ಛೇ.. ನಿಂತೇ ಹೋಯ್ತಾ ಸೂರಿ- ಯುವ ರಾಜ್‌ಕುಮಾರ್ ಸಿನಿಮಾ? ಅಷ್ಟಕ್ಕೂ ಆಗಿದ್ದೇನು?

ಸೆಟ್ಟೇರಿದ ಸಿನಿಮಾಗಳೆಲ್ಲಾ ತೆರೆಗೆ ಬರಲ್ಲ. ಕೆಲ ಸಿನಿಮಾಗಳು ಮಾತುಕತೆ ಹಂತದಲ್ಲೇ ನಿಂತು ಬಿಡುತ್ತವೆ. ಮುಹೂರ್ತ ನೆರವೇರಿಸಿಕೊಂಡು ನಿಂತ ಸಿನಿಮಾಗಳು ಇವೆ. ಚಿತ್ರೀಕರಣ ಶುರುವಾಗಿ ಬಳಿಕ ಬ್ರೇಕ್ ಹಾಕಿರುವ ಚಿತ್ರಗಳ ಲಿಸ್ಟ್ ಕೂಡ ದೊಡ್ಡದಿದೆ. ಇದೀಗ ದುನಿಯಾ ಸೂರಿ ನಿರ್ದೇಶನದಲ್ಲಿ ಯುವ ರಾಜ್‌ಕುಮಾರ್ ನಟಿಸಬೇಕಿದ್ದ ಸಿನಿಮಾ ಮುಂದುವರೆಯಲ್ಲ ಎನ್ನಲಾಗ್ತಿದೆ.

'ಯುವ' ಸಿನಿಮಾ ಮೂಲಕ ರಾಘಣ್ಣನ ಕಿರಿಮಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ಎಕ್ಕ' ಚಿತ್ರ ಮಾಡಿ ಗಮನ ಸೆಳೆದಿದ್ದಾರೆ. 3ನೇ ಚಿತ್ರಕ್ಕೆ ದುನಿಯಾ ಸೂರಿ ಜೊತೆ ಕೈಜೋಡಿಸಿದ್ದರು. ಇನ್ನೊಂದು ವರ್ಷದಲ್ಲಿ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಹೇಳಿತ್ತು. ಚಿತ್ರದಲ್ಲಿ ದುನಿಯಾ ವಿಜಯ್ ಮಗಳು ರಿತನ್ಯಾ ನಾಯಕಿಯಾಗಿ ಆಯ್ಕೆ ಆಗಿದ್ದರು.

Buzz Yuva Rajkumar s Next with Duniya Suri Allegedly Shelved New Film in Talks

ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಗಳು ಜಂಟಿಯಾಗಿ 'ಎಕ್ಕ' ಚಿತ್ರ ನಿರ್ಮಾಣ ಮಾಡಿದ್ದವು. ಅದೇ ರೀತಿ ಯುವ ನಟನೆಯ 3ನೇ ಚಿತ್ರಕ್ಕೂ ಕೈ ಜೋಡಿಸಿದ್ದರು. ಅಕ್ಷಯ ತೃತಿಯ ದಿನದಂದು ಸಿನಿಮಾ ಸೆಟ್ಟೇರಿತ್ತು. ಚಿತ್ರದ ಮೊದಲ ದೃಶ್ಯಕ್ಕೆ ದುನಿಯಾ ವಿಜಯ್ ಕ್ಲಾಪ್ ಮಾಡಿದ್ರೆ, ಪುನೀತ್ ರಾಜ್‌ಕುಮಾರ್ ಮಗಳು ಧೃತಿ ಕ್ಯಾಮೆರಾ ಚಾಲನೆ ಮಾಡಿದರು.

ಮೇ ತಿಂಗಳಲ್ಲಿ ಸೂರಿ- ಯುವ ಸಿನಿಮಾ ಚಿತ್ರೀಕರಣ ಆರಂಭವಾಗುತ್ತದೆ ಎಂದು ಹೇಳಲಾಗಿತ್ತು. ಸೆಪ್ಟೆಂಬರ್ ಬಂದರೂ ಚಿತ್ರೀಕರಣಕ್ಕೆ ಚಿತ್ರತಂಡ ಹೋಗಲಿಲ್ಲ. ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಳವಾಗಿ ಪೂಜೆ ಸಲ್ಲಿಸಿ ಸಿನಿಮಾ ಆರಂಭಿಸಿದ್ದರು. ಸೂರಿ ರಾ ಮೇಕಿಂಗ್, ಯುವ ಖಡಕ್ ಆಕ್ಟಿಂಗ್ ಸಿಂಕ್ ಆಗಿಬಿಟ್ರೆ ಬಾಕ್ಸಾಫೀಸ್ ಶೇಕ್ ಆಗುತ್ತದೆ ಎಂದೇ ಅಭಿಮಾನಿಗಳು ಭಾವಿಸಿದ್ದರು.

Buzz Yuva Rajkumar s Next with Duniya Suri Allegedly Shelved New Film in Talks

ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಹಾಗೂ 'ಅಣ್ಣಾಬಾಂಡ್' ಚಿತ್ರಗಳಿಗೆ ಸೂರಿ ಆಕ್ಷನ್ ಕಟ್ ಹೇಳಿದ್ದರು. ಶಿವಣ್ಣನ ಜೊತೆ 'ಕಡ್ಡಿಪುಡಿ' ಹಾಗೂ 'ಟಗರು' ಚಿತ್ರಗಳಿಗೆ ಕೆಲಸ ಮಾಡಿದ್ದರು. ದೊಡ್ಮನೆಯ ಮತ್ತೊಬ್ಬ ನಟನ ಜೊತೆ ಕೈಜೋಡಿಸುತ್ತಾರೆ ಎಂದಾಗಲೇ ನಿರೀಕ್ಷೆ ಗರಿಗೆದರಿತ್ತು. ಚರಣ್ ರಾಜ್ ಸಂಗೀತ, ಶೇಖರ್ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ ಎನ್ನಲಾಗಿತ್ತು. ಚಿತ್ರಕ್ಕೆ 'ಕಾಗೆ ಬಂಗಾರ-3' ಎಂಬ ಟೈಟಲ್ ಫಿಕ್ಸ್ ಆಗಿದೆ ಎನ್ನುವ ಊಹಾಪೋಹ ಇತ್ತು.

ಯುವ-ಸೂರಿ ಸಿನಿಮಾ ನಿಂತುಹೋಗಿದೆ ಎನ್ನುವ ಗುಸುಗುಸು ಗಾಂಧಿನಗರದಲ್ಲಿ ಶುರುವಾಗಿದೆ. ಸರಿಯಾಗಿ ಕಥೆ ಸಿದ್ಧವಾಗದೇ ಚಿತ್ರಕ್ಕೆ ಚಾಲನೆ ಕೊಟ್ಟಿದ್ದೇ ಇದಕ್ಕೆ ಕಾರಣ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸೂರಿ ಬದಲು ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ಯುವ ನಟಿಸುತ್ತಾರೆ ಎನ್ನುವ ಮತ್ತೊಂದು ವದಂತಿ ಕೂಡ ಹರಿದಾಡ್ತಿದೆ. ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಸೂರಿ ನಿರ್ದೇಶನದಲ್ಲಿ ಯುವ ನಟಿಸೋ ಸಿನಿಮಾ ನಿಂತಿ ಹೋಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಸದ್ಯಕ್ಕೆ ಚಿತ್ರ ಕೈಬಿಟ್ಟಿದ್ದು ಮುಂದಿನ ದಿನಗಳಲ್ಲಿ ಪುನರಾರಂಭ ಆಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದಕ್ಕೂ ಮುನ್ನ ಯುವ ರಾಜ್‌ಕುಮಾರ್ ಬೇರೆ ಒಂದು ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಊಹಾಪೋಹ ಇದೆ. ಶೀಘ್ರದಲ್ಲೇ ಇದಕ್ಕೆಲ್ಲಾ ಸ್ಪಷ್ಟನೆ ಸಿಗಲಿದೆ.

ರೋಹಿತ್ ಪದಕಿ ನಿರ್ದೇಶನದಲ್ಲಿ ಯುವ ನಟಿಸಿದ್ದ 'ಎಕ್ಕ' ಸಿನಿಮಾ ಜುಲೈ 18ಕ್ಕೆ ತೆರೆಗೆ ಬಂದಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ತಕ್ಕ ಮಟ್ಟಿಗೆ ಸಿನಿಮಾ ನೋಡುಗರನ್ನು ರಂಜಿಸುತ್ತಿತ್ತು. ಆದರೆ 'ಸು ಫ್ರಮ್ ಸೋ' ಆರ್ಭಟ ಶುರುವಾದ ಬಳಿಕ 'ಎಕ್ಕ' ಆಟ ನಡೆಯಲಿಲ್ಲ. ಇನ್ನೊಂದು ವಾರದಲ್ಲಿ ಈ ಸಿನಿಮಾ ಓಟಿಟಿಗೆ ಬರುವ ನಿರೀಕ್ಷೆ ಇದೆ.

More from Filmibeat

English summary
Duniya Suri–Yuva Rajkumar Movie Halted; Industry Awaits Official Word
Read more about: yuva rajkumar suri sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X