ತಂದು ಅದಕ್ಕೆ ಪ್ರೇಕ್ಷಕ ವರ್ಗ ಸೃಷ್ಟಿಸಿಕೊಳ್ಳುವ ಪ್ರಯತ್ನ ನಡೀತಿದೆ. ಬಳಿಕ ಮುಂದಿನ ಸಿನಿಮಾಗಳ ಬಗ್ಗೆ ಚಿತ್ರತಂಡ ತೀರ್ಮಾನ ಕೈಗೊಳ್ಳುತ್ತದೆ ಎನ್ನಲಾಗುತ್ತಿದೆ.

More from Filmibeat

English summary
Kalki 2898AD Film Total 9 Parts Release Plan To makers;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X