'ಡ್ರ್ಯಾಗನ್' ಚಿತ್ರಕ್ಕಾಗಿ 'KGF' ಹಾಗೂ 'ಸಲಾರ್' ತಂತ್ರದ ಮೊರೆಹೋದ ಪ್ರಶಾಂತ್ ನೀಲ್?

ಕನ್ನಡ ನಿರ್ದೇಶಕ ಪ್ರಶಾಂತ್ ನೀಲ್ ಈಗ ದೊಡ್ಡ ದೊಡ್ಡ ಸಿನಿಮಾಗಳನ್ನು ಕಟ್ಟಿಕೊಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. 'KGF' ಸರಣಿ ಬಳಿಕ 'ಸಲಾರ್' ಚಿತ್ರ ನಿರ್ದೇಶಿಸಿ ಗೆದ್ದಿದ್ದರು. ಇದೀಗ ಜ್ಯೂ. ಎನ್‌ಟಿಆರ್ ಜೊತೆ 'ಡ್ರ್ಯಾಗನ್' ಸಿನಿಮಾ ಮಾಡುತ್ತಿದ್ದಾರೆ.

ಇತ್ತೀಚೆಗೆ 'ಡ್ರ್ಯಾಗನ್' ಚಿತ್ರದ ಬಗ್ಗೆ ಸಾಕಷ್ಟು ಊಹಾಪೋಹ ಶುರುವಾಗಿತ್ತು. ಚಿತ್ರೀಕರಿಸಿದ ದೃಶ್ಯಗಳು ತಾರಕ್‌ಗೆ ಇಷ್ಟವಾಗಿಲ್ಲ. ಹಾಗಾಗಿ ಪ್ರಶಾಂತ್ ನೀಲ್ ಜೊತೆ ಮುನಿಸಿಕೊಂಡಿದ್ದಾರೆ ಅಂತೆಲ್ಲಾ ಗುಸುಗುಸು ಕೇಳಿಬಂದಿತ್ತು. ಆದರೆ ಇದೆಲ್ಲಾ ಬರೀ ವದಂತಿ. ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎನ್ನುವುದು ಬಳಿಕ ಗೊತ್ತಾಯಿತು. ಸದ್ಯ ಚಿತ್ರದ ಬಗ್ಗೆ ಹೊಸ ಚರ್ಚೆ ಶುರುವಾಗಿದೆ.

Buzz Prashanth Neel and Jr NTR s Dragon to Release in Two Parts

ಸದ್ಯ ಭಾರತೀಯ ಚಿತ್ರರಂಗಕ್ಕೆ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಒಂದೇ ಕಥೆಯನ್ನು ಎರಡು ಭಾಗಗಳಾಗಿ ಎರಡು ಸಿನಿಮಾಗಳಲ್ಲಿ ಹೇಳುವುದು. 'ಡ್ರ್ಯಾಗನ್' ಚಿತ್ರಕ್ಕೂ ಪ್ರಶಾಂತ್ ನೀಲ್ ಇದೇ ತಂತ್ರದ ಮೊರೆ ಹೋಗುತ್ತಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಕಥೆಯನ್ನು ವಿಸ್ತರಿಸುತ್ತಾ ಹೋದಂತೆ ದೊಡ್ಡದಾಗ್ತಿದೆ. ಒಂದೇ ಚಿತ್ರದಲ್ಲಿ ಅಷ್ಟು ಕಥೆ ಹೇಳಲು ಸಾಧ್ಯವಿಲ್ಲ ಎಂದು ಈ ನಿರ್ಧಾರಕ್ಕೆ ಬರ್ತಿದ್ದಾರೆ ಎನ್ನಲಾಗ್ತಿದೆ.

'ಬಾಹುಬಲಿ' ಸರಣಿ ಮೂಲಕ ಭಾರತೀಯ ಚಿತ್ರರಂಗದಲ್ಲಿ ರಾಜಮೌಳಿ ಈ ಸೀಕ್ವೆಲ್ ಟ್ರೆಂಡ್ ಹುಟ್ಟಾಕ್ಕಿದ್ದರು. ಕನ್ನಡದಲ್ಲಿ 'KGF' ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬಂದು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಬಳಿಕ 'ಪುಷ್ಪ' ಸರಣಿ ಸಿನಿಮಾಗಳು ಬಂದು ಗೆದ್ದಿದ್ದು ಗೊತ್ತೇಯಿದೆ. ಸದ್ಯ 'ಡ್ರ್ಯಾಗನ್' ಚಿತ್ರವನ್ನು ಕೂಡ ಎರಡು ಭಾಗಗಳಾಗಿ ಬಿಡುಗಡೆ ಮಾಡಲು ಚಿಂತಿಸುತ್ತಿದ್ದಾರೆ ಎಂದು ಫಿಲ್ಮ್‌ನಗರ್‌ನಲ್ಲಿ ಚರ್ಚೆ ಆಗ್ತಿದೆ. 'ವಾರ್- 2' ಸಿನಿಮಾ ಸೋಲಿನಿಂದ ತಾರಕ್ ಸಂಕಷ್ಟಕ್ಕೆ ಸಿಲುಕಿದ್ದಾರೆ. 'ಡ್ರ್ಯಾಗನ್' ಸಿನಿಮಾ ಗೆಲ್ಲಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

Buzz Prashanth Neel and Jr NTR s Dragon to Release in Two Parts

ರುಕ್ಮಿಣಿ ವಸಂತ್ ಈ ಚಿತ್ರದಲ್ಲಿ ತಾರಕ್ ಜೋಡಿಯಾಗಿ ನಟಿಸುತ್ತಿದ್ದಾರೆ. ಕನ್ನಡದ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ. ಒಂದು ಸಿನಿಮಾ ಮಾಡಿ ಬಳಿಕ ಗ್ಯಾಪ್ ಕೊಟ್ಟು 2ನೇ ಸಿನಿಮಾ ಮಾಡದೇ ಒಮ್ಮೆಲೆ ಎರಡೂ ಸಿನಿಮಾಗಳ ಚಿತ್ರೀಕರಣ ಮುಗಿಸಲು ಪ್ರಶಾಂತ್ ನೀಲ್ ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ. ಎರಡು ತಿಂಗಳ ಅಂತರದಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಲು ಲೆಕ್ಕಾಚಾರ ನಡೀತಿದೆಯಂತೆ.

ಈ ಹಿಂದೆ 'ಪೊನ್ನಿಯಿನ್ ಸೆಲ್ವನ್' ಸರಣಿ ಸಿನಿಮಾಗಳನ್ನು ಹೀಗೆ ಒಮ್ಮೆಲೆ ಚಿತ್ರೀಕರಿಸಿ ಕೆಲವೇ ತಿಂಗಳ ಅಂತರದಲ್ಲಿ ಬಿಡುಗಡೆ ಮಾಡಿದ್ದರು. ಒಂದು ಸಿನಿಮಾ ಮಾಡಿ ಬಳಿಕ ಗ್ಯಾಪ್ ಕೊಡುವುದು ಸಿನಿರಸಿಕರಿಗೆ ಬೇಸರ ತರಿಸುತ್ತಿದೆ. ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಸಿನಿಮಾ ವಿಚಾರದಲ್ಲಿ ಇದೇ ರೀತಿ ಆಗಿದೆ. ಮತ್ತೊಂದು ಕಡೆ 'ಸಲಾರ್' ಪಾರ್ಟ್‌-1 ಮಾಡಿ ಸೀಕ್ವೆಲ್ ಮಾಡಲು ತಡಮಾಡಲಾಗ್ತಿದೆ. ಇದು ಪ್ರಭಾಸ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಮೈತ್ರಿ ಮೂವಿ ಮೇಕರ್ಸ್ ಹಾಗೂ ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ 'ಡ್ರ್ಯಾಗನ್' ಸಿನಿಮಾ ನಿರ್ಮಾಣವಾಗ್ತಿದೆ. ಮುಂದಿನ ವರ್ಷ ಜೂನ್ 25ಕ್ಕೆ ಸಿನಿಮಾ ತೆರೆಗೆ ಬರಲಿದೆ. ಅಧಿಕೃತವಾಗಿ ಸಿನಿಮಾ ಟೈಟಲ್ ಘೋಷಣೆ ಆಗಿಲ್ಲ. 'ಡ್ರ್ಯಾಗನ್' ಎನ್ನುವುದನ್ನೇ ಫೈನಲ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಮೊದಲಿಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭಿಸಲಾಗಿತ್ತು. ಬಳಿಕ ಕರ್ನಾಟಕದ ಕರಾವಳಿಯಲ್ಲಿ ಸಣ್ಣ ಶೆಡ್ಯೂಲ್ ಮುಗಿಸಿದ್ದರು.

ಶೀಘ್ರದಲ್ಲೇ ಚಿತ್ರೀಕರಣಕ್ಕಾಗಿ ಚಿತ್ರತಂಡ ಯೂರೋಪ್‌ಗೆ ಹೋಗುತ್ತಿದ್ದಾರೆ ಎನ್ನಲಾಗ್ತಿದೆ. ಇದು ಕೂಡ ಪ್ರಶಾಂತ್ ನೀಲ್ ಸ್ಟೈಲ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ.

More from Filmibeat

Read more about: prashanth neel ntr tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X