ಶೀಘ್ರದಲ್ಲೇ ಉಗಾಂಡಾ ದೇಶಕ್ಕೆ ಶಿವಣ್ಣ ಹಾಗೂ ಉಪೇಂದ್ರ ಪ್ರಯಾಣ?
ನಟ ಶಿವರಾಜ್‌ಕುಮಾರ್ ಅಮೆರಿಕಾದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿ ಭಾರತಕ್ಕೆ ವಾಪಸ್ ಬಂದಿದ್ದಾರೆ. ಕ್ರಿಸ್‌ಮಸ್ ಹಬ್ಬದ ವೇಳೆ ಅಮೆರಿಕಾಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಕೆಲ ದಿನಗಳಿಂದ ಯಾವುದೇ ಸಿನಿಮಾ ಕೆಲಸಗಳಲ್ಲಿ ಭಾಗಿ ಆಗುತ್ತಿಲ್ಲ. ಕೊನೆಯದಾಗಿ '45' ಚಿತ್ರದ ಡಬ್ಬಿಂಗ್ ಮುಗಿಸಿ ಅಮೆರಿಕಾಗೆ ತೆರಳಿದ್ದರು.
ಧ್ರುವ ಸರ್ಜಾ ನಟನೆಯ 'KD' ಚಿತ್ರದಲ್ಲಿ ಸೆಂಚುರಿ ಸ್ಟಾರ್ ನಟಿಸೋ ಬಗ್ಗೆ ಗುಸುಗುಸು ಶುರುವಾಗಿದೆ. ಇದೆಲ್ಲದರ ನಡುವೆ ಶೀಘ್ರದಲ್ಲೇ ಶಿವಣ್ಣ ಉಗಾಂಡಗೆ ತೆರಳುತ್ತಾರೆ ಎನ್ನಲಾಗ್ತಿದೆ. ಶಿವಣ್ಣ ಮಾತ್ರವಲ್ಲ ನಟ, ನಿರ್ದೇಶಕ ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ಸೇರಿದಂತೆ ದೊಡ್ಡ ತಂಡವೇ ಅಲ್ಲಿಗೆ ತೆರಳುತ್ತದೆ ಎನ್ನುವ ಗುಸುಗುಸು ಶುರವಾಗಿದೆ. '45' ಚಿತ್ರದ ಪ್ರಮೋಷನಲ್ ಸಾಂಗ್ ಚಿತ್ರೀಕರಣಕ್ಕಾಗಿ ಅಲ್ಲಿಗೆ ಹೋಗುತ್ತಾರೆ ಎನ್ನಲಾಗ್ತಿದೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ನಿರ್ದೇಶನದ ಪ್ರಯೋಗಾತ್ಮಕ ಸಿನಿಮಾ ಇದು. ಈಗಾಗಲೇ ಚಿತ್ರೀಕರಣ ಮುಗಿದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಹೇಳಿದೆ. ಇದೆಲ್ಲದರ ನಡುವೆ ಪ್ರಮೋಷನಲ್ ಸಾಂಗ್ ಬಗ್ಗೆ ಚರ್ಚೆ ಶುರುವಾಗಿದೆ.
ದೂರದ ಉಗಾಂಡದಲ್ಲಿ '45' ಪ್ರಮೋಷನಲ್ ಸಾಂಗ್ ಶೂಟ್ ಮಾಡುವ ಬಗ್ಗೆ ಚರ್ಚಿಸಲಾಗುತ್ತಿದೆಯಂತೆ. ಈ ಬಗ್ಗೆ ಇನ್ನು ಚಿತ್ರತಂಡದ ಸದಸ್ಯರಿಗೆ ಹೆಚ್ಚಿನ ಮಾಹಿತಿ ಇಲ್ಲ. ಸಾಂಗ್ ಶೂಟ್ ಮಾಡಲು ಚಿಂತಿಸುತ್ತಿರುವುದು ನಿಜ. ಆದರೆ ಎಲ್ಲಿ, ಯಾವಾಗ ಎನ್ನುವ ಬಗ್ಗೆ ಐಡಿಯಾ ಇಲ್ಲ ಎಂದು ಚಿತ್ರತಂಡದ ಸದಸ್ಯರೇ ಹೇಳಿದ್ದಾರೆ.
ತಮ್ಮ ಸಂಗೀತದ ಮೂಲಕ ಮೋಡಿ ಮಾಡಿದ ಅರ್ಜುನ್ ಜನ್ಯಾ ಇದೇ ಮೊದಲ ಬಾರಿಗೆ ಕ್ಯಾಮರಾ ಹಿಂದೆ ನಿಂತು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಣ್ಣ ಸಣ್ಣ ಟೀಸರ್ ಬಿಟ್ಟು ಕುತೂಹಲ ಮೂಡಿಸಿದ್ದಾರೆ. ಮೊದಲ ಪ್ರಯತ್ನದಲ್ಲೇ ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅವರನ್ನು ಒಟ್ಟಿಗೆ ಸೇರಿಸುವ ಸಾಹಸ ಮಾಡಿದ್ದಾರೆ.


Click it and Unblock the Notifications











