For Quick Alerts
ALLOW NOTIFICATIONS  
For Daily Alerts

'ಸೆಕ್ಸಿ ಬೀಚ್ ಬಾಡಿ' ತಾರೆಗಳ ಕಿಕ್ಕೇರಿಸುವ ಚಿತ್ರಗಳು

By ರವಿಕಿಶೋರ್
|

ಸಮುದ್ರ ತೀರ ಎಂದರೆ ಯಾರಿಗೆ ಇಷ್ಟವಿರಲ್ಲ ಹೇಳಿ. ಸಮುದ್ರದ ಅಲೆಗಳನ್ನು ವೀಕ್ಷಿಸುತ್ತಾ, ಅದರ ವಿಹಂಗಮ ನೋಟವನ್ನು ಕಣ್ಣು ತುಂಬಿಕೊಳ್ಳುತ್ತಾ ಮೈಮರೆಯುವುದೇ ಒಂದು ಮಜಾ. ಅದೇ ರೀತಿ ಬೀಜ್ ಫ್ಯಾಷನ್ ಸಹ ಅಷ್ಟೇ ಉಲ್ಲಾಸಭರಿತವಾಗಿರುತ್ತದೆ.

ಬೀಚ್ ಗೆ ಬರುವ ಲಲನೆಯರಲ್ಲಿ ಬಹುತೇಕರು ಸಾಮಾನ್ಯವಾಗಿ ಬಿಕಿನಿ, ಷಾರ್ಟ್ಸ್ ನಲ್ಲಿ ಬರುತ್ತಾರೆ. ಇದಿಷ್ಟೇ ಅಲ್ಲದೆ ಸನ್ ಬಾತ್ ಮತ್ತಷ್ಟು ಆನಂದ ಉಲ್ಲಾಸ ನೀಡುತ್ತದೆ. ಇನ್ನೇನು ಬೇಸಿಗೆ ಬರುತ್ತಿದೆ. ಬೀಚ್ ನಲ್ಲೂ ವಾತಾವರಣ ಬಿಸಿಯೇರುತ್ತಿದೆ.

ಈ ಬೀಚ್ ಗೆ ಬರುವವರಲ್ಲಿ ಸಿನಿಮಾ ತಾರೆಗಳೂ ದಂಡಿಯಾಗಿಯೇ ಇರುತ್ತಾರೆ ಬಿಡಿ. ಅವರ ಮೈಮಾಟ ನೋಡಿದವರು ಅರೆಕ್ಷಣ ಮೂಕವಾಗುವುದಂತೂ ಖಂಡಿತ. ಇಷ್ಟಕ್ಕೂ ಈ ರೀತಿಯ ಸುಂದರ ಶರೀರಾಕೃತಿಗೆ ಇವರೇನು ತಿಂತಾರೆ, ಇನ್ನೇನು ಮಾಡುತ್ತಾರೆ.

ಆದರೆ ಎಲ್ಲ ಸೆಲೆಬ್ರಿಟಿಗಳ ದೇಹಾಕೃತಿಯೂ ಬಿಕಿನಿಗೆ, ಶಾರ್ಟ್ಸ್ ಗೆ ಸಹಕರಿಸಲ್ಲ. ಪರ್ಫೆಕ್ಟ್ ಬೀಚ್ ದೇಹ ಹೊಂದಿರುವ, ಅವರ ಶರೀರಾಕೃತಿ ಬಗ್ಗೆ, ಅವರ ಖಾಸಗಿ ಆಸ್ತಿ ಪಾಸ್ತಿ ಬಗ್ಗೆ, ಅದನ್ನು ಜತನದಿಂದ ಕಾಪಾಡಿಕೊಂಡು ಬರಲು ಸಾಕಷ್ಟು ಕಸರತ್ತು ಮಾಡುತ್ತಿರುತ್ತಾರೆ.

ಇಲ್ಲಿವೆ ನೋಡಿ ಕಾಟಿ ಪೆರ್ರಿ, ರಿಹಾನ್ನ, ಬಯೋನ್ಸ್ ಹಾಗೂ ಕಿಮ್ ಕರ್ದಾಷಿಯನ್ ಅವರ ದೇಹಸಿರಿ ಬಿಕಿನಿಗೆ, ಶಾರ್ಟ್ಸ್ ಗೆ ಹೇಳಿಮಾಡಿಸಿದಂತಿದೆ. ಇವರೆಲ್ಲಾ ನೋಡಲು ಆಕರ್ಷಕವಾಗಿ ಕಾಣಲು ಇದೂ ಒಂದು ಕಾರಣ.

ಕಣ್ಮನ ತುಂಬುವ ಕಿಮ್ ಕರ್ದಾಷಿಯನ್

ಕಣ್ಮನ ತುಂಬುವ ಕಿಮ್ ಕರ್ದಾಷಿಯನ್

ಕಿಮ್ ಕರ್ದಾಷಿಯನ್ ಅವರನ್ನು ಬೀಚ್ ನಲ್ಲಿ ಅದರಲ್ಲೂ ಬಿಕಿನಿಯಲ್ಲಿ ನೋಡಲು ಎರಡು ಕಣ್ಣು ಸಾಲದು. ಇದೇ ಮೊದಲ ಬಾರಿಗೆ ಆಕೆ ತಾಯಿಯಾಗುತ್ತಿದ್ದಾರೆ. ಆದರೂ ಬೀಚ್ ಡ್ರೆಸ್ ನಲ್ಲಿ ಮಾತ್ರ ಕಮನೀಯ.

ಎವಾ ಲಾಂಗೋರಿಯಾ ಲಗೋರಿ

ಎವಾ ಲಾಂಗೋರಿಯಾ ಲಗೋರಿ

ನೋಟದಲ್ಲೇ ಲಗೋರಿ ಆಡಿಸುವ ಆಕರ್ಷಣೆ ಎವಾ ಲಾಂಗೋರಿಯಾಗೆ ಇದೆ. ಬೆಸ್ಟ್ ಬೀಚ್ ಬಾಡಿ ಹೊಂದಿರುವ ತಾರೆಗಳಲ್ಲಿ ಈಕೆಯೂ ಒಬ್ಬರು.

ಮದುವೆಯಾದರೂ ಮಾಸದ ಸೌಂದರ್ಯ

ಮದುವೆಯಾದರೂ ಮಾಸದ ಸೌಂದರ್ಯ

ಈಕೆಯ ಹೆಸರು ಬಿಯಾನ್ಸ್. ಮದುವೆಯಾಗಿ, ಮಗುವಾದ ಬಳಿಕವೂ ತಮ್ಮ ಸೌಂದರ್ಯವನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದ್ದಾರೆ. ಈಗಲೂ ನಿಯತಕಾಲಿಕೆಗೆ ಬಿಕಿನಿ ಫೋಟೋ ನೀಡುತ್ತಾ ಗಮನಸೆಳೆಯುತ್ತಿದ್ದಾರೆ.

ಪರ್ಫೆಕ್ಟ್ ಬೀಚ್ ಬಾಡಿ ರಿಹಾನ್ನ

ಪರ್ಫೆಕ್ಟ್ ಬೀಚ್ ಬಾಡಿ ರಿಹಾನ್ನ

ಟ್ವಿಟ್ಟರ್ ನಲ್ಲಿ ಆಗಾಗ ತಮ್ಮ ಅರೆನಗ್ನ ಫೋಟೋಗಳನ್ನು ಹಾಕುತ್ತಾ ಸುದ್ದಿ ಮಾಡುವ ರಿಹಾನ್ನ ಅವರದು ಪರ್ಫೆಕ್ಟ್ ಬೀಚ್ ಬಾಡಿ. ಬಿಕಿನಿ ತೊಟ್ಟರೆ ಯಾರಿಗೇನು ಕಮ್ಮಿ ಇರಲ್ಲ ಬಿಡಿ.

ವಯಸ್ಸು ಮೀರಿದರೂ ಕರಗದ ಆಕರ್ಷಣೆ

ವಯಸ್ಸು ಮೀರಿದರೂ ಕರಗದ ಆಕರ್ಷಣೆ

ಡೆಮಿ ಮೂರ್ ವಯಸ್ಸು ಜಾರುತ್ತಿದ್ದರೂ ಆಕರ್ಷಣೆ ಮಾತ್ರ ಹಾಗೆಯೇ ಉಳಿಸಿಕೊಂಡಿದ್ದಾರೆ. ತಮ್ಮ ದೇಹಸಿರಿಯನ್ನು ನಯ, ನಾಜೂಕಾಗಿ ಕಾಪಾಡಿಕೊಂಡು ಬಂದಿರುವ ಈಕೆ ಈಗಲೂ ಬೀಚ್ ಗಳಲ್ಲಿ ಈ ರೀತಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಬಿಕಿನಿಗೆ ಕೇರಾಫ್ ಅಡ್ರಸ್ ಮಿರಾಂಡಾ ಖೇರ್‍

ಬಿಕಿನಿಗೆ ಕೇರಾಫ್ ಅಡ್ರಸ್ ಮಿರಾಂಡಾ ಖೇರ್‍

ಬಿಕಿನಿಗೆ ಹೇಳಿ ಮಾಡಿಸಿದ ಶರೀರಾಕೃತಿ ಈಕೆಯದು. ಬಿಕಿನಿ, ಶಾರ್ಟ್ಸ್ ತೊಟ್ಟಿದ್ದಾರೆಂದರೆ ಎಲ್ಲರ ಕಣ್ಣು ಈಕೆಯ ಮೇಲೆ. ಅಷ್ಟರ ಮಟ್ಟಿಗೆ ಈಕೆ ಜನಪ್ರಿಯವಾಗಿದ್ದಾರೆ.

ಅತ್ಯದ್ಭುತ ಸೌಂದರ್ಯ ಲಹರಿ ಕೇಟ್ ಆಪ್ಟನ್

ಅತ್ಯದ್ಭುತ ಸೌಂದರ್ಯ ಲಹರಿ ಕೇಟ್ ಆಪ್ಟನ್

ಅತ್ಯದ್ಭುತ ಬಾಡಿ ಶೇಪ್ ಹೊಂದಿರುವವರಲ್ಲಿ ಕೇಟ್ ಆಪ್ಟನ್ ಸಹ ಒಬ್ಬರು. ಫೋಟೋ ನೋಡಿದರೇನೇ ಅರ್ಥವಾಗುತ್ತದೆ..ಈಕೆಯ ಚೆಲುವಿಗೆ ಮಾರುಹೋಗದವರುಂಟೆ.

ಜೆನ್ನಿಫರ್ ಅನಿಸ್ಟನ್ ಸ್ಟೈಲಿಶ್ ಬಾಡಿ

ಜೆನ್ನಿಫರ್ ಅನಿಸ್ಟನ್ ಸ್ಟೈಲಿಶ್ ಬಾಡಿ

ಸ್ಟೈಲಿಶ್ ಬಾಡಿ ಹೊಂದಿರುವವರಲ್ಲಿ ಜೆನ್ನಿಫರ್ ಅನಿಸ್ಟನ್ ಒಬ್ಬರು. ಈಕೆಗೂ ಪರ್ಫೆಕ್ಟ್ ಬೀಚ್ ಬಾಡಿ ಇದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ರಿಚರ್ಡ್ ಗೇರ್ ಮಾಜಿ ಪತ್ನಿ

ರಿಚರ್ಡ್ ಗೇರ್ ಮಾಜಿ ಪತ್ನಿ

ರಿಚರ್ಡ್ ಗೇರ್ ಮಾಜಿ ಪತ್ನಿ. ಹಾಲಿವುಡ್ ತಾರೆ ಸಿಂಡಿ ಕ್ರಾಫೋರ್ಡ್. ಜನಪ್ರಿಯ ಮಾಡೆಲ್. ಈಕೆಯ ಪ್ರಮುಖ ಆಕರ್ಷಣೆ ತೊಂಡೆಹಣ್ಣಿನಂತ ತುಟಿಗಳು. ಈಕೆಯ ಶರೀರಾಕೃತಿಯೋ ಪರ್ಫೆಕ್ಟ್ ಆಗಿದೆ.

ಝುಂ ಎನ್ನಿಸುವ ಜೆನ್ನಿಫರ್ ಲಾರೆನ್ಸ್

ಝುಂ ಎನ್ನಿಸುವ ಜೆನ್ನಿಫರ್ ಲಾರೆನ್ಸ್

ಮತ್ತೊಬ್ಬ ಹಾಲಿವುಡ್ ತಾರೆ. ಶಾರ್ಟ್ಸ್ ನಲ್ಲಿ, ಬಿಕಿನಿ ಡ್ರೆಸ್ ನಲ್ಲಿ ತಮ್ಮ ಅಭಿಮಾನಿಗಳನ್ನು ಸೆಳೆಯುತ್ತಿರುವ ತಾರೆ.

English summary
Beach fashion has always been tempting. You can wear sexy bikinis or shorts and take sun bath. Beach wear is the upcoming thing as summer is around. But, when we think about hitting the beach, we get shy or confused. Very few women have got the perfect body to flaunt on beach.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more