ಅಬ್ಬಬ್ಬಾ ಲಾಟರಿ.. ಹೃತಿಕ್ ಜೊತೆ ಸೂಪರ್ ಹೀರೊ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ?

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಟಾಪ್ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ನಟಿಸಿದ ಬಹುತೇಕ ಸಿನಿಮಾಗಳು ಗೆದ್ದು ಲಕ್ಕಿ ಛಾರ್ಮ್ ಎಂಬ ಪಟ್ಟ ಸಿಕ್ಕಿಬಿಟ್ಟಿದೆ. ಇದೀಗ ಹೃತಿಕ್ ರೋಷನ್ ಬಹುನಿರೀಕ್ಷಿತ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಾರೆ ಎನ್ನಲಾಗ್ತಿದೆ.

ಕೊನೆಯದಾಗಿ 'ಕುಬೇರ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಅದಕ್ಕೂ ಮುನ್ನ ಆಕೆ ನಟಿಸಿದ್ದ 'ಸಿಕಂದರ್', 'ಛಾವ' ಹಾಗೂ 'ಪುಷ್ಪ- 2' ಸಿನಿಮಾಗಳು ತೆರೆಗೆ ಬಂದಿದ್ದವು. ಸಿಕಂದರ್ ಬಿಟ್ಟು ಇನ್ನುಳಿದ 3 ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ನೂರಾರು ಕೋಟಿ ಕಲೆಕ್ಷನ್ ಮಾಡಿದ ದಾಖಲೆ ಬರೆದಿದ್ದವು. ಮುಂದೆ 'ಗರ್ಲ್‌ ಫ್ರೆಂಡ್' ಎಂಬ ಮಹಿಳಾ ಪ್ರಧಾನ ಸಿನಿಮಾ ಮೂಲಕ ಆಕೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

Buzz Rashmika Mandanna in Talks to Star Opposite Hrithik Roshan in Krrish-4

'ಥಮ' ಎಂಬ ಬಾಲಿವುಡ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸೂಪರ್ ಹಿಟ್ 'ಕಾಕ್‌ಟೇಲ್' ಸರಣಿಯ 2ನೇ ಚಿತ್ರಕ್ಕೂ ರಶ್ಮಿಕಾ ನಾಯಕಿ ಎನ್ನಲಾಗ್ತಿದೆ. ಒಟ್ಟಾರೆ ಆಕೆಯ ಕ್ರೇಜ್ ಸದ್ಯಕ್ಕೆ ಕಮ್ಮಿ ಆಗುವ ಸುಳಿವು ಸಿಗುತ್ತಿಲ್ಲ. ಹಿಂದಿ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲಿ ಕೂಡ ರಶ್ಮಿಕಾ ಬಣ್ಣ ಹಚ್ಚುತ್ತಿದ್ದಾರೆ. ಅಲ್ಲು ಅರ್ಜುನ್ ಹಾಗೂ ಅಟ್ಲಿ ಜೋಡಿಯ ಚಿತ್ರದಲ್ಲಿ ಕೂಡ ಆಕೆ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ.

'ವಾರ್- 2' ಬಳಿಕ ಹೃತಿಕ್ ರೋಷನ್ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ. 'ಕ್ರಿಶ್- 4' ಚಿತ್ರವನ್ನು ತಾವೇ ನಿರ್ದೇಶಿಸಿ ನಟಿಸೋಕೆ ಮುಂದಾಗಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಬಹುದು ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಆಕೆಯ ಜೊತೆ ಈಗಾಗಲೇ ಚರ್ಚೆ ಆರಂಭಿದ್ದಾರೆ ಎನ್ನಲಾಗ್ತಿದೆ. ಭಾರತದ ಸೂಪರ್ ಹೀರೊ ಸಿನಿಮಾ 'ಕ್ರಿಶ್' ಸರಣಿ ಹಿಟ್ ಆಗಿರುವುದು ಗೊತ್ತೇಯಿದೆ. ಸರಣಿಯ ಮುಂದಿನ ಚಿತ್ರಕ್ಕೆ ಸ್ವತಃ ಹೃತಿಕ್ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ಇದೀಗ ರಶ್ಮಿಕಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಾರೆ ಎನ್ನುವುದು ಮತ್ತಷ್ಟು ಕುತೂಹಲ ಹುಟ್ಟಾಕ್ಕಿದೆ.

Buzz Rashmika Mandanna in Talks to Star Opposite Hrithik Roshan in Krrish-4

ಹೊಂಬಾಳೆ ಫಿಲ್ಮ್ಸ್ ಜೊತೆಗೂ ಹೃತಿಕ್ ರೋಷನ್ ಕೈ ಜೋಡಿಸಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ಪ್ಲ್ಯಾನ್ ನಡೀತಿದೆ. ಪೃಥ್ವಿರಾಜ್ ಸುಕುಮಾರನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ. ಇದರ ನಡುವೆ ಹೃತಿಕ್ 'ಕ್ರಿಶ್- 4' ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದಾರೆ. ಇವತ್ತಿನ ತಂತ್ರಜ್ಞಾನ ಬಳಸಿ ಬಹಳ ಅದ್ಧೂರಿಯಾಗಿ ಈ ಸೂಪರ್ ಹೀರೊ ಸಿನಿಮಾ ಪ್ಲ್ಯಾನ್ ಮಾಡಲಾಗ್ತಿದೆ.

'ಕ್ರಿಶ್' ಸರಣಿ ಅಂದಾಕ್ಷಣ ನಾಯಕಿಯಾಗಿ ನೆನಪಾಗುವುದು ಪ್ರಿಯಾಂಕ ಚೋಪ್ರಾ. ಇದೀಗ ರಶ್ಮಿಕಾ ಮಂದಣ್ಣ ಯಾವ ತರಹದ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಫಿಲ್ಮ್ ಕ್ರಾಫ್ಟ್ ಪ್ರೊಡಕ್ಷನ್ಸ್ ಹಾಗೂ ಯಶ್ ರಾಜ್ ಫಿಲ್ಮ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ. ಹೃತಿಕ್ ತಂದೆ ರಾಕೇಶ್ ರೋಷನ್ ಈ ಚಿತ್ರಕ್ಕೆ ಕತೆ ಬರೆಯಲಿದ್ದಾರೆ.

ಸದ್ಯ 'ಕಾಕ್‌ಟೇಲ್- 2' ಸಿನಿಮಾ ಚಿತ್ರೀಕರಣದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ, ಇತ್ತೀಚೆಗೆ ಆಕೆ ಸೆಟ್‌ನಲ್ಲಿ ಕಾಣಿಸಿಕೊಂಡಿರುವ ಫೋಟೊಗಳು ವೈರಲ್ ಆಗಿತ್ತು. ಹೊಮಿ ಅಡಜಾನಿಯಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಾಹಿದ್ ಕಪೂರ್ ಹಾಗೂ ಕೃತಿ ಸನೂನ್ ಜೊತೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಳ್ಳುತ್ತಿದ್ದಾರೆ.

ತಮಿಳಿನ 'ಕಾಂಚನಾ- 4' ಚಿತ್ರದಲ್ಲಿ ಕೂಡ ರಶ್ಮಿಕಾ ನಟಿಸುತ್ತಾರೆ ಎನ್ನುವ ಊಹಾಪೋಹ ಇದೆ. ರಾಘವ ಲಾರೆನ್ಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಹಾರರ್ ಕಾಮಿಡಿ ಚಿತ್ರದಲ್ಲಿ ನಟಿಸೋಕೆ ರಶ್ಮಿಕಾ ನಟಿಸುತ್ತಾರಾ ಕಾದು ನೋಡಬೇಕಿದೆ.

More from Filmibeat

English summary
Rashmika Mandanna’s Name Emerges as Possible Lead Actress in Hrithik Roshan’s Krrish-4
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X