»   » ಸಿನಿಮಾ ಗುಣಮಟ್ಟ ಸಮಿತಿ ವಿಸರ್ಜನೆ: ಬಿ.ವಿ. ಕಾರಂತ್‌ ಮನೆಗೆ

ಸಿನಿಮಾ ಗುಣಮಟ್ಟ ಸಮಿತಿ ವಿಸರ್ಜನೆ: ಬಿ.ವಿ. ಕಾರಂತ್‌ ಮನೆಗೆ

Subscribe to Filmibeat Kannada

ಬೆಂಗಳೂರು: ರಾಜ್ಯ ಸಿನಿಮಾ ಗುಣಮಟ್ಟ ಸಮಿತಿ ವಿಸರ್ಜನೆಯಾಗಿದೆ. ಬಿ.ವಿ. ಕಾರಂತರು ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಎರಡೂ ಸುದ್ದಿಗಳು ಸ್ಯಾಂಡಲ್‌ವುಡ್‌ (ಗಾಂಧೀನಗರ) ಅನ್ನು ಕಂಗೆಡಿಸಿವೆ. ಇನ್ನು ಮುಂದೆ ಸಬ್ಸಿಡಿ ಇಲ್ವಂತೆ ಎಂಬ ಮಾತುಗಳೂ, ಎಲ್ಲಾ ಚಿತ್ರಕ್ಕೂ ಸಬ್ಸಿಡಿ ಕೊಡ್ತಾರಂತೆ. ಕಮಿಟಿಯೇ ಇರೋಲ್ವಂತೆ ಎಂಬ ಸುದ್ದಿಗಳೂ, ಅವಾರ್ಡ್‌ ಸಿನಿಮಾಕ್ಕೆ ಮಾತ್ರ ಸಬ್ಸಿಡಿ ಕೊಡ್ತಾರಂತೆ ಎಂಬ ವದಂತಿಗಳೂ ಸ್ಯಾಂಡಲ್‌ವುಡ್‌ ತುಂಬ ಹಬ್ಬಿವೆ.

ಕಾರಂತರು ರಾಜೀನಾಮೆ ಕೊಟ್ಟಿದ್ದಾದರೂ ಏಕೆ? ಅವರ ಅನಾರೋಗ್ಯವೇ ಕಾರಣ ಎಂಬ ಮಾತನ್ನು ಸರಕಾರ ಹೇಳುತ್ತದೆ. ಆದರೆ, ಕಾರಂತರು ಆರೋಗ್ಯವಾಗಿದ್ದಾರೆ. ಅಷ್ಟೇನೂ ಆರೋಗ್ಯ ಹದಗೆಟ್ಟಿಲ್ಲ ಎಂಬ ಮಾತನ್ನು ಕಾರಂತರನ್ನು ಇತ್ತೀಚೆಗೆ ಕಂಡವರು ಹೇಳುತ್ತಾರೆ. ಅಂತೂ ರಾಜೀನಾಮೆ ಪ್ರಸಂಗದ ಹಿಂದೆ ನಿಗೂಢವೊಂದು ಇದೆ ಅನ್ನುವುದನ್ನು ತಳ್ಳಿಹಾಕುವಂತಿಲ್ಲ. ಕಾರಂತರ ಆಪ್ತರ ಪ್ರಕಾರ ‘ಕಾರಂತರಿಗೆ ತುಂಬ ಬೇಸವಾಗಿದೆ. ರಾಜಕೀಯದಿಂದ ಅವರು ನೊಂದಿದ್ದಾರೆ. ಹೀಗಾಗಿ ರಾಜೀನಾಮೆ ಕೊಡಲೇಬೇಕಾದ ಸ್ಥಿತಿಗೆ ಅವರು ತಲುಪಿದ್ದಾರೆ.’

ರಾಜಕೀಯ ಏನು ಎನ್ನೋದು ಸದ್ಯಕ್ಕೆ ರಹಸ್ಯ.

ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada