ಒಂದೇ ಚಿತ್ರದಲ್ಲಿ ಪ್ರಭಾಸ್, ಚಿರು ಹಾಗೂ ಮಮ್ಮುಟ್ಟಿ? ಬಾಕ್ಸಾಫೀಸ್ ರೆಕಾರ್ಡ್ಸ್ ಉಡೀಸ್
ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಮಲ್ಟಿಸ್ಟಾರರ್ ಸಿನಿಮಾಗಳ ಪ್ರಯತ್ನವೂ ನಡೀತಿದೆ. ಬೇರೆ ಬೇರೆ ಭಾಷೆಯ ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡುವ ಲೆಕ್ಕಾಚಾರ ನಡೀತಿದೆ. ಬಾಲಿವುಡ್ ಸ್ಟಾರ್ಸ್ ಕೂಡ ಸೌತ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಭಾರತೀಯ ಚಿತ್ರರಂಗದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಎನ್ನುವುದು ಗೊತ್ತೇಯಿದೆ. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಚಿತ್ರಗಳಿಂದ ದೇಶ ವಿದೇಶಗಳಲ್ಲಿ ಪ್ರಭಾಸ್ ಅಭಿಮಾನಿಗಳ ಸೃಷ್ಟಿಸಿಕೊಂಡರು. ಉತ್ತರ ಭಾರತದ ಪ್ರೇಕ್ಷಕರಿಗೆ ಪ್ರಭಾಸ್ ಅಚ್ಚುಮೆಚ್ಚು. ಇದೇ ಕಾರಣಕ್ಕೆ ಯಂಗ್ ರೆಬಲ್ ಸ್ಟಾರ್ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೇ ನಟಿಸುವಂತಾಗಿದೆ.

'ಬಾಹುಬಲಿ'-2 ಬಳಿ ಪ್ರಭಾಸ್ ನಟಿಸಿದ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡಲಿಲ್ಲ. 3 ಸಿನಿಮಾಗಳ ಸೋಲಿನ ಬಳಿಕ ಕೊನೆಗೆ 'ಸಲಾರ್' ಚಿತ್ರ ಮಾಡಿ ಗೆದ್ದರು. ಇದೀಗ ಮತ್ತೆರಡು ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಮಾರುತಿ ನಿರ್ದೇಶನದ 'ದಿ ರಾಜಾ ಸಾಬ್' ಸಿನಿಮಾ ಚಿತ್ರೀಕರಣ ಬಹುತೇಖ ಮುಕ್ತಾಯವಾಗಿದೆ. ಹನು ರಾಘವಪುಡಿ ನಿರ್ದೇಶನದ ಇನ್ನು ಹೆಸರಿಡದ ಹೊಸ ಚಿತ್ರದಲ್ಲಿ ಡಾರ್ಲಿಂಗ್ ನಟಿಸುತ್ತಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 'ಸಲಾರ್'-2 ಚಿತ್ರದಲ್ಲೂ ಪ್ರಭಾಸ್ ನಟಿಸಬೇಕಿದೆ. 'ಕಲ್ಕಿ 2898 AD' ಸಿನಿಮಾ ಸೀಕ್ವೆಲ್ ಕೂಡ ಬರಬೇಕಿದೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಮದುವೆ ಆಗುವ ವಿಚಾರವನ್ನು ಕೂಡ ಡಾರ್ಲಿಂಗ್ ಮರೆತುಬಿಟ್ಟಿದ್ದಾರೆ. ಇದೆಲ್ಲದರ ನಡುವೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಎನ್ನುವ ಚಿತ್ರದಲ್ಲಿ ಕೂಡ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
'ಅರ್ಜುನ್ ರೆಡ್ಡಿ', 'ಕಬೀರ್ ಸಿಂಗ್' ಹಾಗೂ 'ಅನಿಮಲ್' ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಸಂದೀಪ್ ಕೊಟ್ಟಿಕೊಟ್ಟಿದ್ದಾರೆ. ಕಳೆದ ಬಂದ 'ಅನಿಮಲ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬಳಿಕ ಪ್ರಭಾಸ್ ಜೊತೆ 'ಸ್ಪಿರಿಟ್' ಎನ್ನುವ ಸಿನಿಮಾ ಮಾಡುವುದಾಗಿ ಸಂದೀಪ್ ಹೇಳಿದ್ದಾರೆ. ಚಿತ್ರದಲ್ಲಿ ಯಂಗ್ ರೆಬಲ್ ಸ್ಟಾರ್‌ನ ಪೊಲೀಸ್ ಆಫೀಸರ್ ಆಗಿ ತೋರಿಸ್ತೀನಿ ಎಂದಿದ್ದಾರೆ.

'ಸ್ಪಿರಿಟ್' ಸಿನಿಮಾ ಇನ್ನು ಶುರುವಾಗಿಲ್ಲ. ಅಧಿಕೃತವಾಗಿ ಸಿನಿಮಾ ಘೋಷಣೆ ಕೂಡ ಆಗಿಲ್ಲ. ಇದೀಗ ಚಿತ್ರದ ಬಗ್ಗೆ ಕ್ರೇಜಿ ನ್ಯೂಸ್‌ವೊಂದು ವೈರಲ್ ಆಗುತ್ತಿದೆ. ಚಿತ್ರದಲ್ಲಿ ತೆಲುಗು ನಟ ಚಿರಂಜೀವಿ ಹಾಗೂ ಮಲಯಾಳಂ ನಟ ಮಮ್ಮಟಿ ಕೂಡ ನಟಿಸುತ್ತಾರೆ ಎಂದು ಗುಲ್ಲಾಗಿದೆ. ಪ್ರಮುಖ ಪಾತ್ರವೊಂದರಲ್ಲಿ ಕರೀನಾ ಕಪೂರ್ ಸಹ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇಲ್ಲ.
ಚಿರಂಜೀವಿ, ಮಮ್ಮುಟಿ, ಕರೀನಾ ಎಲ್ಲರೂ ಒಬ್ಬರಿಗಿಂತ ಒಬ್ಬರು ಅದ್ಭುತ ಕಲಾವಿದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಭಿಮಾನಿಗಳಿರುವ ತಾರೆಯರು. ಇವರೆಲ್ಲಾ ಒಟ್ಟಿಗೆ ನಟಿಸೋಕೆ ಸಾಧ್ಯಾನಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ನಿರ್ದೇಶಕರು ಮನಸ್ಸು ಮಾಡಿ ಒಳ್ಳೆ ಕಥೆ, ಪಾತ್ರ ಪೋಷಣೆ ಮಾಡಿದರೆ ಕಲಾವಿದರು ನಟಿಸೋಕೆ ಒಪ್ಪುತ್ತಾರೆ. ಸಂದೀಪ್ ರೆಡ್ಡಿ ವಂಗಾ ನಿಜಕ್ಕೂ ಇಂತಾದೊಂದು ಪ್ರಯತ್ನ ಮಾಡ್ತಾರಾ? ಅಥವಾ ಇದು ಬರೀ ಗಾಸಿಪ್ ಮಾತ್ರನಾ? ಎನ್ನುವುದನ್ನು ಕಾದು ನೋಡಬೇಕಿದೆ.
ಈ ಹಿಂದೆ 'ಟಾಕ್ಸಿಕ್' ಚಿತ್ರದಲ್ಲಿ ಕರೀನಾ ಕಪೂರ್ ನಟಿಸುತ್ತಾರೆ ಎಂದು ಗುಲ್ಲಾಗಿತ್ತು. ಕೊನೆಗೆ ನಯನತಾರ ಆ ಪಾತ್ರಕ್ಕೆ ಆಯ್ಕೆ ಆಗಿದ್ದರು. ಇನ್ನು ನಟ ಚಿರಂಜೀವಿ 'ವಿಶ್ವಂಭರ' ಎನ್ನುವ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮಮ್ಮುಟಿ ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಕೈಯಲ್ಲಿ ಈಗಾಗಲೇ 4 ಸಿನಿಮಾಗಳಿವೆ. 'ಸ್ಪಿರಿಟ್' ಚಿತ್ರದಲ್ಲಿ ನಟಿಸುವ ಬಗ್ಗೆ ಅವರು ಇನ್ನು ಮಾತನಾಡಿಲ್ಲ.


Click it and Unblock the Notifications











