For Quick Alerts
  ALLOW NOTIFICATIONS  
  For Daily Alerts

  'ಮೆಗಾ' ಅಭಿಮಾನಿಗಳಿಗೆ ಸಿಹಿ ಸುದ್ದಿ: ಕೈಗೂಡಲಿದೆ ಹಲವು ವರ್ಷಗಳ ಯೋಜನೆ

  |

  'ಮೆಗಾ' ಕುಟುಂಬದ ಅಭಿಮಾನಿಗಳು ಭರ್ಜರಿ ಸಿಹಿ ಸುದ್ದಿ. ಮೆಗಾಸ್ಟಾರ್ ಚಿರಂಜೀವಿ, ಪವರ್ ಸ್ಟಾರ್ ಪವನ್ ಕಲ್ಯಾಣ್ ಒಟ್ಟಿಗೆ ಸಿನಿಮಾದಲ್ಲಿ ನಟಿಸುವ ಸಮಯ ಬಹುತೇಕ ಸಮೀಪಕ್ಕೆ ಬಂದಿದೆ.

  ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಅವರುಗಳು ಒಟ್ಟಿಗೆ ನಟಿಸಬೇಕು ಎಂಬ ಅಭಿಮಾನಿಗಳ ಒತ್ತಾಯ ದಶಕದಿಂದಲೂ ಇದೆ. ಇಬ್ಬರೂ ಒಟ್ಟಿಗೆ ನಟಿಸುತ್ತಾರೆ ಎಂಬ ಸುದ್ದಿಗಳು ಆಗೊಮ್ಮೆ-ಈಗೊಮ್ಮೆ ಹೊರಬೀಳುತ್ತವೆ ಮತ್ತೆ ತಣ್ಣಗಾಗುತ್ತಲೇ ಬಂದಿವೆ. ಆದರೆ ಈ ಬಾರಿ ಹಾಗೆ ಆಗದು.

  ರಾಜಕಾರಣಿ, ನಿರ್ಮಾಪಕರೂ ಆಗಿರುವ ಸುಬ್ರಮಣಿ ರೆಡ್ಡಿ, 'ಏನಾದರಾಗಲಿ ಚಿರಂಜೀವಿ-ಪವನ್ ಕಲ್ಯಾಣ್ ಒಟ್ಟಿಗೆ ನಟಿಸುವ ಸಿನಿಮಾ ನಿರ್ಮಾಣ ಮಾಡಿಯೇ ಮಾಡುತ್ತೇನೆ' ಎಂದು ಟೊಂಕ ಕಟ್ಟಿ ನಿಂತಿದ್ದಾರೆ.

  ಮೂರು ವರ್ಷದ ಹಿಂದೆ ಇದೇ ನಿರ್ಮಾಪಕ ಸುಬ್ರಮಣಿ ರೆಡ್ಡಿ, ಚಿರಂಜೀವಿ-ಪವನ್ ಕಲ್ಯಾಣ್ ಒಟ್ಟಿಗೆ ನಟಿಸುವ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಆದರೆ ಅದೇ ಸಮಯಕ್ಕೆ ಸರಿಯಾಗಿ, ಚಿರು ಮತ್ತು ಪವನ್ ನಡುವೆ ಭಿನ್ನಾಭಿಪ್ರಾಯಗಳು ತಲೆದೂರಿದವು.

  ಹಳೆ ಸಾಹಸಕ್ಕೆ ಮತ್ತೆ ಕೈ ಹಾಕಿದ ರೆಡ್ಡಿ

  ಹಳೆ ಸಾಹಸಕ್ಕೆ ಮತ್ತೆ ಕೈ ಹಾಕಿದ ರೆಡ್ಡಿ

  ಆದರೆ ಈಗ ಎಲ್ಲವೂ ಸರಿಹೋಗಿದ್ದು, ಪವನ್ ಹಾಗೂ ಚಿರಂಜೀವಿ ನಡುವೆ ಮನಸ್ತಾಪ ಕರಗಿದ್ದು, ಪವನ್ ಕಲ್ಯಾಣ್ ಸಹ ಸಕ್ರಿಯವಾಗಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಈಗ ಮತ್ತೆ ತಮ್ಮ ಹಳೆ ಸಾಹಸ ಮುಂದುವರೆಸುತ್ತಿದ್ದಾರೆ ಸುಬ್ರಮಣಿ ರೆಡ್ಡಿ.

  ತ್ರಿವಿಕ್ರಮ್ ನಿರ್ದೇಶಿಸಬೇಕೆಂದು ರೆಡ್ಡಿ ಒತ್ತಾಯ

  ತ್ರಿವಿಕ್ರಮ್ ನಿರ್ದೇಶಿಸಬೇಕೆಂದು ರೆಡ್ಡಿ ಒತ್ತಾಯ

  ಚಿರು ಹಾಗೂ ಪವನ್ ನಟಿಸುವ ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶಿಸಬೇಕು ಎಂಬುದು ಸುಬ್ರಮಣಿ ರೆಡ್ಡಿ ಬಯಕೆ. 2017 ರಲ್ಲಿಯೂ ಅವರು ತ್ರಿವಿಕ್ರಮ್ ಅವರೇ ಆ ಸಿನಿಮಾ ನಿರ್ದೇಶಿಸಲಿದ್ದಾರೆ ಎಂದಿದ್ದರು. ಸಿನಿಮಾದ ಕತೆ ಆಗಲೇ ತಯಾರಿತ್ತಂತೆ ಸಹ.

  ಹಳೆಯ ಪ್ರಾಜೆಕ್ಟ್‌ಗೆ ಮರುಜೀವ ಬಂದಿದೆ

  ಹಳೆಯ ಪ್ರಾಜೆಕ್ಟ್‌ಗೆ ಮರುಜೀವ ಬಂದಿದೆ

  ಇದೀಗ ಹಳೆಯ ಪ್ರಾಜೆಕ್ಟ್‌ಗೆ ಮರುಜೀವ ಬಂದಿದ್ದು, ಸುಬ್ರಮಣಿ ರೆಡ್ಡಿ ಅವರು ತ್ರಿವಿಕ್ರಮ್ ಹಿಂದೆ ಬಿದ್ದಿದ್ದಾರೆ. ಹಳೆಯ ಕತೆಯನ್ನೇ ಕೊಂಚ ತಿದ್ದಿ-ತೀಡಿ ಚಿರಂಜೀವಿ ಹಾಗೂ ಪವನ್ ಅವರಿಗಾಗಿ ನಿರ್ದೇಶಿಸಲಿದ್ದಾರೆ ತ್ರಿವಿಕ್ರಮ್. ಹಾಗೆಂದ ಮಾತ್ರಕ್ಕೆ ಸಿನಿಮಾ ಶೀಘ್ರವಾಗಿ ಸೆಟ್ಟೇರುವುದಿಲ್ಲ. ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಇಬ್ಬರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ 'ಕಬ್ಜ'ದ ಕಥೆ | Filmibeat Kannada
  ಚಿರು-ಪವನ್ ಮುಂದಿನ ಸಿನಿಮಾಗಳಾವುವು?

  ಚಿರು-ಪವನ್ ಮುಂದಿನ ಸಿನಿಮಾಗಳಾವುವು?

  ಪವನ್ ಕಲ್ಯಾಣ್, 'ವಕೀಲ್ ಸಾಬ್' 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್, ಜೊತೆಗೆ ಇನ್ನೂ ಮೂರು ಸಿನಿಮಾಗಳಿಗೆ ಡೇಟ್ಸ್ ಕೊಟ್ಟಿದ್ದಾರೆ. ನಟ ಚಿರಂಜೀವಿ ಪ್ರಸ್ತುತ, 'ಆಚಾರ್ಯ' ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಅದರ ನಂತರ ಮಲಯಾಳಂ ನ 'ಲುಸೀಫರ್' ಸಿನಿಮಾ ರೀಮೇಕ್‌ ನಲ್ಲಿ ನಟಿಸುತ್ತಿದ್ದಾರೆ. ಆ ನಂತರ ಆಟೋ ಜಾನಿ ಸಿನಿಮಾದಲ್ಲಿ ನಟಿಸಲಿದ್ದಾರೆ.

  English summary
  Megastar Chiranjeevi-Pawan Kalyan to act in one movie. Producer and politician Subramani Reddy producing the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X