ಅಂಬಿ ಮಗನ ಚೊಚ್ಚಲ ಚಿತ್ರದಲ್ಲಿ ಮತ್ತೊಂದು ಟ್ವಿಸ್ಟ್.!

By Bharath Kumar

Recommended Video

ಅಂಬಿ ಮಗನ ಚೊಚ್ಚಲ ಚಿತ್ರದಲ್ಲಿ ಮತ್ತೊಂದು ಟ್ವಿಸ್ಟ್.! | Filmibeat Kannada

ರೆಬಲ್ ಸ್ಟಾರ್ ಅಂಬರೀಷ್ ಅವರ ಮಗನ ಚಿತ್ರಕ್ಕೆ ಎಲ್ಲ ಸಿದ್ದತೆಗಳು ನೆರವೇರುತ್ತಿದ್ದು, ಅಂತಿಮ ಹಂತದಲ್ಲಿ ಮಹತ್ವದ ಬದಲಾವಣೆ ಆಗಿದೆ. ಈ ಮೊದಲೇ ಸುದ್ದಿಯಾಗಿರುವಂತೆ ಸಂದೇಶ್ ನಾಗರಾಜ್ ಅವರ ಪ್ರೊಡಕ್ಷನ್ ನಲ್ಲಿ ಅಂಬಿ ಮಗನ ಎಂಟ್ರಿ ಆಗುವುದು ಖಚಿತ ಎನ್ನಲಾಗಿದೆ. ನಿರ್ದೇಶಕರು ಕೂಡ ಫಿಕ್ಸ್ ಆಗಿದ್ದರು.

ಆದ್ರೀಗ, ಅಭಿಷೇಕ್ ಅಭಿನಯಿಸಿರುವ ಮೊದಲ ಚಿತ್ರಕ್ಕೆ ನಿರ್ದೇಶಕರು ಬದಲಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಮೂಲಗಳ ಪ್ರಕಾರ, ನಿರ್ದೇಶಕ ಪವನ್ ಒಡೆಯರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿತ್ತು. ಈಗ ಅವರ ಜಾಗಕ್ಕೆ ಚೇತನ್ ಕುಮಾರ್ ಬಂದಿದ್ದಾರೆ ಎನ್ನಲಾಗಿದೆ.

ಪವನ್ ಒಡೆಯರ್ ಎರಡು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಮತ್ತೊಂದೆಡೆ ಪುನೀತ್ ರಾಜ್ ಕುಮಾರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ, ಎರಡು ಕಡೆ ಬ್ಯಾಲೆನ್ಸ್ ಮಾಡಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ಚೇತನ್ ಕುಮಾರ್ ಅವರನ್ನ ಕರೆತರಲಾಗಿದೆ ಎಂದು ಹೇಳಲಾಗಿದೆ.

Chethan kumar to direct Ambareesh’s son film

'ಬಹುದ್ದೂರ್', 'ಭರ್ಜರಿ' ಚಿತ್ರಗಳ ನಂತರ ಚೇತನ್ ಕುಮಾರ್ ಮತ್ತಷ್ಟು ಬ್ಯುಸಿಯಾಗಿದ್ದು, ದರ್ಶನ್ ಅಭಿನಯಿಸುತ್ತಿರುವ 51ನೇ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಅದರ ಜೊತೆಗೆ ಶಿವರಾಜ್ ಕುಮಾರ್ ಅಭಿನಯದ 'ಎಸ್.ಆರ್.ಕೆ' ಹಾಗೂ ಗಣೇಶ್ ಅಭಿನಯದ 'ಆರೇಂಜ್' ಚಿತ್ರದಲ್ಲೂ ಚೇತನ್ ಕೆಲಸ ಮಾಡುತ್ತಿದ್ದಾರೆ.

Chethan kumar to direct Ambareesh’s son film

ಅಂದ್ಹಾಗೆ, ಅಂಬರೀಷ್ ಮಗನ ಮೊದಲ ಚಿತ್ರಕ್ಕೆ 'ಜಲೀಲಾ' ಎಂದು ಹೆಸರಿಟ್ಟಿದ್ದು, ಎಲ್ಲ ಅಂದುಕೊಂಡಂತೆ ಆದ್ರೆ, ಇದೇ ವರ್ಷ ಸಿನಿಮಾ ಸೆಟ್ಟೇರಲಿದೆ.

More from Filmibeat

English summary
News about Ambareesh’s son Abhishek Gowda being launched under Sandesh Productions has been around for some time now, and it has taken a curious turn.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X