Yash19: ಗೋವಾದಲ್ಲಿ ರಾಕಿಂಗ್ ಜೋಡಿ: ಆ ದಿನವೇ ಯಶ್‌19 ಅಪ್‌ಡೇಟ್ ಫಿಕ್ಸ್!

ರಾಕಿಭಾಯ್ ಮುಂದಿನ ಸಿನಿಮಾ ಯಾವ್ದು? ಇದು ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆ. KGF-2 ಸಿನಿಮಾ ರಿಲೀಸ್ ಆಗಿ ಒಂದೂವರೆ ವರ್ಷ ಕಳೆದರೂ ಯಶ್‌19 ಅಪ್‌ಡೇಟ್ ಮಾತ್ರ ಸಿಗಲೇಯಿಲ್ಲ. ಅಭಿಮಾನಿಗಳು ಕೂಡ ಕಾದು ಕಾದು ಸುಸ್ತಾಗಿದ್ದಾರೆ. ಪರಿ ಪರಿಯಾಗಿ ರಾಕಿಂಗ್ ಸ್ಟಾರ್ ನೆಕ್ಸ್ಟ್‌ ಪ್ರಾಜೆಕ್ಟ್ ಅಪ್‌ಡೇಟ್ ಕೇಳಿ ಕೇಳಿ ಸುಮ್ಮನಾಗಿದ್ದಾರೆ.

ಸ್ಟಾರ್ ನಟರು ಒಂದು ಸಿನಿಮಾ ಮುಗಿಯೋಕು ಮುನ್ನ ಮತ್ತೊಂದು ಸಿನಿಮಾ ಲೈನ್‌ಅಪ್ ಮಾಡಿಕೊಂಡಿರುತ್ತಾರೆ. ಆದರೆ ಯಶ್ ಮಾತ್ರ ನಾಲ್ಕೈದು ವರ್ಷಗಳಿಂದ ತಮ್ಮ ಮುಂದಿನ ಸಿನಿಮಾ ಕಥೆ ಫೈನಲ್ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. 2018ರಲ್ಲಿ KGF ಫಸ್ಟ್ ಚಾಪ್ಟರ್ ರಿಲೀಸ್ ಆಗಿತ್ತು. ಆ ಬಳಿಕ ಚಾಪ್ಟರ್-2 ಬರೋದು ಕನ್ಫರ್ಮ್ ಆಗಿತ್ತು. ಹಾಗಾಗಿ ಅಂದಿನಿಂದಲೇ ಯಶ್ ಮುಂದಿನ ಸಿನಿಮಾ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಇನ್ನು ಸಿನಿಮಾ ಅನೌನ್ಸ್ ಆಗಿಲ್ಲ.

Buzz: Rocking star Yash19 update on Ganesh Chaturthi, September 19th

ಇನ್ನು 2018ರಲ್ಲಿ ಶುರುವಾಗಿದ್ದ 'ಮೈ ನೇಮ್‌ ಈಸ್ ಕಿರಾತಕ' ಸಿನಿಮಾ ನಿಂತು ಹೋಯಿತು. ಆದರೆ ನಿರ್ಮಾಪಕರಿಗೆ ಚಿತ್ರೀಕರಣದ ವೆಚ್ಚವನ್ನು ಬಡ್ಡಿ ಸಮೇತ ಯಶ್ ವಾಪಸ್ ಕೊಟ್ಟಿದ್ದರು. ರಾಕಿಂಗ್ ಸ್ಟಾರ್ ಮುಂದಿನ ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗ ಕಾಯುತ್ತಿದೆ. ಅದಕ್ಕೆ ತಕ್ಕಂತ ಕತೆಯನ್ನು ಯಶ್ ಹುಡುಕುತ್ತಿದ್ದಾರೆ. KGF ಸರಣಿ ಸಕ್ಸಸ್ ಮುಂದಿನ ಸಿನಿಮಾ ಮೇಲೆ ಒತ್ತಡ ಹೆಚ್ಚಿಸಿರುವುದು ಸುಳ್ಳಲ್ಲ.

KGF-2 ಬಳಿಕ 'ಮಫ್ತಿ' ನಿರ್ದೇಶಕ ನರ್ತನ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಬೇಕಿತ್ತು. ಅದಕ್ಕಾಗಿ ಕತೆ ಕೂಡ ಸಿದ್ಧವಾಗಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಸಾಧ್ಯವಾಗಲಿಲ್ಲ. ಬಳಿಕ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಯಿತು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಸಿಗಲಿಲ್ಲ. ಗಣೇಶ ಹಬ್ಬದ ಸಂಭ್ರಮದಲ್ಲಿ ಯಶ್ ತಮ್ಮ ಮುಂದಿನ ಸಿನಿಮಾ ಘೋಷಿಸುತ್ತಾರೆ ಎನ್ನಲಾಗ್ತಿದೆ.

Buzz: Rocking star Yash19 update on Ganesh Chaturthi, September 19th

ಸದ್ಯ ಮಡದಿ ರಾಧಿಕಾ ಪಂಡಿತ್ ಜೊತೆ ಯಶ್ ಗೋವಾದಲ್ಲಿ ಬೀಡುಬಿಟ್ಟಿದ್ದಾರೆ. ಮತ್ತೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಯಶ್‌19 ಅನೌನ್ಸ್‌ಮೆಂಟ್ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಗಣೇಶ ಹಬ್ಬಕ್ಕೆ ಯಶ್19 ಅಪ್‌ಡೇಟ್ ಸಿಗುತ್ತದೆ ಎಂದು ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಸಿಕ್ಕಿಲ್ಲ. ಅಭಿಮಾನಿಗಳು ಮಾತ್ರ ಪದೇ ಪದೇ ಯಶ್‌19 ಅಪ್‌ಡೇಟ್‌ಗೆ ಹೊಸ ಹೊಸ ಡೇಟ್ ಫಿಕ್ಸ್ ಮಾಡಿಕೊಂಡು ಕಾಯುತ್ತಿದ್ದಾರೆ.

ಯಶ್‌19 ಅಪ್‌ಡೇಟ್ ಸಿಕ್ಕಿಲ್ಲ. ಆದರೆ ಅದಕ್ಕೂ ಮುನ್ನ ಯಶ್‌20 ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಯಶ್ ಮುಂದಿನ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶನ ಮಾಡಿದ್ರೆ ಆ ನಂತರದ ಚಿತ್ರಕ್ಕೆ ಪಿ.ಎಸ್ ಮಿತ್ರನ್ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ವದಂತಿ ಹರಿದಾಡುತ್ತಿದೆ. 'ಇರುಂಬು ತಿರೈ', 'ಸರ್ದಾರ್' ಮಿತ್ರನ್ ಕಟ್ಟಿಕೊಟ್ಟಿದ್ದಾರೆ.

ಯಶ್ ಮುಂದಿನ ಸಿನಿಮಾಗಳನ್ನು ಗೀತು ಮೋಹನ್ ದಾಸ್ ಹಾಗೂ ಪಿ.ಎಸ್ ಮಿತ್ರನ್ ಕಟ್ಟಿಕೊಡುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಈ ಹಿಂದೆ ಖುದ್ದು ಯಶ್ ತಮ್ಮ ಮುಂದಿನ ಸಿನಿಮಾಗಳ ನಾನಾಗಿಯೇ ಹೇಳುವವರಿಗೂ ಯಾವುದನ್ನು ನಂಬಬೇಡಿ ಎಂದಿದ್ದರು. ಹಾಗಾಗಿ ಗಣೇಶ ಹಬ್ಬಕ್ಕೆ ಯಶ್‌19 ಅಪ್‌ಡೇಟ್ ಸಿಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

More from Filmibeat

English summary
Buzz: Rocking star Yash19 update on Ganesh Chaturthi, September 19th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X