ಬಾಲಿವುಡ್‌ಗೆ ಹೋಗಲ್ಲ!, ಶಾರುಖ್‌ ಖಾನ್‌ನ ಕನ್ನಡಕ್ಕೆ ಕರ್ಕೊಂಡ್ ಬರ್ತಿದ್ದಾರೆ ರಾಕಿಂಗ್ ಸ್ಟಾರ್?

ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಸೈಲೆಂಟ್ ಆಗಿದ್ದಾರೆ. 'ಟಾಕ್ಸಿಕ್' ಚಿತ್ರವನ್ನು ಮಾತ್ರ ಘೋಷಿಸಿದ್ದು ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. 'KGF-2' ಬಳಿಕ 'ಟಾಕ್ಸಿಕ್' ಲೋಕಕ್ಕೆ ಪ್ರೇಕ್ಷಕರನ್ನು ಕರೆದುಕೊಂಡು ಹೋಗಲು ಯಶ್ ಕಾತುರಾಗಿದ್ದಾರೆ. ತೆರೆಮರೆಯಲ್ಲಿ ಚಿತ್ರಕ್ಕಾಗಿ ಭರ್ಜರಿ ಕಸರತ್ತು ನಡೀಯಿದೆ.

ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮುಂದಿನ ವರ್ಷ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದ ತಾರಾಬಳಗ, ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಇದೆಲ್ಲದರ ನಡುವೆ ಯಶ್ ಬಾಲಿವುಡ್‌ ಚಿತ್ರದಲ್ಲಿ ನಟಿಸುವ ಬಗ್ಗೆ ಗುಸುಗುಸು ಶುರುವಾಗಿದೆ. ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ರಾಕಿಂಗ್ ಸ್ಟಾರ್ ನಟಿಸ್ತಾರೆ ಎನ್ನಲಾಗ್ತಿದೆ. ಇನ್ನು ಶಾರುಖ್ ಖಾನ್ ಚಿತ್ರದಲ್ಲಿ ಯಶ್ ನಟಿಸುತ್ತಾರೆ ಎನ್ನುವ ಅಂತೆ ಕಂತೆ ಸುದ್ದಿ ಕೂಡ ಇತ್ತೀಚೆಗೆ ಕೇಳಿಬಂದಿತ್ತು.

Buzz: ShahRukh Khan Approached for a Powerful cameo in Yash starrer Toxic

ಶಾರುಖ್ ಖಾನ್ ತಮ್ಮ ರೆಡ್ ಚಿಲ್ಲೀಸ್ ಬ್ಯಾನರ್‌ನಲ್ಲಿ ಮೆಗಾ ಪ್ರಾಜೆಕ್ಟ್‌ಗೆ ಪ್ಲ್ಯಾನ್ ಮಾಡುತ್ತಿದ್ದು ಯಶ್ ಸಹ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಈಗ ಆ ಸುದ್ದಿಗೆ ಸಣ್ಣ ಟ್ವಿಸ್ಟ್ ಸಿಕ್ಕಿದೆ. ತಮ್ಮೊಟ್ಟಿಗೆ ನಟಿಸಲು ಯಶ್‌ನ ಶಾರುಖ್ ಕರೆದಿಲ್ಲ. 'ಟಾಕ್ಸಿಕ್' ಚಿತ್ರಕ್ಕಾಗಿ ಕಿಂಗ್‌ ಖಾನ್‌ನ ಚಿತ್ರತಂಡವೇ ಅಪ್ರೋಚ್ ಮಾಡಿದೆ ಎನ್ನಲಾಗ್ತಿದೆ. 'ಟಾಕ್ಸಿಕ್‌' ಚಿತ್ರದ ಅತಿಥಿ ಪಾತ್ರಕ್ಕೆ ಶಾರುಖ್‌ಗೆ ಬುಲಾವ್ ಹೋಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

'ಟಾಕ್ಸಿಕ್‌' ಚಿತ್ರದ ಮುಖ್ಯ ಪಾತ್ರಕ್ಕೆ ಶಾರುಖ್ ಖಾನ್‌ ಜೊತೆ ಚರ್ಚೆ ನಡೀತಿದೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ. ಕೂಡಲೇ ಈ ಸುದ್ದಿ ವೈರಲ್ ಆಗ್ತಿದ್ದು ಯಶ್ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ನಾನು ಕನ್ನಡ ಬಿಟ್ಟು ಬೇರೆ ಭಾಷೆಗೆ ಹೋಗಲ್ಲ, ಎಲ್ಲರನ್ನು ಇಲ್ಲಿಗೆ ಕರ್ಕೊಂಡ್ ಬರ್ತೀನಿ ಎನ್ನುವ ಅರ್ಥದಲ್ಲಿ ಈ ಹಿಂದೆ ಯಶ್ ಮಾತನಾಡಿದ್ದರು. 'KGF'-2 ಚಿತ್ರಕ್ಕೆ ಸಂಜಯ್ ದತ್, ರವೀನಾ ಟಂಡನ್ ಬಂದಿದ್ದರು. ಇದೀಗ 'ಟಾಕ್ಸಿಕ್' ಚಿತ್ರದ ಮೂಲಕ ಶಾರುಖ್‌ನ ಕರ್ಕೊಂಡ್ ಬರ್ತಾರಾ? ಎನ್ನುವ ಚರ್ಚೆ ಶುರುವಾಗಿದೆ.

Buzz: ShahRukh Khan Approached for a Powerful cameo in Yash starrer Toxic

'ಟಾಕ್ಸಿಕ್‌' ಸಿನಿಮಾ ಕನ್ನಡದಲ್ಲಿ ನಿರ್ಮಾಣವಾಗಿ ಬಳಿಕ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಇನ್ನು ಚಿತ್ರದ ತಾರಾಗಣದ ಬಗ್ಗೆ ಭಾರೀ ನಿರೀಕ್ಷೆಯಿದೆ. ಶಾರುಖ್ ಖಾನ್ ಬಂದರೆ ಹಬ್ಬವೇ ಸರಿ. ಬರೀ ಗಿಮಿಕ್‌ಗೋಸ್ಕರ ಟಾಕ್ಸಿಕ್ ಚಿತ್ರಕ್ಕೆ ಶಾರುಖ್ ಖಾನ್‌ನ ಅಪ್ರೋಚ್ ಮಾಡಿಲ್ಲ. ಕಥೆಗೆ ಆ ಪಾತ್ರ ಬಹಳ ಮುಖ್ಯವಾಗಿದ್ದು. ಎಸ್‌ಆರ್‌ಕೆ ನಟಿಸಿದರೆ ಸೂಕ್ತ ಎನ್ನುವ ಕಾರಣಕ್ಕೆ ಕೇಳಿರುವುದಾಗಿ ಹೇಳಲಾಗುತ್ತಿದೆ.

ಶಾರುಖ್ ಖಾನ್ ಕಳೆದ ಹ್ಯಾಟ್ರಿಕ್ ಹಿಟ್ ಕೊಟ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. 5 ವರ್ಷಗಳ ಹಿಂದೆ 'KGF' ಸಿನಿಮಾ ಎದುರು ಬಂದಿದ್ದ ಶಾರುಖ್ ಖಾನ್ ನಟನೆಯ 'ಜೀರೊ' ಸಿನಿಮಾ ಸೋತಿತ್ತು. ಬಳಿಕ 4 ವರ್ಷ ಯಾವುದೇ ಸಿನಿಮಾ ಮಾಡದ ಶಾರುಖ್ 'ಪಠಾಣ್' ಆಗಿ ಕಂಬ್ಯಾಕ್ ಮಾಡಿದ್ದರು. ಆ ಬಳಿಕ 'ಜವಾನ್' ಹಾಗೂ 'ಡಂಕಿ' ಬಂದು ಸೂಪರ್ ಹಿಟ್ ಆಗಿತ್ತು. ಸದ್ಯ ಯಾವುದೇ ಚಿತ್ರವನ್ನು ಕಿಂಗ್‌ ಖಾನ್ ಇನ್ನು ಒಪ್ಪಿಕೊಂಡಿಲ್ಲ. 'ಟಾಕ್ಸಿಕ್' ಚಿತ್ರಕ್ಕೆ ಸೈ ಎನ್ನುತ್ತಾರಾ ಕಾದುನೋಡಬೇಕಿದೆ.

ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ 'ಟಾಕ್ಸಿಕ್' ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ. ಡ್ರಗ್ಸ್ ಮಾಫಿಯಾ ಸುತ್ತಾ ಸಿನಿಮಾ ಕಥೆ ಸುತ್ತುತ್ತದೆ ಎನ್ನಲಾಗ್ತಿದೆ.

More from Filmibeat

English summary
ShahRukh Khan to act with Yash in Toxic?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X