For Quick Alerts
  ALLOW NOTIFICATIONS  
  For Daily Alerts

  ತಮಿಳು ಸಿನಿಮಾದ ರಿಮೇಕ್ ನಲ್ಲಿ ನಟಿಸಲು ಇಷ್ಟೊಂದು ಕೋಟಿ ಸಂಭಾವನೆ ಪಡೆಯುತ್ತಿದ್ದಾರಾ ಚಿರಂಜೀವಿ?

  |

  ಸದ್ಯ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದ ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ 150ನೇ ಸಿನಿಮಾ 'ಖೈದಿ ನಂಬರ್ 50' ಸಿನಿಮಾ ಮೂಲಕ ಮತ್ತೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಆ ನಂತರ ಚಿರಂಜೀವಿ ಅಭಿನಯದ ಸಿನಿಮಾಗಳು ದೊಡ್ಡ ಮಟ್ಟಕ್ಕೆ ಹಿಟ್ ಆಗುತ್ತಿವೆ. ರಿಮೇಕ್ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿರುವ ಚಿರಂಜೀವಿ ಇದೀಗ ತಮಿಳಿನ ಸೂಪರ್ ಹಿಟ್ ವೇದಾಲಂ ಸಿನಿಮಾದ ರಿಮೇಕ್ ನಲ್ಲಿ ಅಭಿನಯಿಸು ಸಜ್ಜಾಗಿದ್ದಾರೆ.

  ನಟ ಚಿರಂಜೀವಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ಮೆಗಾಸ್ಟಾರ್ ಪಡೆಯುತ್ತಿರುವ ಸಂಭಾವನೆ ವಿಚಾರ ಈಗ ಚರ್ಚೆಯಾಗುತ್ತಿದೆ. ದಕ್ಷಿಣ ಭಾರತದ ಖ್ಯಾತ ನಟರಲ್ಲಿ ಒಬ್ಬರಾಗಿರುವ ಚಿರಂಜೀವಿ ಸದ್ಯ 60 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಮೆಗಾಸ್ಟಾರ್ ತನ್ನ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ. ಮುಂದೆ ಓದಿ...

  ಕೊರೊನಾ ಪರೀಕ್ಷೆಯಲ್ಲಿ ಎಡವಟ್ಟು: ನಟ ಚಿರಂಜೀವಿಗೆ ಕೊರೊನಾ ಸೋಂಕೇ ಇಲ್ಲಕೊರೊನಾ ಪರೀಕ್ಷೆಯಲ್ಲಿ ಎಡವಟ್ಟು: ನಟ ಚಿರಂಜೀವಿಗೆ ಕೊರೊನಾ ಸೋಂಕೇ ಇಲ್ಲ

  'ವೇದಾಲಂ' ರಿಮೇಕ್ ನಲ್ಲಿ ನಟಿಸಲು 60 ಕೋಟಿ ರೂ. ಸಂಭಾವನೆ

  'ವೇದಾಲಂ' ರಿಮೇಕ್ ನಲ್ಲಿ ನಟಿಸಲು 60 ಕೋಟಿ ರೂ. ಸಂಭಾವನೆ

  ತಮಿಳಿನ ಸೂಪರ್ ಹಿಟ್ ವೇದಾಲಂ ಸಿನಿಮಾದ ತಮಿಳು ರಿಮೇಕ್ ನಲ್ಲಿ ನಟ ಚಿರಂಜೀವಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಚಿರಂಜೀವಿ ಬರೋಬ್ಬರಿ 60 ಕೋಟಿ ರೂಪಾಯಿ ಪಡೆಯುತ್ತಿದ್ದಾರಂತೆ. ಅಂದಹಾಗೆ ಚಿರಂಜೀವಿ ಸದ್ಯ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗೆ ಚಿರಂಜೀವಿ 50 ಕೋಟಿ ಸಂಭಾವನೆ ಪಡೆದಿದ್ದಾರಂತೆ.

  ಚಿರಂಜೀವಿ ಪಡೆಯುತ್ತಿರುವ ಸಂಭಾವನೆ

  ಚಿರಂಜೀವಿ ಪಡೆಯುತ್ತಿರುವ ಸಂಭಾವನೆ

  150ನೇ ಸಿನಿಮಾ ಮೂಲಕ ಮತ್ತೆ ವಾಪಸ್ ಆದ ಚಿರಂಜೀವಿ 30 ಸಂಭಾವನೆ ಪಡೆದಿದ್ದರಂತೆ. ಇದೀಗ ಸಂಭಾವನೆ ಡಬಲ್ ಆಗಿದೆ. ಸೈರಾ ನರಸಿಂಹ ರೆಡ್ಡಿ ಸಿನಿಮಾಗೆ 45 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಇದೀಗ ಮೆಗಾಸ್ಟಾರ್ ಸಂಭಾವನೆ 50 ಕೋಟಿ ದಾಟಿದ್ದು, ಮುಂದಿನ ಸಿನಿಮಾಗೆ 60 ಕೋಟಿ ಪಡೆಯುತ್ತಿದ್ದಾರೆ.

  'ಯುವ ರಣಧೀರ ಕಂಠೀರವ' ಟೀಸರ್ ನೋಡಿ ಮೆಚ್ಚಿಕೊಂಡ ಮೆಗಾಸ್ಟಾರ್ ಚಿರಂಜೀವಿ'ಯುವ ರಣಧೀರ ಕಂಠೀರವ' ಟೀಸರ್ ನೋಡಿ ಮೆಚ್ಚಿಕೊಂಡ ಮೆಗಾಸ್ಟಾರ್ ಚಿರಂಜೀವಿ

  ಸದ್ಯದಲ್ಲೇ 'ಆಚಾರ್ಯ' ಸಿನಿಮಾದ ಚಿತ್ರೀಕರಣ ಪ್ರಾರಂಭ

  ಸದ್ಯದಲ್ಲೇ 'ಆಚಾರ್ಯ' ಸಿನಿಮಾದ ಚಿತ್ರೀಕರಣ ಪ್ರಾರಂಭ

  ಇತ್ತೀಚಿಗಷ್ಟೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಬಹಿರಂಗ ಪಡಿಸಿದ್ದರು. ಆದರೆ ಕೊರೊನಾ ಪರೀಕ್ಷೆಯಲ್ಲಿ ಎಡವಟ್ಟಿನಿಂದ ಪಾಸಿಟಿವ್ ಬಂದಿದೆ, ಕೊರೊನಾ ಸೋಂಕು ಇಲ್ಲ, ವರದಿ ನೆಗೆಟಿವ್ ಬಂದಿದೆ ಎಂದು ಚಿರಂಜೀವಿ ಬಹಿರಂಗ ಪಡಿಸಿದ್ದರು. ಇದೀಗ ಆಚಾರ್ಯ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲು ಸಜ್ಜಾಗಿದ್ದಾರೆ. ಈ ತಿಂಗಳ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

  ಪಾರ್ಟ್ನರ್ ಗಳನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ KL Rahul | Filmibeat Kannada
  ರಿಮೇಕ್ ಸಿನಿಮಾಗಳಲ್ಲಿ ಚಿರಂಜೀವಿ ಅಭಿನಯ

  ರಿಮೇಕ್ ಸಿನಿಮಾಗಳಲ್ಲಿ ಚಿರಂಜೀವಿ ಅಭಿನಯ

  ಆಚಾರ್ಯ ಸಿನಿಮಾ ಚಿತ್ರೀಕರಣ ಮುಗಿಯುತ್ತಿದ್ದಂತೆ ವೇದಾಲಂ ಸಿನಿಮಾದ ರಿಮೇಕ್ ನಲ್ಲಿ ನಟಿಸಲಿದ್ದಾರೆ. ಬಳಿಕ ಮಲಯಾಳಂ ಸೂಪರ್ ಹಿಟ್ ಲುಸಿಫರ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ನಲಿ ಚಿರಂಜೀವಿ ಬಳಿ ಕೈತುಂಬ ಸಿನಿಮಾಗಳಿವೆ.

  English summary
  Telugu Actor Chiranjeevi charge 60 crores for his next Vedalam Remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X