'ಧೂಮ್-4' ಚಿತ್ರದಲ್ಲಿ ಸೌತ್ ಸೂಪರ್ ಸ್ಟಾರ್? ಕ್ರೇಜಿ ನ್ಯೂಸ್ ವೈರಲ್

ಬಾಲಿವುಡ್ ಕ್ರೇಜಿ ಫ್ರಾಂಚೈಸಿ 'ಧೂಮ್'. ಈಗಾಗಲೇ ಈ ಸರಣಿಯ 3 ಸಿನಿಮಾಗಳು ಬಂದು ಪ್ರೇಕ್ಷಕರನ್ನು ರಂಜಿಸಿದೆ. ಆಮಿರ್ ಖಾನ್ ನಟಿಸಿದ್ದ ಪಾರ್ಟ್‌-3 ಅಷ್ಟಾಗಿ ಪ್ರೇಕ್ಷಕರ ಮನಗೆಲ್ಲಲಿಲ್ಲ. ಆದರೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಬಹಳ ದಿನಗಳಿಂದ ಸರಣಿಯ ಮತ್ತೊಂದು ಚಿತ್ರಕ್ಕೆ ಪ್ಲ್ಯಾನ್ ನಡೀತಿದೆ.

2004ರಲ್ಲಿ 'ಧೂಮ್' ಸಿನಿಮಾ ಬಂದು ಗೆದ್ದಿತ್ತು. ಸಂಜಯ್ ಗಡ್ವಿ ನಿರ್ದೇಶನದ ಚಿತ್ರದಲ್ಲಿ ಜಾನ್ ಅಬ್ರಹಾಂ ಹಾಗೂ ಅಭಿಷೇಕ್ ಬಚ್ಚನ್ ನಟಿಸಿದ್ದರು. 2 ವರ್ಷಗಳ ಬಳಿಕ ಸೀಕ್ವೆಲ್ ಬಂದಿತ್ತು. ಹೃತಿಕ್ ರೋಷನ್ ಹಾಗೂ ಐಶ್ ಚಿತ್ರದಲ್ಲಿ ನಟಿಸಿ ಮೋಡಿ ಮಾಡಿದ್ದರು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಬಳಿಕ 2013ರಲ್ಲಿ ಆಮೀರ್ ಖಾನ್ ಲೀಡ್ ರೋನ್‌ನಲ್ಲಿ 'ಧೂಮ್'-3 ತೆರೆಗೆ ಬಂದಿತ್ತು.

Buzz - Tamil Actor Surya is in talks to play the villain role in Dhoom-4

ಸದ್ಯ 'ಧೂಮ್-4' ಬಗ್ಗೆ ಚರ್ಚೆ ಶುರುವಾಗಿದೆ. ಈ ಬಾರಿ ಮುಖ್ಯ ಪಾತ್ರದಲ್ಲಿ ತಮಿಳು ನಟ ಸೂರ್ಯ ನಟಿಸುತ್ತಾರೆ ಎನ್ನಲಾಗ್ತಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಿಂದ ಸೂರ್ಯ ಸದ್ದು ಮಾಡುತ್ತಿದ್ದಾರೆ. 'ಸುರರೈ ಪೋಟ್ರು' ಸಿನಿಮಾ ಬಾಲಿವುಡ್ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ 'ಧೂಮ್-4' ಚಿತ್ರದಲ್ಲಿ ಪ್ರತಿನಾಯಕನ ಪಾತ್ರಕ್ಕೆ ಸೂರ್ಯ ಜೊತೆ ಚರ್ಚೆ ನಡೀತಿದೆ ಎನ್ನುವ ಗುಸುಗುಸು ಶುರುವಾಗಿದೆ.

ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ 'ಧೂಮ್-4' ಚಿತ್ರಕ್ಕೆ ಸಿದ್ಧತೆ ನಡೆಸ್ತಿದೆ. ಈಗಾಗಲೇ ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಕಳ್ಳ-ಪೊಲೀಸ್ ಆಟ ಕೇಂದ್ರವಾಗಿಟ್ಟುಕೊಂಡು 'ಧೂಮ್' ಸರಣಿ ಸಿನಿಮಾಗಳನ್ನು ಕಟ್ಟಿಕೊಡಲಾಗುತ್ತಿದೆ. ದರೋಡೆ ಮಾಡುವ ಗ್ಯಾಂಗ್, ಅವರ ಹಿಂದೆ ಬೀಳುವ ಪೊಲೀಸ್ ಪಡೆ. ಮುಂದೇನಾಗುತ್ತದೆ ಎನ್ನುವ ಕುತೂಹಲದೊಂದಿಗೆ ಕಥೆಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ.

'ಧೂಮ್' ಸರಣಿ ಚಿತ್ರಗಳಲ್ಲಿ ನಾಯಕನ ಪಾತ್ರದಷ್ಟೆ ಪ್ರತಿನಾಯಕನ ಪಾತ್ರಕ್ಕೂ ಮಹತ್ವ ಇದೆ. ನಿಜ ಹೇಳಬೇಕು ಅಂದ್ರೆ ಇಲ್ಲಿ ಕಳ್ಳನಾಗಿ ಕಾಣಿಸಿಕೊಳ್ಳುವವನೇ ನಿಜವಾದ ಹೀರೊ ಎಂದರೆ ತಪ್ಪಾಗಲ್ಲ. 'ಧೂಮ್'-2 ಚಿತ್ರದ ವಿಲನ್ ಆಗಿ ಸೂರ್ಯ ನಟಿಸುತ್ತಾರೆ ಎನ್ನುವ ವದಂತಿ ಕೇಳಿಬಂದಿದೆ. ಈಗಾಗಲೇ ಈ ಬಗ್ಗೆ ಚರ್ಚೆ ನಡೀತಿದೆ ಎಂದು ಗುಲ್ಲಾಗಿದೆ. ಆದರೆ ಇದು ಎಷ್ಟರಮಟ್ಟಿಗೆ ನಿಜ ಎನ್ನುವುದನ್ನು ಕಾದು ನೋಡಬೇಕಿದೆ.

Buzz - Tamil Actor Surya is in talks to play the villain role in Dhoom-4

ಇತ್ತೀಚೆಗೆ ಸೌತ್ ಸ್ಟಾರ್ಸ್ ಬಾಲಿವುಡ್ ಸಿನಿಮಾಗಳಲ್ಲಿ ನಟಿಸೋದು ಸರ್ವೇ ಸಾಧಾರಣ ಎನ್ನುವಂತಾಗಿಬಿಟ್ಟಿದೆ. ಹಾಗಾಗಿ ಸೂರ್ಯ 'ಧೂಮ್-4' ಚಿತ್ರದಲ್ಲಿ ನಟಿಸಿದರೂ ಅಚ್ಚರಿ ಪಡಬೇಕಿಲ್ಲ. ಸದ್ಯ ಕೇಳಿಬರುತ್ತಿರುವ ವದಂತಿ ಸುಳ್ಳು ಎಂದೇ ಕೆಲವರು ಹೇಳುತ್ತಿದ್ದಾರೆ. ಸೂರ್ಯ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ಗೆ ಎಂಟ್ರಿ ಕೊಡುವುದು ದೂರದ ಮಾತು ಎನ್ನಲಾಗ್ತಿದೆ.

ಸೂರ್ಯ ನಟನೆಯ 'ಕಂಗುವ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಬಳಿಕ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವೆಟ್ರಿಮಾರನ್ ಜೊತೆ 'ವಾಡಿವಾಸಲ್' ಎನ್ನುವ ಚಿತ್ರದಲ್ಲಿ ನಟಿಸಬೇಕಿದೆ. 'ಕಂಗುವ-2' ಕೂಡ ಮಾಡಬೇಕಿದೆ. ಇಷ್ಟು ಬ್ಯುಸಿ ಇರುವ ಸೂರ್ಯ ಬಿಟೌನ್‌ಗೆ ಹೋಗುವುದು ಕಷ್ಟದ ಮಾತು ಎಂದು ವಾದವೂ ಇದೆ.

ಈ ಹಿಂದೆ 'ಧೂಮ್- 4' ಚಿತ್ರಕ್ಕೆ ಸಲ್ಮಾನ್ ಖಾನ್ ಹೆಸರು ಕೇಳಿಬಂದಿತ್ತು. ಹಾಗಾಗಿ ಯಾರು ನಟಿಸುತ್ತಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಕಥೆ, ಚಿತ್ರಕಥೆ ಸಿದ್ಧಪಡಿಸುವ ಕೆಲಸಗಳು ನಡೀತಿದೆ ಎನ್ನಲಾಗ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಬಹುದು.

ಈಗಾಗಲೇ ಸೂರ್ಯ ಫ್ಯಾಮಿಲಿ ಸಮೇತ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಪತ್ನಿ ಜ್ಯೋತಿಕಾ ಕೂಡ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಬಾಲಿವುಡ್ ಮೇಲೆ ಸೂರ್ಯ ಫೋಕಸ್ ಇರುವುದು ನಿಜ ಎನ್ನಲಾಗ್ತಿದೆ. ಆದರೆ ಸದ್ಯಕ್ಕೆ ಯಾವುದೇ ಹಿಂದಿ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.

More from Filmibeat

English summary
Dhoom-4: south actor has been approached to play Antagonist role in the movie?
Read more about: bollywood tamil surya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X